SUDDILIVE || SHIVAMOGGA
ಇಬ್ಬರು ಯುವಮುಖಂಡರ ನಡುವೆ ಮುಂದುವರೆದ ಜಟಾಪಟಿ-The argument between the two young leaders continued
ನಿನ್ನೆ ಬೆಂಗಳೂರಿನ ಜನತಾದಳ ಜಾತ್ಯಾತೀತ ಎಂಬ ಫೇಸ್ ಬುಕ್ ಪೇಜ್ ನಲ್ಲಿ ರೌಡಿಶೀಟರ್ ವಿಶ್ವ ಯಾನೆ ಮುದ್ದೆ ಮತ್ತು ಭದ್ರಾವತಿ ಕಾಂಗ್ರೆಸ್ ನ ಯುವ ಮುಖಂಡ ಬಸವೇಶ್ ನಡುವೆ ನಡೆದಿದೆ ಎನ್ನಲಾದ ಆಡಿಯೋವೊಂದು ವೈರಲ್ ಆದ ಬೆನ್ನಲ್ಲೇ ಅಜಿತ್ ಗೌಡ ಮತ್ತು ಬಸವೇಶ್ ನಡುವಿನ ಸಾಮಾಜಿಕ ಜಾಲತಾಣದಲ್ಲಿ ಜಟಾಪಟಿ ಮುಂದುವರೆದಿದೆ.
ಭದ್ರಾವತಿ ಶಾಸಕರ ಪುತ್ರ ಬಸವೇಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ 'ಹಲೋ ಮಿಸ್ಟರ್ 420 ಅಜಿತ್ ಗೌಡ್ರೆ, AI ತಂತ್ರಜ್ಞಾನವನ್ನು ತುಂಬಾ ನಿಪುಣರಂತೆ ಬಳಸಿಕೊಂಡು ನನ್ನ ಏಳಿಗೆ ಸಹಿಸಲಾಗದೆ ನನ್ನ ವಿರುದ್ಧ ನೀವು ರೂಪಿಸುರುವ ಈ ಷಡ್ಯಂತ್ರ ನನಗೂ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಹಾಗೂ ನಮ್ಮ ಕುಟುಂಬದ ಅಭಿಮಾನಿಗಳಿಗೆ ಹೊಸದೆನಲ್ಲ ನಿಮ್ಮ ಈ ನೌಟಂಕಿ ನಾಟಕವನ್ನು ನಂಬುವಷ್ಟು ದಡ್ಡರು ಎಡ್ಡರು ನಮ್ಮ ತಾಲೂಕಿನಲ್ಲಿ ಯಾರು ಇಲ್ಲ. ನಿಮಗೆ ತಾಕತ್ತು ಅನ್ನೋದು ಏನಾದ್ರು ಇದ್ರೆ.ಪೂರ್ತಿ ವಿಡೀಯೋ ಅಪಲೋಡ್ ಮಾಡಿ ಎಂದು ಸವಾಲು ಎಸೆದರೆ
ಈ ಸವಾಲನ್ನ ಅಜಿತ್ ಗೌಡರು ಸಾಮಾಜಿಕ ಜಾಕತಾಣದಲ್ಲಿ ಸ್ವೀಕರಿಸಿದ್ದು, ಮಿ.840 ಬಸವೇಶ್ ಅವರೆ ತಾಕತ್ತು ಇರುವುದಕ್ಕೆ ಆಡಿಯೋ ವಿಡಿಯೋ ಅಪಲೋಡ್ ಮಾಡಿದ್ದೇನೆ. AI ಯನ್ನ ನಾನ್ಯಾಕೆ ಬಸಳಸಲಿ ಎಂದು ಪ್ರತ್ಯುತ್ತರ ನೀಡಿದ್ದಾರೆ. ಹೀಗೆ ಇಬ್ಬರು ಯುವ ನಾಯಕರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುತ್ತಿದೆ. ಇವರಿಬ್ಬರ ನಡುವಿನ ತಿಕ್ಕಾಟ ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂಬುದನ್ನ ಕಾದು ನೋಡಬೇಕಿದೆ.
The argument between the two young leaders continued
