SUDDILIVE || SHIVAMOGGA
ಸಿದ್ದರಾಮಯ್ಯನವರ ಆಳ್ವಿಕೆ ಬ್ರಿಟೀಶರು ಹಾಗೂ ನಿಜಾಮರನ್ನೇ ನಾಚಿಸುವಂತಿದೆ-ಬಿವೈವಿ-Siddaramaiah's government is ruling in a way that would put the British and Nizams to shame - BYV
ಒಂದಲ್ಲ ಎರಡಲ್ಲ, ಹಲವಾರು ಬಾರಿ ಸಿದ್ದರಾಮಯ್ಯ ರಾಜ್ಯದಲ್ಲಿ ಹಿಂದೂಗಳನ್ನ ಒಡೆಯುವ ಕೆಲಸಕ್ಕೆ ಕೈಹಾಕಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ಆರೋಪಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದ ಭಕ್ತರಿಗೆ ಭಕ್ತಿಗೆ ಕೊಡಲಿಪೆಟ್ಟು ಬೀಳುವ ಹಾಗೆ, ತಾಯಿ ಚಾಮುಂಡಿ ವಿಷಯದಲ್ಲೂ ಅಪಮಾನ ಮಾಡಲಾಗಿದೆ. ಗಣಪತಿ ಹಬ್ಬಕ್ಕೆ ಕಲ್ಲು ಹಾಕಿದ್ದಾರೆ. ಹೊಸ ಹೊಸ ಕಾನೂನು ಸೃಷ್ಠಿಸಿ ವಿಸರ್ಜನೆಗೆ ನಿರಬಂಧಿಸಲಾಗಿದೆ. ಇದು ದುರ್ಬುದ್ದಿಯಾಗಿದೆ ಎಂದರು.
ಹಿಂದೂ ಹೋರಾಟಗಾರ ಪುನಿತ್ ಕೆರೆಹಳ್ಳಿಯನ್ನ ಬಂಧಿಸಲಾಗಿದೆ. ಶರಣ್ ಪಂಪವೆಲ್ ರನ್ನ ಚಿತ್ರದುರ್ಗ ಪ್ರವೇಶಿಸದಂತೆ ತಡೆಯಲಾಗಿದೆ. ಜಾತಿ ಜನಗಣತಿಯಲ್ಲಿ ಹಿಂದೂ ಧರ್ಮವನ್ನ ಒಡೆಯುತ್ತಿದ್ದಾರೆ. ಇದು ಒಂದು ರಾಜ್ಯದ ಸಿಎಂ ಕೆಲಸನಾ ಎಂದು ಪ್ರಶ್ನಿಸಿದರು.
ಬ್ರಿಟಿಶ್ ಆಶ್ವಿಕೆಗಿಂತ ಟಿಪ್ಪು, ನಿಜಾಮರ ಆಳ್ವಿಕೆಯನ್ನೂ ನಾಚಿಸುವಂತೆ ಸಿದ್ದರಾಮಯ್ಯನವರ ಆಳ್ವಿಕೆ ಹೊರಟಿದೆ. ಧರ್ಮೋ ರಕ್ಷಿತೋ ರಕ್ಷಿತ ಎಂಬಂತೆ ಜನ ಶಾಪ ಹಾಕುತ್ತಿದ್ದು ಅವರೇ ಬುದ್ದಿಕಲಿಸುತ್ತಾರೆ. ಹಿಂದೂ ಧರ್ಮದ ಎಲ್ಲಾ ಜಾತಿ ಧರ್ಮದವರು ಸಿದ್ದರಾಮಯ್ಯನವರ ಕುತಂತ್ರಕ್ಕೆ ಬಲಿಯಾಗುವುದು ಬೇಡ ಎಂದು ಕರೆ ನೀಡಿದರು.
