SUDDILIVE || SHIVAMOGGA
ನಾಳೆ ಈಡಿಗರ ಸಭೆಗೆ ಹೋಗಿ ದೀವರು ಎಂದು ಸಮೀಕ್ಷೆಯಲ್ಲಿ ಬರೆಸಲು ಒತ್ತಾಯಿಸುತ್ತೇವೆ-ನಾಗರಾಜ್-We will go to the Eedigaar meeting tomorrow and demand that they write "Deevaru" in the survey - Nagaraj
ರಾಜ್ಯ ಸರ್ಕಾರ ಆರ್ಥಿಕ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿ ಸಮೀಕ್ಷೆ ನಡೆಯುತ್ತಿದ್ದು ದೀವರು ಸಮುದಾಯ ದೀವರು ಎಂದೇ ಸಮೀಕ್ಷೆಯಲ್ಲಿ ಬರೆಸುವಂತೆ ದೀವರು ಕ್ಷೇಮಾಭಿವೃದ್ಧಿ ಸಂಘ ತಿಳಿಸಿದೆ.
ಸಂಘದ ಅಧ್ಯಕ್ಷ ನಾಗರಾಜ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಹಾವನೂರು ಆಯೋಗ ಬಂದಾಗ 26 ಸಮುದಾಯ ಸೇರಿಸಿ ಈಡಿಗರ ಸಮಾಜ ಎಂದು ಮಾಡಿದ್ದರು. 1965 ರಿಂದ ಹಿಂದಿನಿಂದಲೂ ಎಲ್ಲರೂ ದೀವರು ಎಂದು ಶೈಕ್ಷಣಿಕದಲ್ಲಿ ನಮೂದಿಸುತ್ತಿದ್ದೆವು. ಹಾವನೂರು ವರದಿ 1975 ರಲ್ಲಿ ಬಂದನಂತರ 26 ಸಮುದಾಯವನ್ನ ಸೇರಿಸಿ ಈಡಿಗ ಎಂದು ನಮೂದಿಸಲಾಯಿತು ಎಂದರು.
ದೀವರು ಗುಡ್ಡಗಾಡು ಪ್ರದೇಶದ ನಿವಾಸಿಯಾಗಿದ್ದೇವೆ. ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗದಲ್ಲಿ ಹೆಚ್ಚಿದ್ದೇವೆ. ಉತ್ತರ ಕನ್ನಡದಲ್ಲಿ ನಾಮಧಾರಿಗಳು ಮತ್ತು ದಕ್ಷಿಣ ಕನ್ನಡದ ಬಿಲ್ಲವರು ಈಗಲೂ ತಮ್ಮ ಕುಲಗಳನ್ನ ಬರೆಸುತ್ತಿದ್ದಾರೆ. ಶಿವಮೊಗ್ಗದಲ್ಲಿ ಮಾತ್ರ ಈಡಿಗರು ದೀವರು ಎಂಬ ಗೊಂದಲವಿದೆ ಎಂದರು.
ದೀವರ ಪರಂಪರೆಯಲ್ಲಿ ನಾವೆಲ್ಲರೂ ನಡೆದುಕೊಂಡು ಬರುತ್ತಿದ್ದೇವೆ. ಈಡಿಗರು 15 ಲಕ್ಷ ಎಂದು ಮಾಧ್ಯಮದಲ್ಲಿ ಬಂದಿದೆ.ಇದು ಸರಿಯಾದ ಮಾಹಿತಿಯಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ 8 ಲಕ್ಷ ಜನರಿದ್ದಾರೆ. ದೀವರು, ಈಡಿಗರು, ನಾಮದಾರಿಗಳು ಎಂದು ಇದೆ. ಸಮೀಕ್ಷೆಯಲ್ಲಿ ದೀವರು ದೀವರಂತೆ ಬರೆಯಿಸಬೇಕು. ಇದರಿಂದ ಒಳಪಂಗಡಗಳಲ್ಲಿ ಅವಕಾಶ ಸಿಗಲಿದೆ ಎಂಬ ನಿರೀಕ್ಷೆಯಿದೆ. ಶಿವಮೊಗ್ಗದಲ್ಲಿರುವ ಈಡಿಗ ಮತ್ತು ದೀವರು ಎಂದು ಭಿನ್ನಭಿಪ್ರಾಯವಾಗಿದೆ ಎಂದರು.
ಕಾರ್ಯದರ್ಶಿ ಮಂಜುನಾಥ್ ಮಾತನಾಡಿ, ದೀವರು ಎಂದು ನಮೂದಿಸಬೇಕು. ಜಿಲ್ಲಾ ಮಟ್ಟದ ಈಡಿಗರ ಸಭೆ ನಡೆಯುತ್ತಿದೆ. ಈಡಿಗ ಜಾತಿಯೂ ಈಡಿಗ ಎಂದು ಬರೆಯಿಸಿದರೂ ನಾವು ದೀವರು ಎಂದು ಬರೆಸುತ್ತೇವೆ ಸರ್ವ ಸದಸ್ಯರ ಸಭೆಯಲ್ಲಿ ನಾಳೆ ಭಾಗವಹಿಸುತ್ಯಿದ್ದೇವೆ. ಅಲ್ಲಿ ಚರ್ಚಿಸುತ್ತಿದ್ದೇವೆ. ಆದರೂ ನಮ್ಮನಡುವೆ ಭಿನ್ನಭಿಪ್ರಾಯವಿಲ್ಲ ಎಂದರು.
ನಾಮಧಾರಿಗಳು, ಮತ್ತು ಬಿಲ್ಲವರು ಪ್ರತ್ಯೇಕ ಅಸ್ಥಿತ್ವ ಕಂಡುಕೊಂಡಿದ್ದಾರೆ. ಹೊಸನಗರ, ಸಾಗರದಲ್ಲಿ ದೀವರು ಎಂದು ಸಮೀಕ್ಷೆಯಲ್ಲಿ ಬರೆಯಿಸಲು ನಿರ್ಧರಿಸಲಾಗಿದೆ. ಅದರಂತೆ ನಾಳೆಯ ಚರ್ಚೆಯಲ್ಲಿ ಮಾತನಾಡುತ್ತೇವೆ ಎಂದರು.
We will go to the Eedigaar meeting tomorrow and demand that they write "Deevaru" in the survey - Nagaraj
