SUDDILIVE || SHIVAMOGGA
ರೈಲ್ವೆ ಕ್ರಾಸಿಂಗ್ ಹಿನ್ನಲೆ-ಪರ್ಯಾಯ ಮಾರ್ಗ ಸೂಚನೆ-Family Crossing Background - Alternative Route Indication
ಶಿವಮೊಗ್ಗ – ಸಾಗರ ಮಧ್ಯೆ ಮಾರ್ಗದಲ್ಲಿ ನಾಲ್ಕು ಕಡೆ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್‌ಗಳನ್ನು ತೆರೆದು ಪರಿಶೀಲನೆ ನಡೆಸಲಾಗುತ್ತದೆ. ಇದರಿಂದಾಗಿ ಆ ಮಾರ್ಗಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ.
ಜೇಡಿಸರ ರಸ್ತೆ: ಸೆ.22ರ ಬೆಳಗ್ಗೆ 7 ಗಂಟೆಯಿಂದ ಸೆ.23ರ ರಾತ್ರಿ 11 ಗಂಟೆವರೆಗೆ ವಾಹನ ಸಂಚಾರ ನಿಷೇಧ. ಪರ್ಯಾಯ ಮಾರ್ಗ: ಆನಂದಪುರದಿಂದ ಜೇಡಿಸರ ಹಾಗೂ ಸಿದ್ದೇಶ್ವರ ಕಾಲೋನಿಯಿಂದ
ಅಣಲೆಕೊಪ್ಪ ರಸ್ತೆ: ಸೆ.24ರ ಬೆಳಗ್ಗೆ 7 ಗಂಟೆಯಿಂದ ಸೆ.25ರ ರಾತ್ರಿ 11 ಗಂಟೆವರೆಗೆ ವಾಹನ ಸಂಚಾರ ನಿಷೇಧ. ಪರ್ಯಾಯ ಮಾರ್ಗ: ಸಾಗರದ ಸೊರಬ ರಸ್ತೆಯ (ಅಣಲೆಕೊಪ್ಪದಿಂದ ಸಾಗರ ಸಿಟಿ ಹಾಗೂ ಸಾಗರ ಸಿಟಿಯಿಂದ ಅಣಲೆಕೊಪ್ಪ)
ಹೊಸೂರು ರಸ್ತೆ: ಸೆ.26ರ ಬೆಳಗ್ಗೆ 7 ಗಂಟೆಯಿಂದ ಸೆ.26ರ ರಾತ್ರಿ 11 ಗಂಟೆವರೆಗೆ ವಾಹನ ಸಂಚಾರ ನಿಷೇಧ. ಪರ್ಯಾಯ ಮಾರ್ಗ: ಆನಂದಪುರದಿಂದ ಹೊಸೂರು, ಯಡೇಹಳ್ಳಿಯಿಂದ ಆಡೂರು ಕೋಣನತಲೆ ಹೊಸೂರು ಆನಂದಪುರದಿಂದ ಸಾಗರ ಮಾರ್ಗ. ಯಡೇಹಳ್ಳಿಯಿಂದ ಬಟ್ಟೆಮಲ್ಲಪ್ಪ ಸಾಗರ ಮಾರ್ಗ.
ತ್ಯಾಗರ್ತಿ ರಸ್ತೆ: ಸೆ.28ರ ಬೆಳಗ್ಗೆ 7 ಗಂಟೆಯಿಂದ ಸೆ.29ರ ರಾತ್ರಿ 11 ಗಂಟೆವರೆಗೆ ವಾಹನ ಸಂಚಾರ ನಿಷೇಧ. ಪರ್ಯಾಯ ಮಾರ್ಗ: ಸಾಗರದಿಂದ ತ್ಯಾಗರ್ತಿ ಮಾರ್ಗ. ಸಾಗರ – ಕಲಸೆ – ಬೊಮ್ಮಟ್ಟೆ ತ್ಯಾಗರ್ತಿ. ಉಳ್ಳೂರು – ಕಾಸ್ಪಾಡಿ – ಅಡ್ಡೇರಿ – ಬಿಳಗುಂಡಿ – ನಿಚಡಿ – ತ್ಯಾಗರ್ತಿ, ಕಲಸೆ – ಬೊಮ್ಮಟ್ಟಿ ತ್ಯಾಗರ್ತಿ. ಬಳಸಗೋಡು – ಮಂಚಾಲೆ – ಬೊಮ್ಮಟ್ಟೆ – ತ್ಯಾಗರ್ತಿ ರಸ್ತೆ ಮೂಲಕ ಸಾಗಲು ಸೂಚಿಸಲಾಗಿದೆ.
Family Crossing Background - Alternative Route Indication
