ತ್ಯಾವರೆಕೊಪ್ಪಕ್ಕೆ ಶೀಘ್ರದಲ್ಲಿಯೇ ನೂತನ ಅತಿಥಿಗಳ ಆಗಮನ- New guests to arrive at Tyavarekoppa soon

 SUDDILIVE || SHIVAMOGGA

ತ್ಯಾವರೆಕೊಪ್ಪಕ್ಕೆ ಶೀಘ್ರದಲ್ಲಿಯೇ ನೂತನ ಅತಿಥಿಗಳ ಆಗಮನ-New guests to arrive at Tyavarekoppa soon

Tyaverakoppa, guest



ತ್ಯಾವರೆಕೊಪ್ಪ  ಹುಲಿ ಮತ್ತು ಸಿಂಹಧಾಮಕ್ಕೆ ನೂತನ ಅತಿಥಿಗಳ ಆಗಮನಕ್ಕೆ ದಿನಾಂಕ ನಿಗದಿಯಾಗಿದೆ. ದಸರಾ ಹಬ್ಬದ ಸಂದರ್ಭ ಇಲ್ಲಿನ ಮೃಗಾಲಯಕ್ಕೆ ಇಂದೋರ್‌ ಮತ್ತು ಔರಂಗಾಬಾದ್‌ನಿಂದ ಪ್ರಾಣಿಗಳು ಆಗಮಿಸಲಿವೆ.

ಈ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದ ಸಿಇಒ ಅಮರಾಕ್ಷರ, ಇಂದೋರ್‌ ಮತ್ತು ಔರಂಗಾಬಾದ್‌ ಮೃಗಾಲಯದ ಅಧಿಕಾರಿಗಳು ಇಂದು ತ್ಯಾವರೆಕೊಪ್ಪದ ಮೃಗಾಲಯಕ್ಕೆ ಭೇಟಿ ನೀಡಿದ್ದರು. ಪ್ರಾಣಿಗಳ ವಿನಿಮಯಕ್ಕೆ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.ಶಿವಮೊಗ್ಗ ಮೃಗಾಲಯದ ಅಧಿಕಾರಿಗಳು ಆಗಸ್ಟ್‌ ತಿಂಗಳಲ್ಲಿ ಇಂದೋರ್‌ ಮತ್ತು ಔರಂಗಾಬಾದ್‌ ಮೃಗಾಲಯಗಳಿಗೆ ಭೇಟಿ ನೀಡಿದ್ದರು.

ಪ್ರಾಣಿಗಳ ವಿನಿಮಯ ಯೋಜನೆ ಅಡಿ ದಸರಾ ಹಬ್ಬದ ಸಂದರ್ಭದಲ್ಲೆ ಹೊಸ ಪ್ರಾಣಿಗಳು ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಾಧಾಮಕ್ಕೆ ಆಗಮಿಸಲಿವೆ. ಅ.2ರಂದು ಪ್ರಾಣಿಗಳು ಆಗಮಿಸುತ್ತವೆ ಎಂದು ಅಮರಾಕ್ಷರ ತಿಳಿಸಿದ್ದಾರೆ.

ಔರಂಗಾಬಾದ್‌ ಮೃಗಾಲಯದಿಂದ 1 ಗಂಡು ಬಿಳಿ ಹುಲಿ, 2 ಹೆಣ್ಣು ಬೆಂಗಾಲ್‌ ಟೈಗರ್ಸ್‌, ಇಂದೋರ್‌ ಮೃಗಾಲಯದಿಂದ ಒಂದು ಗಂಡು ಮತ್ತು ಒಂದು ಹೆಣ್ಣು ಸಿಂಹ, ಒಂದು ಗಂಡು ಬೆಂಗಾಲ್‌ ಟೈಗರ್‌ ಬರಲಿವೆ.

ತ್ಯಾವರೆಕೊಪ್ಪ ಮೃಗಾಲಯದಿಂದ ಸೆ.25ರಂದು ಕೆಲವು ಪ್ರಾಣಿಗಳನ್ನು ಇಂದೋರ್‌ ಮತ್ತು ಔರಂಗಾಬಾದ್‌ ಮೃಗಾಲಯಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ.

ಔರಂಗಾಬಾದ್‌ ಮೃಗಾಲಯಕ್ಕೆ ಒಂದು ಗಂಡು ಮತ್ತು ಒಂದು ಹೆಣ್ಣು ಸಿಂಹ, ಒಂದು ಕರಡಿ, ಒಂದು ಗಂಡು ಮತ್ತು ಒಂದು ಹೆಣ್ಣು ನರಿಯನ್ನು ರವಾನಿಸಲಾಗುತ್ತಿದೆ. ಇಂದೋರ್‌ ಮೃಗಾಲಯಕ್ಕೆ ಒಂದು ಕಾಡುಕೋಣ, ಎರಡು ಗಂಡು ಮತ್ತು ಎರಡು ಹೆಣ್ಣು ಆಸ್ಟ್ರಿಚ್‌ಗಳನ್ನು ರವಾನಿಸಲಾಗುತ್ತಿದೆ ಎಂದು ಅಮರಾಕ್ಷರ ತಿಳಿಸಿದ್ದಾರೆ.  

New guests to arrive at Tyavarekoppa soon


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close