SUDDILIVE || SHIVAMOGGA
ವಿದ್ಯುತ್ ಸ್ಪರ್ಶಗೊಂಡು ಬಾಲಕ ಸಾವು-Boy dies after being electrocuted
ಹಾಡೋನಹಳ್ಳಿಯಲ್ಲಿ ವಿದ್ಯುತ್ ಸ್ಪರ್ಶವಾಗಿ ಬಾಲಕನೋರ್ವ ಜೀವ ಕಳೆದುಕೊಂಡಿರುವ ಘಟನೆ ವರದಿಯಾಗಿದೆ.
ಹಾಡೋನಹಳ್ಳಿಯ ಅಂಬ ಭವಾನಿ ದೇವಸ್ಥಾನಕ್ಕೆ ನವರಾತ್ರಿಯ ಹಿನ್ನಲೆಯಲ್ಲಿ ವಿದ್ಯುತ್ ದೀಪದ ಅಲಂಕಾರ ಮಾಡಲಾಗಿದೆ. ದೇವಸ್ಥಾನಕ್ಕೆ ಹಾಕಿದ ಸೀರಿಯಲ್ ಸೆಟ್ ಅಲಂಕಾರವನ್ನ ದೇವಸ್ಥಾನದ ಗೇಟಿಗೆ ಸಹ ಹಾಕಲಾಗಿದೆ. ಈ ವೇಳೆ ಸೀರಿಯಲ್ ಸೆಟ್ ಸ್ಕಿನ್ ಆಗಿದ್ದರಿಂದ ಗೇಟ್ ಗೂ ವಿದ್ಯುತ್ ಚ್ಛಕ್ತಿ ಹರಿದಿದೆ.
ಗ್ರಾಮದ ಬಾಲಕ ಸಮರ್ಥ (14) ಗೇಟನ್ನ ಮುಟ್ಟುತ್ತಿದ್ದಂತೆ ಶಾಕ್ ಹೊಡೆದು ಅಸ್ವಸ್ಥನಾಗಿದ್ದಾನೆ. ಆಸ್ಪತ್ರೆಗೆ ತರುವಾಗ ಬಾಲಕ ಸಾವನ್ನಪ್ಪಿದ್ದಾನೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಾಲಕನ ಈ ದುರ್ಮರಣದಿಂದ ಕುಟುಂಬದ ಆಕ್ರಂಧನ ಮುಗಿಲು ಮುಟ್ಟಿದೆ. ಸಮರ್ಥ್ ಶಿವಮೊಗ್ಗದ ಆಕ್ಸಫರ್ಡ್ ಶಾಲೆಯಲ್ಲಿ 9 ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ. ಈ ಘಟನೆ ನಿನ್ನೆ ನಡೆದಿದೆ
Boy dies after being electrocuted
