ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ಹಿನ್ನಲೆ, ಬದಲಿ ಮಾರ್ಗ, ನಿಲುಗಡೆ ಮತ್ತು ಸಂಚಾರ ನಿಷೇಧ-alternate route, stopping and traffic ban

 SUDDILIVE || SHIVAMOGGA

ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ಹಿನ್ನಲೆ, ಬದಲಿ ಮಾರ್ಗ, ನಿಲುಗಡೆ ಮತ್ತು ಸಂಚಾರ ನಿಷೇಧ-Hindu Mahasabha Ganapati Rajabeedi utsav backdrop, alternate route, stopping and traffic ban

ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವದ ಹಿನ್ನಲೆಯಲ್ಲಿ ವಾಹನಗಳ ಸಂಚಾರ ನಿಷೇಧ, ನಿಲುಗಡೆ ಮತ್ತು ಮಾರ್ಗ ಬದಲಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಈ ಆದೇಶ ಸೆ.6 ರಂದು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯ ವರೆಗೆ ಜಾರಿಯಲ್ಲಿರುತ್ತದೆ. 

ರಾಜಬೀದಿ ಉತ್ಸವವು ಕೋಟೆ ರಸ್ತೆಯಲ್ಲಿರುವ ಭೀಮೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಲಿದ್ದು, ಎಸ್ ಪಿ ಎಂ ಮುಖ್ಯರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್ ಮುಖ್ಯರಸ್ತೆ, ಶಿವಪ್ಪ ನಾಯಕ ಪ್ರತಿಮೆ, ಎಎ ವೃತ್ತ, ನೆಹರೂ ರಸ್ತೆ, ಗೋಪಿ ವೃತ್ತ, ದುರ್ಗಿಗುಡಿ, ಮಹಾವೀರ ವೃತ್ತ, ಡಿವಿಎಸ್ ವೃತ್ತ, ಕಾನ್ವೆಂಟ್ ರಸ್ತೆ, ಕೋಟೆ ರಸ್ತೆ, ಮಾರ್ಗವಾಗಿ ಭೀಮೇಶ್ವರ ದೇವಸ್ಥಾನ ಹಿಂಭಾಗದ ತುಂಗ ನದಿಯಲ್ಲಿ ವಿಸರ್ಜನೆಗೊಳ್ಳಲಿದೆ. 

ಈ ಮೆರವಣಿಗೆ ಸಾಗುವ ದಾರಿಯ 100 ಮೀಟರ್ ಅಂತರದಲ್ಲಿ ವಾಹನ ಸಂಚಾರ ಮತ್ತು ನಿಲುಗಡೆಯನ್ನ ನಿಷೇಧಿಸಲಾಗಿದೆ. ಬೆಂಗಳೂರು, ಭದ್ರಾವತಿ, ಎನ್ ಆರ್ ಪುರ, ಚನ್ನಗಿರಿ, ಹೊಳೆಹೊನ್ನೂರು, ಹೊನ್ನಾಳಿ, ಹರಿಹರ, ದಾವಣಗೆರೆಯಿಂದ ಬರುವ/ಹೋಗುವ ಭಾರಿ ವಾಹನಗಳು ಮತ್ತು ಬಸ್ ಗಳು ಬೈಪಾಸ್ ಮೂಲಕ ಸಾಗುವುದು, 

ಶಿಕಾರಿಪುರ, ಸೊರಬ ರಸ್ತೆಯ ಮೂಲಕ ಹೋಗುವ ಬಸ್, ಭಾರಿ ಸರಕು ವಾಹನಗಳು ಸಾಗರ ರಸ್ತೆಯ ಮೂಲಕ ಹೆಲಿಪ್ಯಾಡ್  ವೃತ್ತ, ಆಲ್ಕೊಳ ವೃತ್ತ, ಪೊಲೀಸ್ ಚೌಕಿ, ರಾಜ್ ಕುಮಾರ್ ಸರ್ಕಲ್-ಬೊಮ್ಮನ್ ಕಟ್ಟೆ-ಸವಳಂಗ ರಸ್ತೆಯ ಮೂಲಕ ಸಾಗುವುದು, ಈ ರಸ್ತೆಯಿಂದ ಬರುವ ವಾಹನಗಳು ಉಷ ನರ್ಸಿಂಗ್ ಹೋಮ್, ಲಕ್ಷ್ಮೀ ಟಾಕಿಸ್ ವೃತ್ತ, ಪೊಲೀಸ್ ಚೌಕಿ, ಆಲ್ಕೊಳ ವೃತ್ತದ ಮೂಲಕ ಸಾಗರ ರಸ್ತೆಯಲ್ಲಿ ಸಂಚರಿಸಬೇಕಿದೆ. 

ಕೋಟೆ ರಸ್ತೆ, ಓಲ್ಡ್ ಬಾರ್ ಲೈನ್ ರಸ್ತೆಯಲ್ಲಿ ಎಲ್ಲಾ ವಾಹನಗಳ ಸಂಚಾರ ನಿಷೇಧಿಸಲಾಗಿದೆ. 

alternate route, stopping and traffic ban

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close