SUDDILIVE ||SHIVAMOGGA
ಶೋಷಿತ ಮಹಿಳೆಯರ ಧ್ವನಿ ಯಾಗುವುದು ನನ್ನ ಉದ್ದೇಶ- ಶ್ವೇತಾ ಬಂಡಿ-My aim is to be the voice of exploited women - Shweta Bandi
ಇದೊಂದು ಐತಿಹಾಸಿಕ ಕ್ಷಣ. ತುಂಗಾ ಭದ್ರ ನದಿಗಳ ಶಕ್ತಿಯ ಹಾಗೆ ಮಹಿಳಾ ಶಕ್ತಿಯ ನಡುವೆ ನಾನು ಅಧಿಕಾರ ಸ್ವೀಕರಿಸಿದ್ದು ಅತ್ಯಂತ ಐತಿಹಾಸಿಕ ಕ್ಷಣ ಎಂದು ನೂತನ ಅಧ್ಯಕ್ಷೆ ಶ್ವೇತಾ ಬಂಡಿ ತಿಳಿಸಿದರು.
ಅವರು ನಗರದ ಬಂಜಾರ ಕನ್ವೆಷನಲ್ ಹಾಲ್ ನಲ್ಲಿ ಕಾಂಗ್ರೆಸ್ ಜಿಲ್ಲಾ ಮಹಿಳಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿ, ನಾನು ಇದೊಂದು ಅಧಿಕಾರ ಎಂದು ಭಾವಿಸುವುದಿಲ್ಲ. ಇದೊಂದು ಜವಾಬ್ದಾರಿ ಎಂದುಭಾವಿಸುವೆ. ಯಾಕೆಂದರೆ ಧ್ವನಿಇಲ್ಲದ ಶೋಷಿತ ಮಹಿಳೆಯರ ಧ್ವನಿ ಯಾಗುವುದು ನನ್ನ ಉದ್ದೇಶ. ಈ ನಿಟ್ಟಿನಲ್ಲಿ ನಾನು ಜವಾಬ್ದಾರಿ ಎಂದುಭಾವಿಸಿದ್ದೇನೆ ಎಂದರು.
ದೇಶದಲ್ಲಿ ಮಹಿಳೆಯರ ದೊಡ್ಡ ಶಕ್ತಿ ಎಂದರೆ ಇಂದಿರಾಗಾಂಧಿ ಅವರು ಆಗಿದ್ದಾರೆ. ಅವರ ಸ್ಲೂರ್ತಿಯೇ ಇವತ್ತು ಕಾಂಗ್ರೆಸ್ ಪಕ್ಷದಲ್ಲಿಮಹಿಳೆಯರು ಗುರುತಿಸಿಕೊಳ್ಳಲು ಸಾಧ್ಯ ವಾಗಿದೆ.ಮಹಿಳಾ ಸಬಲೀಕರಣ ಎನ್ನುವುದು ಕೇವಲ ವಾಖ್ಯ ಆಗಬಾರದು, ಘೋಷಣೆ ಆಗಬಾರದು.ಅದು ಅವಳಬದುಕಿನ ಭಾಗವಾಗಿಇರಬೇಕು. ಇದುಕುಟುಂಬದಿಂದ ಹಿಡಿದು ರಾಜಕಾರಣದ ವರೆಗೂ ಕೂದ ಇದು ಅನ್ವಯ ವಾಗಬೇಕಿದೆ ಎಂದು ಹೇಳಿದರು.
ಮಹಿಳೆಯರ ರಾಜಕಾರಣಕ್ಕೆಕೇವಲ ಮೀಸಲಾತಿ ಮಾತ್ರ ಪೂರಕವಲ್ಲ, ಅಕೆಯ ಕುಟುಂಬದ ಬೆಂಬಲ, ಪ್ರೋತ್ಸಾಹವೂ ಕಾರಣ. ಅದಕ್ಕೆ ನನ್ನ ಹಿನ್ನೆಲೆ ಯೇ ಸಾಕ್ಷಿ. ಕಾಂಗ್ರೆಸ್ ಪಕ್ಷಕ್ಕೆ ನನ್ನಕುಟುಂಬದ ಕೊಡುಗೆ ದೊಡ್ಡ ದು. ಆ ಕಾರಣಕ್ಕೆ ಎನಾದರೂ ಕೊಡುಗೆ ನೀಡಬೇಕೆಂದು ಪಕ್ಷ ಯೋಚಿಸಿದ್ದಾಗ ನನ್ನ ಕ್ಷೇತ್ರ ಮಹಿಳಾ ಪ್ರತಿನಿಧಿಗೆ ಮೀಸಲಾಯಿತು. ಆಗ ನನ್ನಪ್ಪ, ನನ್ನ ಗಂಡನ ಮನೆಯವರು ನನಗೆ ಕೊಟ್ಟಸಹಕಾರದಿಂದ ನಾನು ಜಿಲ್ಲಾ ಪಂಚಾಯತ್ ಸದಸ್ಯನಾದೆ. ಈ ಬೆಂಬಲ ಇಲ್ಲದೆ ಹೋಗಿದ್ದರೆ ನಾನು ರಾಜಕೀಯ ಕ್ಷೇತ್ರಕ್ಕೆ ಬರಲಾಗುತ್ತಿಲ್ಲ ಎಂದು ವಿವರಿಸಿದರು.
ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ ಮಾತನಾಡಿ, ಇದು ದೊಡ್ಡ ಜವಾಬ್ದಾರಿ. ನಾವು ಈ ಸಮಾಜದಲ್ಲಿ ಶೇ ೫೦ ರಷ್ಟು ಇದ್ದೇವೆ. ಆದರೂ ಈಗಲೂ ನಮ್ಮ ಹಕ್ಕುನಪಡೆಯಬೇಕಾದರೆ ಹೋರಾಟ ಮಾಡಲೇ ಬೇಕಿದೆ.ಆದರೂ ನಮಗೆ ಮಹಿಳಾಮೀಸಲಾತಿಬರುವುದಕ್ಕೆ ಕಾರಣ ಮಾಜಿಪ್ರಧಾನಿ ರಾಜೀವ್ ಗಾಂಧಿ. ಅವರು ಕೊಟ್ಟ ಕೊಡುಗೆ ಮಹಿಳಾ ಮೀಸಲಾತಿ. ಆದಷ್ಟು ಬೇಗ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಬರುಬಹುದು.ನಮ್ಮ ಗ್ಯಾರೆಂಟಿ ಯೋಜನೆಗಳ ನ್ನು ಜನರಿಗೆ ತಿಳಿಸಬೇಕಿದೆ.
೧೬ ಪರ್ಸೆಂಟ್ ಮಹಿಳೆಯರಿಗೆ ಒಳ್ಳೆಯನಕೆಲಸ ಸಿಕ್ಕಿದೆ. ಒಳ್ಳೆಯ ಉದ್ಯೋಗ ಸಿಕ್ಕಿದೆ.ಮಕ್ಕಳಿಗೆ ಒಳ್ಳೆಯ ಓದುವ ಪರಿಕರ ಕೊಡಿಸಿದ್ದಾರೆ. ನಾನು ಮುಖಂಡರಿಗೆ ಇದು ಎಲ್ಲರೂಕೈ ಜೋಡಿಸಿದರಿಂದಲೇ ಕೆಲಸ ಮಾಡುವುದಕ್ಕೆ ಸಾಧ್ಯ. ಆರೋಗ್ಯ, ಶಿಕ್ಷಣ ದಂತಹ ಹಲವು ಯೋಜನೆಗಳ ಮೂಲಕ ಮಹಿಳಾ ಸಬಲೀಕರಣ ಆಗಿದೆ ಎಂದರು.
ನಾನು ಪ್ರತಿನಿಧಿಸುವ ಜಯನಗರ ವಿಧಾನ ಸಭಾ ಕ್ಷೇತ್ರದಲ್ಲಿ ಮತಗಳ್ಳತನ ಆಗಿದೆ. ಬಿಜೆಪಿಯವರು ಧರ್ಮ, ಜಾತಿಹೆಸರಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ.ಅವರಿಗೆ ಸರಿಯಾದ ಉತ್ತರ ಕೊಡಬೇಕಿದೆ. ಮತ ಚೋರಿ ವಿರುದ್ಧ ದೇಶದಲ್ಲಿ ರಾಹುಲ್ ಗಾಂಧಿ ಕ್ರಾಂತಿಯನ್ನೇ ಎಬ್ಬಿಸಿದ್ದಾರೆ. ಜಯನಗೆದಲ್ಲೂಮತಗಳ್ಳತನ ಆಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಚಿವ ಮಧು ಬಂಗಾರಪ್ಪ, ಶಾಸಕ ಗೋಪಾಲಕೃಷ್ಣ ಬೇಳೂರು, ಕೆಪಿಸಿಸಿ ಕಾರ್ಯದರ್ಶಿ ಮಂಜುನಾಥ ಬಂಡಾರಿ, ವಕ್ತಾರ ಆಯನೂರು ಮಂಜುನಾಥ್, ಎಂಎಲ್ ಸಿ ಬಲ್ಕಿಷ್ ಭಾನು ನಿಗಮದ ಅಧ್ಯಕ್ಷೆ ಪಲ್ಲವಿ ಮೊದಲಾದವರು ಉಪಸ್ಥಿತರಿದ್ದರು.
My aim is to be the voice of exploited women - Shweta Bandi
