SUDDILIVE || SORABA
ಮೆರವಣಿಗೆ ವೇಳೆ ಕುಸಿದು ಬಿದ್ದ ಇನ್ ಸ್ಪೆಕ್ಟರ್, Inspector collapses during procession
ಗಣಪತಿ ಮೆರವಣಿಗೆ ವೇಳೆ ಇನ್ ಸ್ಪೆಕ್ಟರ್ ಅವರೊಬ್ಬರು ಕುಸಿದು ಬಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕುಸಿದು ಬೀಳುವ ವೀಡಿಯೋವೊಂದು ವೈರಲ್ ಆಗುತ್ತಿದ್ದು, ಗುರುವಾರ ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ನಡೆದ ಗಣಪತಿ ಮೆರವಣಿಗೆಯ ಸಮಯದಲ್ಲಿ ಘಟನೆ ನಡೆದಿದೆ.
ಸೊರಬ ಮುಖ್ಯ ರಸ್ತೆಯಲ್ಲಿ ನಡೆದ ಗಣಪತಿ ಮೆರವಣಿಗೆಯಲ್ಲಿ ಬರುತ್ತಿರುವಾಗ ಮೆರವಣಿಗೆಯಲ್ಲಿ ನಿಂತಿದ್ದ ಇನ್ಸ್‌ಪೆಕ್ಟರ್ ರಾಜಶೇಖರ್ ಅವರು ಅಸ್ವಸ್ಥರಾಗಿ ಬೀಳುತ್ತಿರುವ ದೃಶ್ಯ ಕಂಡುಬಂದಿದೆ. ಗಣಪತಿ ಸೇವಾ ಸಮಿತಿಯ ಸದಸ್ಯರಿಗೆ ಸೂಚನೆ ನೀಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಅವರ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ.
ತುರ್ತು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸ್ಥಳೀಯರು ಮತ್ತು ಪೊಲೀಸರು ಕರೆದೊಯ್ಯಲಾಗಿದೆ.
Inspector collapses during procession
