ಮಸೀದಿ ಏನು ಪಾಕ್ ಆಡಳಿತಕ್ಕೆ ಒಳಪಟ್ಟಿದೆಯಾ? ರಾಷ್ಟಭಕ್ತರ ಬಳಗ ಸಾಲು ಸಾಲು ಪ್ರಶ್ನೆ- Is the mosque under Pakistani rule? Rastrabhaktra balaga question line by line

 SUDDILIVE || SHIVAMOGGA

ಮಸೀದಿ ಏನು ಪಾಕ್ ಆಡಳಿತಕ್ಕೆ ಒಳಪಟ್ಟಿದೆಯಾ? ರಾಷ್ಟಭಕ್ತರ ಬಳಗ ಸಾಲು ಸಾಲು ಪ್ರಶ್ನೆ-Is the mosque under Pakistani rule? Rastrabhaktra balaga question line by line


ಬಹುಸಂಖ್ಯಾತ ಹಿಂದೂಗಳ ಆಚರಣೆಗಳ ಮೇಲೆ ದಾಳಿಗಳನ್ನು ಮಾಡುತ್ತಿರುವ ಮತಾಂದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಇಂದು ರಾಷ್ಟ್ರಭಕ್ತರ ಬಳಗದ ಕೆ.ಎಸ್ ಈಶ್ವರಪ್ಪ ಮತ್ತು ಪುತ್ರ ಕಾಂತೇಶ್ ನೇತೃತ್ವದಲ್ಲಿ ಡಿಸಿ ಮೂಲಕ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲಾಯಿತು. 

ರಾಜ್ಯದಲ್ಲಿ ಬಹುಸಂಖ್ಯಾತ ಹಿಂದೂಗಳು ಬದುಕುವುದೇ ದುಸ್ತರವಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಅತ್ಯಂತ ಖೇದಕರ ವಿಷಯವಾಗಿದೆ. ಹಿಂದೂಗಳ ಹಬ್ಬ, ಹರಿದಿನ, ಮೆರವಣಿಗೆಗಳನ್ನು ಮಾಡುವುದೇ ತಪ್ಪು ಎಂಬ ನಿರ್ಧಾರಕ್ಕೆ ನಿಮ್ಮ ಸರ್ಕಾರ ಬಂದಂತೆ ಕಾಣುತ್ತಿದೆ. ಮದ್ದೂರಿನ ಘಟನೆಯೇ ಇದಕ್ಕೆ ಉತ್ತಮ ನಿದರ್ಶನ ಎಂದು ಬಳಗ ಮನವಿಯಲ್ಲಿ ಆರೋಪಿಸಿದೆ. 

ಶಾಂತಿಯುವಾಗಿ ಸಾಗುತ್ತಿದ್ದ ಗಣೇಶನ ಮೆರವಣಿಗೆಯ ಮೇಲೆ ಮತಾಂದ ಮುಸ್ಲಿಮರು ಕಲ್ಲೆಸೆದು ಗಲಬೆ ಮಾಡಿರುವುದನ್ನು ಹಾಗೂ ಭದ್ರಾವತಿಯಲ್ಲಿ ಈದ್ ಮೆರವಣಿಗೆ ವೇಳೆ ನೂರಾರು ಮತಾಂದ ಮುಸ್ಲಿಂ ಯುವಕರು ಶತ್ರುದೇಶ ಪಾಕಿಸ್ತಾನದ ಪರವಾಗಿ ಪಾಕಿಸ್ತಾನ್ ಜಿಂದಾಬಾದ್" ಎಂದು ಘೋಷಣೆ ಕೂಗಿರುವುದನ್ನು ರಾಷ್ಟ್ರಭಕ್ತರ ಬಳಗ ಉಗ್ರವಾಗಿ ಖಂಡಿಸುತ್ತದೆ. ಇದನ್ನೆಲ್ಲ ಗಮನಿಸಿದಾಗ ಬಹು ಸಂಖ್ಯಾತರಾದ ಹಿಂದೂಗಳಲ್ಲಿ ಕೆಲವು ಪ್ರಶ್ನೆಗಳು ಉದ್ಭವಿಸುತ್ತವೆ. ಇದಕ್ಕೆ ಸೂಕ್ತ ಉತ್ತರವನ್ನು ಕೊಡುವುದು ನಿಮ್ಮ ಹೊಣೆಗಾರಿಕೆಯಾಗಿದೆ ಎಂದಿದ್ದಾರೆ. 

