SUDDILIVE || SHIVAMOGGA
ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವಕ್ಕೆ ಚಾಲನೆ-Hindu Mahasabha launches Ganapati Rajbeedi utsav
ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವ ಒ್ರಾರಂಭಗೊಂಡಿದೆ ಸುಮಾರು 11 ಗಂಟೆಗೆ ಗಣಪತಿಯ ಮೂರ್ತಿಯ ಮೆರವಣಿಗೆ ಆರಂಭಗೊಂಡಿದ್ದು ಕೋಟೆ ಮಾರಿಕಾಂಬ ದೇವಸ್ಥಾನಕ್ಕೆ ಆಗಮಿಸಿದೆ.
ಶಾಸಕ ಚೆನ್ನಬಸಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್ ಪ್ರಸನ್ನ ಕುಮಾರ್, ಎಂ.ಶ್ರೀಕಾಂತ್ ಮೊದಲಾದವರು ಈ ವೇಳೆ ಭಾಗಿಯಾಗಿದ್ದರು. ಹಣ್ಣಿನ ಹಾರ, ಹೂವಿನ ಹಾರದೊಂದಿಗೆ, ಜಾನಪದ ಕಲಾ ಮೇಳ, ಹುಲಿವೇಷದಿಂದ ಹೊರಟ ಮೆರವಣಿಗೆಯಲ್ಲಿ ಡೊಳ್ಳು ನೃತ್ಯ, ಕೀಲುಗೊಂಬೆ, ಡೊಳ್ಳು ಮೊದಲಾದ ಮಂಗಳವಾದದೊಂದಿಗೆ ಹೊರಟಿದೆ.
ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಅನ್ನ ಸಂತರ್ಪಣೆ ಮೊದಲಾದ ವ್ಯವಸ್ಥೆಗಳು ಮೆರವಣಿಗೆ ಆರಂಭದಿಂದಲೇ ಆರಂಭಗೊಂಡಿವೆ. ವಿವಿಧ ಸಂಘ ಸಂಸ್ಥೆಗಳು ಬಹಳ ಅಚ್ಚುಕಟ್ಟಾಗಿ ಪ್ರಸಾದ ವಿತರಣೆಯಲ್ಲಿ ತೊಡಗಿವೆ. ಈ ವೇಳೆ ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ.
Hindu Mahasabha launches Ganapati Rajbeedi utsav
