SUDDILIVE || SHIVAMOGGA
ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮಕ್ಕೆ ನಾಮನಿರ್ದೇಶಕರಾಗಿ ಶಿವಮೊಗ್ಗದ ಮಾಲ್ತೇಶ್ ಆಯ್ಕೆ-Maltesh from Shivamogga selected as nominee for State Brahmin Development Corporation
ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮದ ಸದಸ್ಯರನ್ನಾಗಿ ಮೂವರನ್ನ ರಾಜ್ಯ ಸರ್ಕಾರ ನೇಮಿಸಿದ್ದು ಶಿವಮೊಗ್ಗದ ಮಾಲ್ತೇಶ್ ಅವರನ್ನ ರಾಜ್ಯ ಸರ್ಕಾರ ಆಯ್ಕೆ ಮಾಡಿ ಆದೇಶಿದೆ.
ಚಿಂತಾಮಣಿಯ ಸಿಎನ್ ನಾಗೇಶ್, ಗದಗಿನ ಗುರುರಾಜ ವಾದಿರಾಜ ಬಳಗಾನೂರು ಹಾಗೂ ಶಿವಮೊಗ್ಗದ ಪಿಎಂ ಮಾಲ್ತೇಶ್ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಹಾಮಂಡಳಿಯ ನಾಮನಿರ್ದೇಶಕರನ್ನಾಗಿ ಆದೇಶಿಸಿದೆ.
ಈ ಕುರಿತು ಸುದ್ದಿಲೈವ್ ನೊಂದಿಗೆ ಮಾತನಾಡಿದ ಪಿ.ಎಂ.ಮಾಲ್ತೇಶ್ ಈ ಕುರಿತು ನನಗೆ ಗೊತ್ತಿರಲಿಲ್ಲ. ಸಚಿವ ದಿನೇಶ್ ಗುಂಡೂರಾವ್ ಮತ್ತು ರಾಜ್ಯ ಉಸ್ತುವಾರಿ ಸಚಿವರ ಆಶೀರ್ವಾದದೊಂದಿಗೆ ಈ ಹುದ್ದೆ ದೊರಕಿದೆ. ಬಡ ಬ್ರಾಹ್ಮಣರ ಮಕ್ಕಳ ಅಭಿವೃದ್ಧಿಗಾಗಿ ದುಡಿಯುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಮಾಜಿ ಸಚಿವ ಹಾಗೂ ಶಿವಮೊಗ್ಗ ಜಿಲ್ಲೆಯ ವೀಕ್ಷಕರಾದ ವಿನಯ್ ಕುಮಾರ್ ಸೊರಕೆ ಅವರು ನೂತನವಾಗಿ ಬ್ರಾಹ್ಮಣ ಅಭಿವೃದ್ಧಿ ನಿಗಮದ ನಾಮನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾದ ಮಾಲ್ತೇಶ್ ಅವರನ್ನ ಅಭಿನಂದಿಸಿ ಸನ್ಮಾನಿಸಿದ್ದಾರೆ.
Maltesh from Shivamogga selected as nominee for State Brahmin Development Corporation


