SUDDILIVE || SHIVAMOGGA
ಲಕ್ಕಿನಕೊಪ್ಪದಲ್ಲಿ ಕಾಡುಪ್ರಾಣಿಗಳ ಭೇಟೆ-ನಿದ್ದೆಗೆ ಜಾರಿದ ಇಲಾಖೆ? Wild animal poaching in Lakkinakoppa - Department asleep?
ಇದು ವೈಲ್ಡ್ ಲೈಫ್ ರೇಂಜ್ ನಲ್ಲಿ ನಡೆಯುತ್ತಿರುವ ಅನಿಮಲ್ ಹಂಟಿಂಗ್ ಸ್ಟೋರಿ.ಅರಣ್ಯ ರಕ್ಷಕರ ಕರಿನೆರಳಿನಲ್ಲಿ ಕಳ್ಳ ಬೇಟೆಗಾರರ ಕಳ್ಳ ಹೆಜ್ಜೆಯ ಸ್ಟೋರಿಯಿದು.
ಅಭಯಾರಣ್ಯದಲ್ಲಿ ಕಳ್ಳ ಬೇಟೆಗಾರರು ಸಕ್ರಿಯರಾಗಿದ್ದಾರೆ. ಆಹಾರ ಮೂಲ ಹುಡುಕಿ ಬರುವ ಕಾಡು ಪ್ರಾಣಿಗಳಿಗೆ ಕಳ್ಳ ಬೇಟೆಗಾರರಿಂದ ಸಂಚಕಾರ ನಡೆದಿದೆ. ಅಭಯಾರಣ್ಯದಲ್ಲಿ ಜಿಂಕೆಗಳು ಮತ್ತು ಕಾಡು ಹಂದಿ, ಕಾಡು ಕೋಳಿ, ಮೊಲಗಳ ಆಕ್ರಮ ಬೇಟೆಯಾಡಿರುವ ಘಟನೆ ನಡೆದಿದೆ.
ಜಿಂಕೆ ಬೇಟೆಯಾಡಿ ಮಾಂಸ, ಚರ್ಮ, ಕೊಂಬುಗಳ ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ.
ವನ್ಯಜೀವಿ ಬೇಟೆಗೆ ಅಕ್ರಮವಾಗಿ ನಾಡ ಬಾಂಬು ಮತ್ತು ಕಬ್ಬಿಣದ ತಂತಿಯ ಉರುಳು ಗಳ ಬಳಕೆಯಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಸಿಕ್ಕಿದೆ ನಾಡ ಮದ್ದುಗುಂಡು ಮತ್ತು ಉರುಳು ಬಳಸಿದ್ದಕ್ಕೆ ಸಾಕ್ಷಿ ದೊರೆತಿದೆ. ಕಾರ್ಗತ್ತಲ ರಾತ್ರಿಯಲ್ಲಿ ಬೆಳಕು ಹರಿಯುವ ಮುನ್ನವೇ ಕಳ್ಳ ಬೇಟೆಯ ಜಾಲದ ಬಗ್ಗೆ ಸಾಕ್ಷಿ ದೊರೆತಿದೆ.
ಭದ್ರಾ ಅಭಯಾರಣ್ಯ ವ್ಯಾಪ್ತಿಯ ಉಂಬ್ಳೆಬೈಲು ಅರಣ್ಯ ವಿಭಾಗದ ಲಕ್ಕಿನಕೊಪ್ಪ ಅರಣ್ಯದಲ್ಲಿ ಅಕ್ರಮ ಕಳ್ಳ ಬೇಟೆ ಜಾಲ ಪತ್ತೆಯಾಗಿದೆ. ಅಭಯಾರಣ್ಯದಲ್ಲಿ ನಡೆದಿದೆ ಜಿಂಕೆಗಳು, ಕಾಡು ಹಂದಿಗಳ ಮಾರಣ ಹೋಮ ನಡೆದಿದೆ.
ಕಳ್ಳ ಬೇಟೆಗೆ ಬಳಸುವ ಅರಣ್ಯದಲ್ಲಿ ನಾಡ ಬಾಂಬು, ಕಬ್ಬಿಣದ ತಂತಿಯ ಉರುಳು, ಜಿಂಕೆಯ ಮೂಳೆ, ಚರ್ಮ ಎಲ್ಲವೂ ಪತ್ತೆಯಾಗಿವೆ. ಎಲ್ಲೆಂದರಲ್ಲಿ ಬಿದ್ದಿವೆ ವನ್ಯಜೀವಿ ಜಿಂಕೆಯ ಅಸ್ತಿಪಂಜರಗಳ ಅವಶೇಷ ಲಭ್ಯವಾಗಿದೆ.
ಅಕ್ರಮ ಕಳ್ಳ ಬೇಟೆ ಜಾಲ ತಡೆಯಲು ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳು ವಿಫಲರಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಅರಣ್ಯ ಇಲಾಖೆಯ ವೈಫಲ್ಯಕ್ಕೆ ಜಿಂಕೆ, ಕಾಡು ಹಂದಿ ,ಮೊಲ, ಕಾಡು ಕೋಳಿ ಸಿಲುಕಿ ಬಲಿಯಾಗುತ್ತಿದೆ. ಕಳ್ಳ ಭೇಟಿಯ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದರು ಅರಣ್ಯ ಇಲಾಖೆ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಕಳ್ಳ ಬೇಟೆಗಾರರ ಜೊತೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಶಾಮೀಲಾಗಿರುವ ಕೆ ವ್ಯಕ್ತವಾಗುತ್ತಿದೆ.
ಕಾಡುಪ್ರಾಣಿಗಳ ಹತ್ಯೆ ಮತ್ತು ಸಾಗುವಾನಿ ನಾಟಾ ಅಕ್ರಮ ಕಳ್ಳ ಸಾಗಾಣಿಕೆ ಬಗ್ಗೆ ಸ್ಥಳೀಯರಿಂದ ಮಾಹಿತಿ ನೀಡಲಾಗಿದ್ದರೂ ಕ್ರಮ ಜರುಗಿಸದೆ ಇಲಾಖೆ ನಿರ್ಲಕ್ಷಕ್ಕೆ ಇಳಿದಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಘಟನೆ ನಡೆದ ಮೇಲೆ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ತೆರಳಿದ್ದಾರೆ. ಆದರೆ ಘಟನೆಗೂ ಮುನ್ನ ಸಿಬ್ಬಂದಿಗಳ ಬೀಟ್ ನಡೆದಿತ್ತಾ ಎಂಬ ಅನುಮಾನ ವ್ಯಕ್ತವಾಗಿದೆ.
Wild animal poaching in Lakkinakoppa - Department asleep?
