SUDDILIVE || SHIVAMOGGA
ಮದ್ಯಂಗಡಿಯ ವಿರುದ್ಧ ಸ್ಥಳೀಯರ ಆಕ್ರೋಶ-Locals' anger against the Liquor shop
ಬೊಮ್ಮನ್ ಕಟ್ಟೆಯ ಲಾಸ್ಟ್ ಬಸ್ ಸ್ಟಾಪ್ ನಲ್ಲಿ ಬರುವ ಮದ್ಯದಂಗಡಿ ತೆರದಿದ್ದ ಹಿನ್ನಲೆಯಲ್ಲಿ ಸ್ಥಳೀಯರೆ ಪ್ರತಿಭಟಿಸಿ 112 ಗೆ ಕರೆ ಮಾಡಿ ಮದ್ಯದಂಗಡಿಯನ್ನ ಬಂದ್ ಮಾಡಿಸುರುವ ಘಟನೆ ವರದಿಯಾಗಿದೆ.
ನಾಳೆ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನೆಯ ಹಿನ್ನಲೆಯಲ್ಲಿ ಇಂದು ಸಂಜೆಯಿಂದ ಮತ್ತು ನಾಳೆ ಯಾವುದೇ ರೀತಿಯ ಮದ್ಯ ಮಾರಾಟಕ್ಕೆ ನಿರ್ಬಂಧವಿದೆ. ಈ ಹಿನ್ನಲೆಯಲ್ಲಿ ಬೊಮ್ಮನ್ ಕಟ್ಟೆಯ ಈ ಮದ್ಯದಂಗಡಿಯನ್ನ ಮುಚ್ಚಿಸಲಾಗಿದೆ.
ನಗರ ವ್ಯಾಪ್ತಿಯಲ್ಲಿ ಈ ಆದೇಶ ಜಾರಿಯಾಗಲಿದೆ. ಆದರೆ ಬೊಮ್ಮನ್ ಕಟ್ಟೆಯ ಕೊನೆಯ ಬಸ್ ನಿಲ್ದಾಣದ ಬಳಿಯ ಮದ್ಯದಂಗಡಿ ನಗರ ವ್ಯಾಪ್ತಿಗೆ ಬರಲಿದೆಯಾ ಅಥವಾ ಗ್ರಾಮಾಂತರ ಭಾಗದಲ್ಲಿ ಬರಲಿದೆಯಾ ಎಂಬುದನ್ನ ಪರಿಶೀಲಿಸಬೇಕಿದೆ.
ಆದರೆ ಪರಿಶೀಲಿಸುವ ಬದಲು ಸ್ಥಳೀಯರ ಆಗ್ರಹಕ್ಕೆ ಮದ್ಯದಂಗಡಿ ಮುಚ್ಚಲಾಗಿದೆ.
Locals' anger against the Liquor shop
