SUDDILIVE || SHIVAMOGGA
ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವದಲ್ಲಿ ರಾರಾಜಿಸಿದ ಭಗತ್ ಸಿಂಗ್, ವೀರೇಂದ್ರ ಹೆಗಡೆ ಮತ್ತು ನಟ ಮತ್ತು ದರ್ಶನ್ ಫೊಟೊ-veerendra Hegde Bhagath singh and Darshan's photo at the Hindu Mahasabha Ganapati Rajbeedi utsav
81 ನೇ ಹಿಂದೂ ಮಹಾಮಂಡಳಿ ಸಮಿತಿಯ ಗಣಪತಿ ರಾಜಬೀದಿ ಉತ್ಸವದಲ್ಲಿ ಡಿ ಬಾಸ್ ಅಭಿಮಾನಿಗಳು ದರ್ಶನ್ ಫೋಟೊ ಹಿಡಿದು ಬಂದರೆ, ಶಾಸಕ ಚೆನ್ನಬಸಪ್ಪ ವೀರೇಂದ್ರ ಹೆಗಡೆಯವರ ಫೊಟೊ ಹಿಡಿದು ಅಭಿಮಾನಿಗಳ ಹೆಗಲೇರಿರುವ ದೃಶ್ಯ ಕಂಡು ಬಂದಿದೆ. ಅದರಂತೆ ಭಗತ್ ಸಿಂಗ್ ಫೋಟೊಗಳು ಸಹ ರಾಜಬೀದಿ ಉತ್ಸವದಲ್ಲಿ ಕಂಡು ಬಂದಿದೆ. ಗಣಪತಿ ಮೆರವಣಿಗೆ ಇನ್ನೂ ಬಸವೇಶ್ವರ ದೇವಸ್ಥಾನದ ಬಳಿಯಿದೆ.
ಜಾಮೀಯ ಮಸೀದಿಯ ಬಳಿ ನಟ ದರ್ಶನ ಅಭಿಮಾನಿಗಳು ದರ್ಶನ್ ಫೋಟೊ ಹಿಡಿದು ಮೆರವಣಿಗೆಯಲ್ಲಿ ಭಾಗಿಯಾಗಿರುವುದು ವಿಶೇಷವಾಗಿದೆ. ಅದರಂತೆ ಹಿಂದೂ ಸಂಘಟಕರು ಭಗತ್ ಸಿಂಗ್ ಪೋಟೊ ಹಿಡಿದು ಬಂದರೆ, ವೀರೇಂದ್ರ ಹೆಗಡೆಯನ್ನ ಶಾಸಕ ಚೆನ್ನಿ ಹಿಡಿದು ತೋರಿಸಿರುವುದು ಕಂಡು ಬಂದಿದೆ.
ಜಾಮೀಯ ಮಸೀದಿ ಬಳಿ ಬರುತ್ತಿದ್ದ ಕೆಲ ಯುವಕರ ಗುಂಪು ಬಾವುಟ ಹಿಡಿದು ಘೋಷಣೆಗಳನ್ನ ಕೂಗುತ್ತಿದ್ದರು. ಆ ವೇಳೆ ಹಿಂದೆಯೇ ಇದ್ದ ಎಸ್ಪಿ ಮಿಥುನ್ ಕುಮಾರ್ ಆ ಯುವಕರನ್ನ ಚದುರಿಸಿದ್ದಾರೆ. ನಂತರ ಮುಂದೆ ಬಂದ ಆ ಯುವಕರ ತಂಡ ಕರ್ಪೂರ ಹಚ್ಚಿ ಧ್ವಜ ಹಾರಿಸಿ ಕರ್ಪೂರವನ್ನ ಸುಟ್ಟಿದ್ದಾರೆ.
ಇನ್ನೊಂದು ಬಿಜೆಪಿ ಮಹಿಳಾ ತಂಡ ಜಾಮೀಯ ಮಸೀದಿ ಬಳಿ ಬರುತ್ತಿದ್ದಂತೆ ಪೊಲೀಸರು ಅವರನ್ನ ಮುಂದೆ ಸಾಗಲು ತಿಳಿಸಿದ್ದಾರೆ. ಆ ವೇಳೆ ಮುಂದೆ ಚಲಿಸದ ಮಹಿಳಾ ತಂಡ ಅಲ್ಲೇ ಕರ್ಪೂರ ಹಚ್ಚಿ ಘೋಷಣೆ ಕೂಗಿದ್ದಾರೆ.
Darshan's photo at the Hindu Mahasabha Ganapati Rajbeedi Utsav



