SUDDILIVE || SHIVAMOGGA
ಗಾಂಧಿಬಜಾರ್ ಮಹದ್ವಾರದಲ್ಲಿ ಲೈಟಿಂಗ್ ಗೆ ಅವಕಾಶ-Lighting allowed at Gandhi Bazaar gate
ನಗರದ ಗಾಂಧಿಬಜಾರ್ ನಲ್ಲಿ ದ್ವಾರದಲ್ಲಿ ಕಟೌಟ್ ನಿರ್ಮಿಸಲು ಅವಕಾಶಕೊಡಬೇಕೆಂದು ಮಿಲಾದ್ ಕಮಿಟಿ ಬೇಡಿಕೆ ಇಟ್ಟಿದ್ದು, ಅದನ್ನ ಎಸ್ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ಬಗೆಹರಿಸಲಾಯಿತು.
ನಾಳೆಯ ಮಿಲಾದ್ ಮೆರವಣಿಗೆಯಲ್ಲಿ ಗಾಂಧಿ ಬಜಾರ್ ನ ಮಹಾದ್ವಾರದಲ್ಲಿ ಮೆಕ್ಕಾ ಮದೀನದ ಪ್ರತಿಕೃತಿ ನಿರ್ಮಿಸಲು ಮಿಲಾದ್ ಕಮಿಟಿ ಬೇಡಿಕೆಯಿಟ್ಟಿದ್ದು, ಈ ಮಿಲಾದ್ ಕಮಿಟಿಯ ಬೇಡಿಕೆಗೆ ಎಸ್ಪಿ ಮಿಥುನ್ ಕುಮಾರ್ ಅವರ ನೇತೃತ್ವದಲ್ಲಿ ಗಾಂಧಿ ಬಜಾರ್ ನ ಸುನ್ನಿ ಜಾಮಿಯಾ ಮಸೀದಿಯಲ್ಲಿ ಸಭೆ ಸೇರಿ ಲೈಟಿಂಗ್ ಡೆಕೋರೇಷನ್ ಗೆ ಮಾತ್ರ ಅನುವು ನೀಡಲಾಗಿದೆ.
ಆದರೆ ಈ ಕುರಿತು ಎಸ್ಪಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಲು ತಿರಸ್ಕರಿಸಿದ್ದು, ನಮ್ಮ ಬೀಟ್ ಇವೆ. ಬೀಟ್ ಪ್ರಯುಕ್ತ ಬಜಾರ್ ನಲ್ಲಿ ಕರ್ತವ್ಯ ಮೇರೆಗೆ ಇರುವುದಾಗಿ ತಿಳಿಸಿದ್ದಾರೆ. ನಾಳೆಯ ಮೆರವಣಿಗೆಗೆ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದರು.
ಗಾಂಧಿ ಬಜಾರ್ ನ ಮಹಾದ್ವಾರದಲ್ಲಿ ಕಟೌಟ್ ನಿರ್ಮಾಣಕ್ಕೆ ಅನುವು ನೀಡಬೇಕು ಎಂಬ ಬೇಡಿಕೆ ಹಿನ್ನಲೆಯಲ್ಲಿ ಎಎ ಸರ್ಕಲ್, ಮತ್ತು ಗಾಂಧಿ ಬಜಾರ್ ನ ಕೆಲ ಏರಿಯಾಗಳಲ್ಲಿ ಬೀದಿ ಲೈಟ್ ಗಳು ಮತ್ತು ಸರ್ಕಲ್ ನಲ್ಲಿ ನಿರ್ಮಿಸಲಾಗಿದ್ದ ಕಟೌಟ್ ಗಳಿಗೆ ಹಾಕಲಾಗಿದ್ದ ದೀಪದ ಅಲಂಕಾರವನ್ನ ಸ್ಥಗಿತಗೊಳಿಸಲಾಗಿತ್ತು. ಎಸ್ಪಿ ಅವರಜೊತೆಗೆ ನಡೆದ ಯಶಸ್ವಿ ಮಾತುಕತೆಯಿಂದ ದೀಪವನ್ನ ಪುನರ್ ಸ್ಥಾಪಿಸಲಾಯಿತು.
Lighting allowed at Gandhi Bazaar gate

