SUDDILIVE || SHIVAMOGGA
ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವ ಹಿನ್ನಲೆ ಪೊಲೀಸ್ ರೂಟ್ ಮಾರ್ಚ್-Police route march in the backdrop of Hindu Mahasabha Ganapati's Rajbeedi utsav
ಇತಿಹಾಸ ಪ್ರಸಿದ್ಧ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಹಿನ್ನೆಲೆಯಲ್ಲಿ ಶಿವಮೊಗ್ಗದ ಪ್ರಮುಖ ರಸ್ತೆಗಳಲ್ಲಿ ಇಂದು ರೂಟ್ ಮಾರ್ಚ್ ನಡೆದಿದೆ. ಶಿವಮೊಗ್ಗದ ಶಾಂತಿ ನೆಲೆಸುವ ಸಲುವಾಗಿ ರೂಟ್ ಮಾರ್ಚ್ ಹಮ್ಮಿಕೊಳ್ಳಲಾಗಿದೆ.
ಶಿವಮೊಗ್ಗ ನಗರದ ಡಿಎಆರ್ ಮೈದಾನದಿಂದ ಪ್ರಾರಂಭಗೊಂಡ ರೂಟ್ ಮಾರ್ಚ್, ಕೋಟೆ ಭೀಮೇಶ್ವರ ದೇವಸ್ಥಾನ, ಅಮೀರ್ ಅಹಮ್ಮದ್ ವೃತ್ತ, ಶಿವಪ್ಪ ನಾಯಕ ವೃತ್ತ, ಗಾಂಧಿ ಬಜಾರ್ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್ ನಲ್ಲಿ ಪಥ ಸಂಚಲನ ನಡೆದಿದೆ.
ರೂಟ್ ಮಾರ್ಚ್ ನಲ್ಲಿ ಡಿ ಎ ಆರ್, ಕೆಎಸ್ಆರ್.ಪಿ, ಆರ್ ಎ ಎಫ್ ತುಕಡಿಗಳು ಸೇರಿದಂತೆ ಸಿವಿಲ್ ನೂರಾರು ಪೊಲೀಸ್ ಸಿಬ್ಬಂದಿಗಳು ಭಾಗಿಯಾಗಿದ್ದರು. ಹೆಚ್ ಎಂಎಸ್ ಗಣಪತಿ ರಾಜಬೀದಿ ಉತ್ಸವದಲ್ಲಿ 1 ಲಕ್ಷಕ್ಕೂ ಅಧಿಕ ಜನರು ಭಾಗಿ ಸಾಧ್ಯತೆ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಗಣಪತಿ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ 5 ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಪೊಲೀಸರನ್ನ ಕರೆಯಿಸಿಕೊಳ್ಳಲಾಗಿದೆ. 24/7 ಪೋಲಿಸರ ನಗರದಲ್ಲಿ ಕಾವಲಿರಿಸಲಾಗಿದೆ. 05 ಎಎಸ್ಪಿ , 14 ಡಿವೈಎಸ್ಪಿ, 40 ಇನ್ಸ್ಪೆಕ್ಟರ್, 75 ಸಬ್ ಇನ್ಸ್ಪೆಕ್ಟರ್, ಎಎಸ್ಐ, ಹೆಚ್.ಸಿ, ಪಿಸಿ ಮತ್ತು ಹೋಂ ಗಾರ್ಡ್ ಸಿಬ್ಬಂದಿ ನಿಯೋಜಿಸಲಾಗಿದೆ.
15 ಡಿಎಆರ್ ತುಕಡಿ, 20ಕೆಎಸ್ಆರ್.ಪಿ ತುಕಡಿ, ಭದ್ರಾವತಿಯ ಅಷ್ಟು ಆರ್.ಎ.ಎಫ್ ಕಂಪನಿಯನ್ನ ನಿಯೋಜಿಸಲಾಗಿದೆ. ಜೊತೆಗೆ 1000 ಸಿಸಿಕ್ಯಾಮರ ಅಳವಡಿಕೆ, 100ವಿಡಿಯೋ ಕ್ಯಾಮರಾ ಮತ್ತು 20 ಡ್ರೋಣ್ ಕ್ಯಾಮರಾಗಳನ್ನ ಅಳವಡಿಸಲಾಗಿದೆ.
ಮೆರವಣಿಗೆ ಮಾರ್ಗ ಮತ್ತು ಪ್ರಮುಖ ಸ್ಥಳಗಳಲ್ಲಿ ಕಣ್ಗಾವಲನ್ನ ಇರಿಸಲಾಗಿದೆ. ಈಗಾಲೇ 109 ಜನರನ್ನು ಗಡಿಪಾರು ಮಾಡಲಾಗಿದೆ.
Police route march in the backdrop of Hindu Mahasabha Ganapati's Rajbeedi festival