ಜಾತಿ ಜನಗಣತಿಯ ಸರ್ವೆಯಲ್ಲಿ ನಮ್ಮ ಧರ್ಮದ ಕಾಲಂನಲ್ಲಿ ತಪ್ಪದೆ ಹಿಂದೂ ಎಂದೇ ನಮೂದಿಸಬೇಕು. ಯಾಕೆಂದರೆ ಐಕ್ಯತೆಯ ಸಿಂಬಲ್ ಆಗಿ ಹಿಂದೂ ಧರ್ಮವನ್ನ ಬಳಸಿಕೊಳ್ಳಬೇಕಿದೆ. 47 ಹೊಸ ಜಾತಿ ಸೃಷ್ಠಿಸಲಾಗಿದೆ ಲಿಂಗಾಯಿತ ಕ್ರಿಶ್ಚಿಯನ್ ಮಾದಿಗ ಕ್ರಿಶ್ಚಿಯನ್ ಎಂದು ನಮೂದಿಸಲಾಗಿದೆ. ಈ ಹಕ್ಕನ್ನ ಯಾರು ಕೊಟ್ಟಿದ್ದು. ವರ್ಗೀಕರಣ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹಿಂದೂ ಸಮಾಜದ ಕಾರ್ಯಕರ್ತನಾಗಿ ಹೇಳುವೆ. ಯಾರಿಗೂ ದುರ್ಬಿದ್ದಿ ಬರಬಾರದಿತ್ತು. ರಾಜ್ಯ ಪಶ್ಚಾತಾಪ ಪಡುವಂತಾಗಿದೆ. ಅಭಿವೃದ್ಧಿಯನ್ನ ಮರೆತು ಹಿಂದೂ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಲಿಂಗಾಯಿತ ರಾಜಕೀಯ ಚಿಂತನ ಶಿಬಿರದಲ್ಲಿ ಒಂದು ತೀರ್ಮಾನವಾಗಿ ಲಿಂಗಾಯಿತರು ಹಿಂದೂ ಎಂದೇ ನಮೂದಿಸಬೇಕು ಎಂದು ತೀರ್ಮಾನಿಸಲಾಗಿದೆ. ಆಧ್ಯತೆ ಮೇರಗೆ ಹಿಂದೂ ಎಂದು ಬರೆಯಬೇಕು. ಮತಗಳ್ಳತನ ವನ್ನ ರಾಹುಲ್ ಗಾಂಧಿ ಸಿಎಂ ಮತ್ತು ಡಿಕೆಶಿ ಪರಿಶೀಲಿಸಬೇಕು. ಪ್ರಧಾನಿಮೋದಿ 11 ವರ್ಷದಿಂದ ದೇಶವನ್ನು ಮುಂದು ನಡೆಸುತ್ತಿದ್ದಾರೆ. ರಾಹುಲ್ ಗಾಂಧಿವರ ಕಾಂಗ್ರೆಸ್ 67 ವರ್ಷದಲ್ಲಿ ಏನೂ ಮಾಡಿದರು ಎಂದು ಪ್ರಶ್ನಿಸಿದರು.
ರಾಜ್ಯದ 224 ಕ್ಷೇತ್ರದಲ್ಲಿ ಗುಂಡಿ ತುಂಬಿದೆ ಜನ ಶಾಪಹಾಕುತ್ತಿದ್ದಾರೆ. ಸೆ.24 ರಂದು ಎಲ್ಲಾ ಕ್ಷೇತ್ರದಲ್ಲಿ ಗುಂಡಿ ಮುಚ್ಚಿ ಎಂಬ ಅಭಿಯಾನದ ಅಡಿ ಒಂದು ಗಂಟೆಗಳ ಕಾಲ ಪ್ರತಿಭಟಿಸಲಾಗುತ್ತಿದೆ. ರಸ್ತೆ ತಡೆ ಮಾಡಲಾಗುತ್ತಿದೆ ಎಂದರು.
Siddaramaiah's government is ruling in a way that would put the British and Nizams to shame - BYV
