SUDDILIVE || SHIVAMOGGA
ಮುಂದಿನ ಯಾವುದೇ ಚುನಾವಣೆಯನ್ನ ಸ್ಪರ್ಧಿಸೊಲ್ಲ-ಗೀತಾ ಶಿವರಾಜ್ ಕುಮಾರ್ ಘೋಷಣೆ-Geetha Shivraj Kumar declares that she will not contest any further elections
ಮುಂದಿನ ಯಾವುದೇ ಚುನಾವಣೆಗೆ ಸ್ಪರ್ಧಿಸೊಲ್ಲ ಎಂದು ನಿರ್ದೇಶಕಿ ಹಾಗೂ ನಟ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಘೋಷಿಸಿದ್ದಾರೆ.
ನಗರದ ಬಂಜಾರ ಕನ್ವೆಷನಲ್ ಹಾಲ್ ನಲ್ಲಿ ನೂತನವಾಗಿ ಆಯ್ಕೆಯಾದ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷೆ ಶ್ವೇತಾ ಬಂಡಿ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಗೀತಾರವರಿಂದ ಈ ಘೋಷಣೆ ಮೊಳಗಿದೆ. ಚುನಾವಣೆಯ ಸಂದರ್ಭವಿಲ್ಲದಿದ್ದರೂ ಅವರ ಈ ಘೋಷಣೆ ರಾಜಕೀಯ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ.
ಎರಡು ಬಾರಿ ಶೊವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಗೀತಾ ಶಿವರಾಜ್ ಕುಮಾರ್ ಒಮ್ಮೆ ಜೆಡಿಎಸ್ ಮತ್ತೊಮ್ಮೆ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದರು. ಯಾವುದೇ ಚುನಾವಣೆಯಲ್ಲಿ ಗೆದ್ದಿರಲಿಲ್ಲ. ಆದರೆ ತೀವ್ರಸೆಣಸಾಟದ ಪೈಪೋಟಿ ನೀಡಿದ್ದರು. ಒಮ್ಮೆ ಬಿಎಸ್ ವೈ ಮತ್ತೊಮ್ಮೆ ಹಾಲಿ ಸಂಸದರಿಗೆ ತೀವ್ರ ಪೈಪೋಟಿ ನೀಡಿ ಈಗ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.
ಎಲ್ಲರನ್ನೂ ಜೊತೆ ಕರೆದುಕೊಂಡು ಹೋಗಿ. ಶ್ವೇತಾರನ್ನ ಸಣ್ಣ ಹುಡುಗಿಯಿಂದಲೂ ನೋಡಿಕೊಂಡು ಬಂದಿದ್ದೇನೆ. ಮುಂದೆ ಚುನಾವಣೆ ಸ್ಪರ್ಧಿಸೊಲ್ಲ ಎಂದು ಗೀತಾ ಶಿವರಾಜ್ ಕುಮಾರ್ ಘೋಷಿಸಿದ್ದಾರೆ. ತಮ್ಮ ಜವಬ್ದಾರಿ ಯಿಂದ ಕೆಲಸ ಮಾಡಿ ಎಂದು ಕರೆ ನೀಡಿದರು.
ಬೆಂಗಳೂರಿನಲ್ಲಿ ಕೆಲಸ ಇದ್ದಿದ್ದರಿಂದ ಬರಲು ಆಗಿರಲಿಲ್ಲ. ಯಾವುದೇ ಕಾರ್ಯಕ್ರಮ ಇದ್ದರೂ ಕರೆಯಿರಿ ಬರುತ್ತೇನೆ ಎಂದರು.
ಶಿವಮೊಗ್ಗದಲ್ಲಿ ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ವೇತಾ ಬಂಡಿ ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಹಿಂದಿನ ಅಧ್ಯಕ್ಷೆ ಅನಿತಾ ಕುಮಾರಿ ಅವರಿಂದ ಕಾಂಗ್ರೆಸ್ ಬಾವುಟ ಪಡೆದ ಶ್ವೇತಾ ಬಂಡಿ ಅಧಿಕಾರ ಸ್ವೀಕರಿಸಿದ್ದಾರೆ.
ಅಧಿಕಾರ ಹಸ್ತಾಂತರ ಮಾಡಿ ಮಾತನಾಡಿದ ಅನಿತಾ ಕುಮಾರಿ ಅಧಿಕಾರ ಎಂಬುದು ಜವಬ್ದಾರಿಯಾಗಿದೆ. ನನ್ನ ಅಧಿಕಾರದ ಅವಧಿಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರಲಿಲ್ಲ. ಆದರೂ ನನ್ನ ಅಧಿಕಾರದ ಅವಧಿಯಲ್ಲಿ ಶಾಸಕರ, ಸಂಸದರ ಚುನಾವಣೆ ಸೇರಿ ಹಲವು ಚುನಾವಣೆ ಎದುರಿಸಿದ್ದೇವೆ. ಶ್ವೇತಾ ಬಂಡಿ ಜಿಪಂ ಸದಸ್ಯರಾಗಿ ಜಿಲ್ಲಾಧ್ಯಕ್ಷರಾಗಿದ್ದಾರೆ. ನಿಮ್ಮ ನೇತೃತ್ವದಲ್ಲಿ ನಾವು ಮುಂದಿನಹೋರಾಟ ನಡೆಸುತ್ತೇವೆನಡೆಸುತ್ತೇವೆ ಎಂದರು.
Geetha Shivraj Kumar declares that she will not contest any further elections
