SUDDILIVE || SHIVAMOGGA
ಏರ್ ಪೋರ್ಟ್ ಗೆ ಹಿಡಿ ಶಾಪಹಾಕುತ್ತಿರುವ ಸಾರ್ವಜನಿಕರು, ಚರ್ಚೆಗೆ ಕಾರಣವಾಯಿತು ಸಂಸದರ ಹೇಳಿಕೆ-Public cursing the airport, MP's statement sparks debate
ಶಿವಮೊಗ್ಗ ಏರ್ ಪೋರ್ಟ್ ಗೆ ಸಾರ್ವಜನಿಕರು ಹಿಡಿ ಶಾಪಹಾಕುತ್ತಿರುವ ಬೆನ್ನಲ್ಲೇ ಸಂಸದ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಕೋಟ್ಯಾಂತರ ರೂ. ಹಣ ವ್ಯಯ ಮಾಡಿದ ನಂತರ ರಾಜ್ಯ ಸರ್ಕಾರಕ್ಕೆ ಏರ್ ಪೋರ್ಟ್ ಆಡಳಿತವನ್ನ ರಾಜ್ಯ ಸರ್ಕಾರಕ್ಕೆ ಕೊಡಬಾರದಿತ್ತು ಎಂಬ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
ನಿನ್ನೆ ಮಾಧ್ಯಮವೊಂದು ಶಿವಮೊಗ್ಗ ಏರ್ ಪೋರ್ಟ್ ನಲ್ಲಿ ಕಳೆದ ಎರಡು ದಿನದಿಂದ ಗೋವಾಕ್ಕೆ ವಿಮಾನವೂ ಸಿಗದೆ ಕಾಲಕಳೆಯುತ್ತಿದ್ದ ವಿಡಿಯೋವೊಂದು ವೈರಲ್ ಆಗಿದೆ. ಊಟವಿಲ್ಲದೆ ಏರ್ ಪೋರ್ಟ್ ನಲ್ಲಿ ಕೂಡಿಹಾಕಿದ ವಿಡಿಯೋವೊಂದು ವೈರಲ್ ಆಗಿದೆ.
ಈ ಬೆನ್ನಲ್ಲೇ ಎಂಪಿ ಅವರು ಶಿವಮೊಗ್ಗದ ಏರ್ ಪೋರ್ಟ್ ನ್ನ ರಾಜ್ಯ ಸರ್ಕಾರದ ಆಡಳಿತಕ್ಕೆ ತರಬಾರದಿತ್ತು ಎಂದು ಹೇಳುವ ಮೂಲಕ ಚರ್ಚೆಗೆ ದಾರಿ ಮಾಡಿಕೊಟ್ಟಿದ್ದಾರೆ. ಪ್ರಧಾನಿಯವರನ್ನ ಚುನಾವಣೆ ಸಂದರ್ಭದಲ್ಲಿ ಗಲ್ಲಿ ಗಲ್ಲಿಯಲ್ಲಿ ತಿರುಗಿಸಿದ ಬಿಜೆಪಿಗರು ಶಿವಮೊಗ್ಗದ ಏರ್ ಪೋರ್ಟ್ ನ್ನ ಅದ್ದೂರಿಯಾಗಿ ಓಪನ್ ಮಾಡಿಸಿ ಹಾರತುರಾಯಿ ಹಾಕಿಸಿಕೊಂಡಿದ್ದರು.
ಏರ್ ಪೋರ್ಟ್ ನ್ನ ಪೂರ್ಣಗೊಳಿಸಿ ನಂತರ ಆರಂಭಿಸಲು ಇವರನ್ನ ತಡೆದಿದ್ದುಯಾರು? ರಾಜ್ಯ ಸರ್ಕಾರದ ಆಡಳಿತಕ್ಕೆ ಬಂದರೆ ಈ ನಾಯಕರೆ ಚೆನ್ನಾಗಿರುತ್ತಿತ್ತು ಎಂಬ ಸಬೂಬು ಹೇಳಿಕೊಂಡು ಓಡಾಡಿದ್ದರು. ಒಂದು ಪಕ್ಕಾ ಯೋಜನೆಯಿಲ್ಲದೆ ಅವಸರಕ್ಕೆ ಉದ್ಘಾಟಿಸಿ ಸಾರ್ವಜನಿಕರ ತೆರಿಗೆ ಹಣವನ್ನ ಹಾಳು ಮಾಡಿ ಈಗ ಹಾಗೆ ಮಾಡಬಾರದಿತ್ತು. ಹೀಗೆ ಮಾಡಬಾರದಿತ್ತು ಎಂಬ ಸಂಸದರ ಹೇಳಿಕೆ ಚರ್ಚೆಗೆ ಕಾರಣವಾಗಿದೆ.
Public cursing the airport, MP's statement sparks debate
