ಭದ್ರಾವತಿಯಲ್ಲಿ ಸರಣಿ ಗೋ ಕಳ್ಳತನ ಪ್ರಕರಣಗಳು-Series of cow theft cases in Bhadravati

 SUDDILIVE || BHADRAVATHI

ಭದ್ರಾವತಿಯಲ್ಲಿ ಸರಣಿ ಗೋ ಕಳ್ಳತನ ಪ್ರಕರಣಗಳು-Series of cow theft cases in Bhadravati

Cow, theft

ಭದ್ರಾವತಿ ನಗರದ ಜಿಂಕ್ ಲೈನ್ ನಲ್ಲಿ ಕಳೆದ 20 ದಿನಗಳಲ್ಲಿ ಮೂರು ರೈತ ಕುಟುಂಬಕ್ಕೆ ಸೇರಿದ 9 ಗೋವುಗಳು ಕೊಟ್ಟಿಗೆ ಮನೆಗಳಿಂದ ಕಳ್ಳತನವಾಗಿದೆ. ಭದ್ರಾವತಿ ನ್ಯೂಟೋನ್ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿದೆ. ಇಲ್ಲಿಯವರೆಗೂ ಗೋವಿನ ಕಳ್ಳರು ಯಾರೆಂದು ತಿಳಿಯದೆ ಇದ್ದು ಗೋವುಗಳು ಸಿಗದೇ ಗೋವನ್ನೇ ನಂಬಿ ಜೀವನ ಮಾಡುತ್ತಿರುವ ರೈತರು ಜೀವನದ ದಾರಿ ತಿಳಿಯದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾತ್ರಿ ಇಡೀ ನಿದ್ದೆಗೆಟ್ಟು ಗೋವುಗಳನ್ನು ಕಾಯುವ ಪರಿಸ್ಥಿತಿ ರೈತರಿಗೆ ಉಂಟಾಗಿದೆ. 


ಲಕ್ಷಾಂತರ ರೂಪಾಯಿ ಮೌಲ್ಯದ ಗೋವುಗಳು ಸರಣಿ ಕಳ್ಳತನವಾಗುತ್ತಿರುವುದರ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಗೋವನ್ನು ಕಳೆದುಕೊಂಡಿರುವ ರೈತರು ಮತ್ತು ಹಿಂಜಾವೇ ಶಿವಮೊಗ್ಗ ಜಿಲ್ಲಾ ಸಂಯೋಜಕ ದೇವರಾಜ್ ಅರಳಿಹಳ್ಳಿ ರವರ ನೇತೃತ್ವದಲ್ಲಿ ಹಿಂದೂ ಜಾಗರಣ ವೇದಿಕೆ ಜವಾಬ್ದಾರಿಯುತ ಕಾರ್ಯಕರ್ತರಾದ ಸುಧೀಂದ್ರ ಸಾಗರ. ಫೋಕಸ್ ಮಂಜಣ್ಣ. ರಕ್ಷಿತ್. ಮತ್ತಿತರರು ಆದಷ್ಟು ಬೇಗ ಗೋಗಳನ್ನು ಪತ್ತೆ ಹಚ್ಚಿ ಕೊಡಬೇಕೆಂದು ಸಂಬಂಧಪಟ್ಟ ಠಾಣೆಯ ಪೊಲೀಸ್ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

Series of cow theft cases in Bhadravati

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close