ಹಿಂದೂಗಳು ಗಣೇಶ ಉತ್ಸವ, ಹನುಮ ಜಯಂತಿ ಹಾಗೂ ಇತರ ಧಾರ್ಮಿಕ ಆಚರಣೆ ಹಾಗೂ ಉತ್ಸವಗಳನ್ನು ಮಾಡುವುದು ನಿಮ್ಮ ಆಡಳಿತದಲ್ಲಿ ಅಪರಾಧವೇ?ಹಿಂದೂಗಳ ಮೆರವಣಿಗೆಗಳು ಮಸೀದಿಗಳ ಮುಂದೆ ಸಾಗಬಾರದೆಂದರೆ ಮಸೀದಿಗಳೇನು ಪಾಕಿಸ್ತಾನದ ಆಡಳಿತಕ್ಕೊಳಪಟ್ಟ ಪ್ರದೇಶದಲ್ಲಿವಿಯೇ?

ಮಸೀದಿಯ ಒಳಗಡೆ ಕಲ್ಲುಗಳನ್ನು ಶೇಖರಿಸಿಟ್ಟಿರುವಂತೆ ಇನ್ನೂ ಯಾವ ಯಾವ ಮಾರಾಕಾಸ್ತ್ರಗಳನ್ನು ಬಾಂಬ್‌ಗಳನ್ನು ಇಟ್ಟರಬಹುದೆಂದು ತಪಾಸಣೆ ಮಾಡುವಿರಾ?ಶಾಂತಿಯುತವಾಗಿ ಸಾಗುತ್ತಿದ್ದ ಗಣೇಶ ಮೆರವಣಿಗೆಯ ಮೇಲೆ ಮಸೀದಿಯಿಂದ ಕಲ್ಲು ಎಸೆದು ಗಲಭೆ ಸೃಷ್ಟಿಸಲು ಕುಮ್ಮಕ್ಕು ಕೊಟ್ಟವರು ಯಾರು?

ಮುಖ್ಯಮಂತ್ರಿಗಳು ಹಾಗೂ ಗೃಹ ಮಂತ್ರಿಗಳು ಇದೋಂದು ಸಣ್ಣ ಘಟನೆ ಎಂದು ಬಿಂಬಿಸುತ್ತಿರುವುದನ್ನು ನೋಡಿದರೆ ನಿಮಗೆ ಹಿಂದೂಗಳ ಹೆಣಗಳು ಬೀಳಬೇಕೆ?ನ್ಯಾಯ ಕೇಳಿ ಪ್ರತಿಭಟನೆ ನಡೆಸಿದ ಹಿಂದೂಗಳ ಮೇಲೆ ಪೋಲೀಸರು ಮನಸೋ ಇಚ್ಛೆ ಲಾರಿ ಪ್ರಹಾರ ಮಾಡಿ ಮಹಿಳೆಯರನ್ನೂ ಬಿಡದೆ ಹಲ್ಲೆ ಮಾಡಿರುವುದು ನಿಮ್ಮ ನಿರ್ದೇಶನದಂತೆ ನಡೆದಿದೆಯೇ?

ಯಾರ ಭಯವೂ ಇಲ್ಲದೇ ಕೆಲವು ಮುಸ್ಲಿಮ್ ಗೂಂಡಾಗಳು ಪದೇ ಪದೇ ಈ ರೀತಿ ರಾಜ್ಯದಲ್ಲಿ ಗಲಭೆ, ದೊಂಬಿ, ಶತ್ರು ದೇಶದ ಪರವಾಗಿ ಘೋಷಣೆ ಕೂಗುವುದನ್ನು ನಿಯಂತ್ರಿಸಲು ನಿಮ್ಮ ಸರ್ಕಾರದಿಂದ ಸಾಧ್ಯವಿಲ್ಲವೇ?

ಕಾಂಗ್ರೇಸ್ ಸರ್ಕಾರದ ಈ ಹಿಂದೂ ವಿರೋಧಿ. ದೇಶದ್ರೋಹಿಗಳ ಪರವಾದ ಬೋರಣೆಯನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ ಹಾಗೂ ಘಟನೆಗೆ ಕಾರಣರಾದ ಮುಸ್ಲಿಮ್ ಗೂಂಡಾಗಳನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಬಹು ಸಂಖ್ಯಾತ ಹಿಂದೂಗಳ ಆಚರಣೆ, ಮೆರವಣಿಗೆಗಳಿಗೆ ಮುಂದಿನ ದಿನಗಳಲ್ಲಿ ಮುಸ್ಲಿಮ್ ಮತಾಂದರಿಂದ ಯಾವುದೇ ತೊಂದರೆಗಳು ಆಗದಂತೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಳಗ ಮನವಿಯಲ್ಲಿ ಆಗ್ರಹಿಸಿದೆ. 

Is the mosque under Pakistani rule? Rastrabhaktra balaga question line by line

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close