SUDDILIVE || SHIVAMOGGA
ಶಾಸಕ ಸಂಗಮೇಶ್ವರ್ ಅವರ ಮುಸ್ಲೀಂ ಜನ್ಮದಲ್ಲಿ ಹುಟ್ಟಲು ಬಯಸುತ್ತೇನೆ ಎಂಬ ಹೇಳಿಕೆ ವಿಡಿಯೋ ವೈರಲ್-Video of MLA Sangameshwar's statement that he wanted to be born a Muslim goes viral
ಮುಸ್ಲಿಂ ಜನಾಂಗದ ಪ್ರೀತಿಗೆ ಪಾತ್ರನಾಗಿರುವ ನನಗೆ ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುವ ಆಸೆ ಇದೆ ಎಂದು ಶಾಸಕ ಬಿಕೆ ಸಂಗಮೇಶ್ವರ ಹೇಳಿದ್ದಾರೆ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಅವರು ನಗರದ ಹೊಳೆಹನ್ನೂರು ಸರ್ಕಲ್ ಬಳಿ ಉಸ್ಮನಿಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜೆ ಬಿ ಟಿ ಬಾಬು ನೇತೃತ್ವದಲ್ಲಿ ಹಬ್ಬದ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ರಕ್ತದಾನ ಉಚಿತ ಆರೋಗ್ಯ ಸುಖದಲ್ಲಿ ಭಾಗಿಯಾಗಿ ಮಾತನಾಡಿದರು ನಗರದಲ್ಲಿ ರದ್ದಾಗಿದ್ದ ಈದ್ ಮಿಲಾದ್ ಮೆರವಣಿಗೆಯನ್ನು ಕಳೆದ 20 ವರ್ಷಗಳ ಹಿಂದೆ ಮುಖ್ಯಮಂತ್ರಿ ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಪುನರಾರಂಭಗೊಂಡಿತು.
ಶಾಂತ ರೀತಿಯಲ್ಲಿ ಮೆರವಣಿಗೆ ಮಾಡುತ್ತಾ ನಮ್ಮ ಗೌರವ ಉಳಿಸಿರುವ ನಿಮ್ಮೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಸಲ್ಲಿಸುತ್ತೇನೆ ಈದ್ ಮಿಲಾದ್ ಹಬ್ಬವನ್ನು ಸರ್ವರೂ ಶಾಂತಿಯಿಂದ ಆಚರಿಸಿದರೇ ಅಲ್ಲಾಹೂ ಎಲ್ಲರಿಗೂ ಒಳಿತು ಮಾಡುತ್ತಾರೆ ಎಲ್ಲರೂ ಸಹೋದರ ಭಾವನೆಯಿಂದ ಬದುಕು ನಡೆಸೋಣ ಎಂದರು.
ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಅವರ ಹೇಳಿಕೆ ಬೆನ್ನಲ್ಲೇ ಪಾಕಿಸ್ಥಾನ ಪರ ಘೋಷಣೆಗಳು ಸಹ ಬಿಜೆಪಿಗರಿಗೆ ಆಹಾರವಾಗಿದೆ.
Video of MLA Sangameshwar's statement that he wanted to be born a Muslim goes viral
