ಹಸೆಮಣೆ ಏರಬೇಕಿದ್ದ ಯುವತಿ ರಸ್ತೆ ಅಪಘಾತದಲ್ಲಿ ಸಾವು-Young woman died in road accident in Malavagoppa

 SUDDILIVE || SHIVAMOGGA

ಹಸೆಮಣೆ ಏರಬೇಕಿದ್ದ ಯುವತಿ ರಸ್ತೆ ಅಪಘಾತದಲ್ಲಿ ಸಾವು-Young woman died in road accident in Malavagoppa

Road, accident


ಇನ್ನೇನು 15 ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಯುವತಿಯೋರ್ವಳು ರಸ್ತೆ ಅಪಘಾತದಲ್ಲಿ ಜೀವಕಳೆದುಕೊಂಡಿರುವ ಘಟನೆ ವರದಿಯಾಗಿದೆ. 

ಶಿವಮೊಗ್ಗದ ಮಲವಗೊಪ್ಪದ ಬಳಿಯಿರುವ ಸಕ್ಕರೆ ಫ್ಯಾಕ್ಟರಿ ಮತ್ತು ಹಾಥಿನಗರದ ಮಧ್ಯೆದಲ್ಲಿ ಬೈಕ್ ನಲ್ಲಿ ಯುವತಿ ಸಹೋದರನ ಜೊತೆ ಹೋಗುತ್ತಿದ್ದ ವೇಳೆ  ರಾಂಗ್ ರೂಟ್ ನಲ್ಲಿ ಬರುತ್ತಿದ್ದ ಬೋಟಿ ಮಾರಾಟಗಾರನ ವಾಹನಕ್ಕೆ ಡಿಕ್ಕಿ ಹೊಡೆದಿದೆ.  ಪರಿಣಾಮ ಯುವತಿ ರಸ್ತೆಗೆ ಬಿದ್ದಿದ್ದು ಆಕೆಯ ಮೇಲೆ ಖಾಸಗಿ ಬಸ್ ಚಲಿಸಿದ ಪರಿಣಾಮ ಸ್ಥಳದಲ್ಲಿಯೇ ಸಾವು ಕಂಡಿರುವ ಘಟನೆ ಇಂದು ಬೆಳಿಗ್ಗೆ ಸುಮಾರು 9-30 ಕ್ಕೆ ನಡೆದಿದೆ. 

ಅಪಘಾತದಲ್ಲಿ ಮೃತಪಟ್ಟ ಯುವತಿಯನ್ನ  ಕವಿತಾ (26) ಎಂದು ಗುರುತಿಸಲಾಗಿದೆ. ಯುವತಿ ಕವಿತಾ ಮತ್ತು ಸಂತೋಷ್ ಬೈಕ್ ನಲ್ಲಿ ದುಮ್ಮಳ್ಳಿಯಿಂದ ಶಿವಮೊಗ್ಗಕ್ಕೆ ಹೊರಟಿದ್ದಾರೆ. ಎದುರಿನಿಂದ ಬೋಟಿ ಮತ್ತು ಇತರೆ ಕುರುಕಲು ಪದಾರ್ಥ ಮಾರಾಟ ಮಾಡುವ ದ್ವಿಚಕ್ರ ವಾಹನಕ್ಕೆ ಲಗೇಜ್ ಏರಿಕೊಂಡು ಬರುವಾಗ ಬೋಟಿ ಪ್ಯಾಕೆಟ್ ತಗುಲಿ ಕವಿತ ಮತ್ತು ಸಂತೋಷ್ ಕೆಳಗೆ ಬಿದ್ದಿದ್ದಾರೆ.

Malvagoppa, roadaccident
ಮೃತ ಕವಿತಾ

ಸಂತೋಷ್ ರಸ್ತೆಯ ಫುಟ್ ಪಾತ್ ಕಡೆ ಬಿದ್ದರೆ ಕವಿತಾ ರಸ್ತೆ ಮಧ್ಯೆ ಬಿದ್ದಿದ್ದಾರೆ. ಹಿಂಬದಿಯಲ್ಲಿ ಬರುತ್ತಿದ್ದ ಖಾಸಗಿ ಬಸ್ ಕವಿತಾರ ತಲೆಯ ಮೇಲೆ ಹರಿದಿದೆ. ಪರಿಣಾಮ‌ ಯುವತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಕವಿತಾಳಿಗೆ ಮದುವೆ ನಿಶ್ಚಯವಾಗಿದ್ದು ಇನ್ನೇನು 15 ದಿನಗಳಲ್ಲಿ ಆಕೆಗೆ ಮದುವೆ ನಿಶ್ಚಯವಾಗಿತ್ತು. ಹಸೆಮಣೆ ಏರಬೇಕಿದ್ದ ಯುವತಿ ಮಸಣ ಸೇರಿದ್ದಾಳೆ. ಬೋಟಿ ಮಾರಾಟ ಮಾಡುವ ದ್ವಿಚಕ್ರ ವಾಹನ ಜವರಾಯನಂತೆ ಕಾಡಿದೆ. 

Young woman died in road accident in Malvagoppa


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close