ರಾಜ್ಯದಲ್ಲಿ ಮುಸ್ಲೀಂ ಗೂಂಡಾಗಿರಿ ಹೆಚ್ಚಾಗುತ್ತಿದೆ-ಈಶ್ವರಪ್ಪ ಕಳವಳ- Muslim goons are increasing in the state - Eshwarappa concerned

 SUDDILIVE || SHIVAMOGGA

ರಾಜ್ಯದಲ್ಲಿ ಮುಸ್ಲೀಂ ಗೂಂಡಾಗಿರಿ ಹೆಚ್ಚಾಗುತ್ತಿದೆ-ಈಶ್ವರಪ್ಪ ಕಳವಳ-Muslim goons are increasing in the state - Eshwarappa concerned

Eshwarappa, goons


ರಾಜ್ಯದಲ್ಲಿ ಮುಸ್ಲೀಂ ಗೂಂಡಾಗಿರಿ ಹೆಚ್ಚಾಗುತ್ತಿದೆಯೇ ಹೊರತು ಕಾನೂನು ಬಿಗಿಯಾಗುತ್ತಿಲ್ಲ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಕಳವಳ ವ್ಯಕ್ತಪಡಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಜೆ ಹಳ್ಳಿ ಕೆಜೆಹಳ್ಳಿ ಘಟನೆ ನಂತರವೂ ಸರ್ಕಾರ ಆಗಲಿ ಸಮುದಾಯವಾಗಲಿ ಬುದ್ದಿಕಲಿಯಬೇಕಿತ್ತು. ಆದರೆ ಇಂತಹ ಘಟನೆಗಳು ಮುಂದುವರೆಯುತ್ತಿದೆ. ಇದಕ್ಕೆ ರಾಜ್ಯ ಸರ್ಕಾರ ಬೆಂಬಲಿಸುತ್ತಿರುವ ಅನುಮಾನವಿದೆ. ಮಂಡ್ಯ ಮದ್ದೂರು, ಹುಬ್ಬಳ್ಳಿ, ಸಾಗರದಲ್ಲಿ ನಡೆದ ಗಣಪತಿ ವಿಸರ್ಜನಾ ಮೆರವಣಿಗೆಯ ಘಟನೆ ಇದಕ್ಕೆ ಸಾಕ್ಷಿಯಾಗಿದೆ ಎಂದರು.

ಮುಸ್ಲೀಂ ರ ಮನಸ್ಥಿತಿ ಬದಲಾಗಬೇಕಿದೆ. ಇದಕ್ಕೆ ಹಿಂದೂ ಸಮಾಜ ಜಾಗೃತಿಯಾಗಬೇಕಿದೆ. ರಾಜ್ಯ ಸರ್ಕಾರ ನಮ್ಮದೆ ಎಂಬ ಮನೋಸ್ಥಿತಿಯಲ್ಲಿ ಕೆಲ ಮುಸ್ಲೀಂರಿದ್ದಂತೆ ಕಾಣುತ್ತಿದೆ. ಹಾಗಾಗಿ ಆ ಸಮುದಾಯ ಕುಣಿಯುತ್ತಿದೆ. ಹಿಂದೂ ಸಮಾಜ ಜಾಗೃತಿ ಆಗಬೇಕು. ಧರ್ಮಸ್ಥಳ ಪ್ರಕರಣದಲ್ಲಿ ಎಚ್ಚೆತ್ತುಕೊಂಡ ಸಮಾಜ ಇಲ್ಲಿಯೂ ಸಹ ಒಗ್ಗಟ್ಟಿನಿಂದ ಎಚ್ಚೆತ್ತುಕೊಳ್ಳಬೇಕಿದೆ ಎಂದರು.

ಎಲ್ಲಾ ಮುಸ್ಲೀಂರು ಇಂತಹ ಮನಸ್ಥಿತಿಯಲ್ಲಿ ಇಲ್ಲ. ಇನ್ನೂ ಇಂತಹ ಮನಸ್ಥಿತಿ ಇಟ್ಟುಕೊಂಡವರನ್ನ ಸಮಾಜ ಜಾಗೃತಿಯಿಂದ ನಡೆದುಕೊಳ್ಳಬೇಕು. ಮುಸ್ಲೀಂ ಗೂಂಡಾಗಳಿಗೆ ಕಾಂಗ್ರೆಸ್ ಸಪೋರ್ಟ್ ಮಾಡ್ತಾಯಿದ್ದಾರೆ. ಈಗಿನ ಕಾಂಗ್ರೆಸ್ ಸರ್ಕಾರ ಮುಂದೆಯೂ ಅಧಿಕಾರದಲ್ಲಿ ಮುಂದುವರೆಯಲಿದೆ ಎನ್ನುವ ಹಾಗೆ ಪೊಲೀಸರು ವರ್ತಿಸುತ್ತಿದ್ದಾರೆ. ಇದನ್ನ ಅರಿಯದಿದ್ದರೆ ಪರಿಣಾಮವನ್ನ‌ ಪೊಲೀಸ್ ಇಲಾಖೆ ಎದುರಿಸಲಿದೆ ಎಂದರು. 

ಬ್ಯಾಲೆಟ್ ಪೇಪರ್ ಬೇಕಿದೆ ಎನ್ನುವ ಮಲ್ಲಿಕಾರ್ಜುನ ಖರ್ಗೆ ಅವರ ಮಗ ಹೇಗೆ ಗೆದ್ದ ಎಂಬುದನ್ನ ಸ್ಪಷ್ಟಪಡಿಸಬೇಕು. ಒಂದೇ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಇತರೆ ಪಕ್ಷಗಳು ಗೆದ್ದಿದೆ. ಇದರ ಬಗ್ಗೆ ಕಾಂಗ್ರೆಸ್ ಏನು ಹೇಳಲಿದೆ. ಜನರ ಮನಸ್ಸನ್ನ ಬೇರೆಡೆ ತಿರುಗಿಸಲು ಇವಿಎಂ‌ ಬೇಡ ಮತಪತ್ರ ಬೇಕು ಎನ್ನುತ್ತಿದೆ.  ಇದರಲ್ಲಿಯೂ ಕಾಂಗ್ರೆಸ್ ಸೋಲಲಿದೆ ಎಂದರು. 

ಭಗವದ್ಗೀತೆ ಶ್ಲೋಕದ ರಾಜ್ಯ ಮಟ್ಟದ ಸ್ಪರ್ಧೆಯನ್ನ ಅ.25 ರಿಂದ ನ.1 ರವರೆಗೆ ಶಿವಮೊಗ್ಗದಲ್ಲಿ ನಡೆಯಲಿದ್ದು ಸ್ಥಳ ನಿಶ್ಚಯವಾಗಬೇಕಿದೆ. ಈ ಕಾರ್ಯಕ್ರಮವನ್ನ ಶಿರಸಿ ಸೋಂದಾ ಮಹಾಸಂಸ್ಥಾನದ ಪೀಠಾಧೀಶ ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನಡೆಸಿಕೊಡಲಿದ್ದಾರೆ ಎಂದರು. 

Muslim goons are increasing in the state - Eshwarappa concerned

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close