33 ಜಾತಿಗಳ ಜೊತೆಗಿನ ಕ್ರಿಶ್ಚಿಯನ್ ಪದ ನಿಷ್ಕ್ರಿಯ- The Christian word passive with 33 species

 SUDDILIVE ||

33 ಜಾತಿಗಳ ಜೊತೆಗಿನ ಕ್ರಿಶ್ಚಿಯನ್ ಪದ ನಿಷ್ಕ್ರಿಯ- The Christian word passive with 33 species     

Christian, species



ಹಿಂದೂ ಜಾತಿಗಳ ಹೆಸರಿನ ಜೊತೆ ಕ್ರಿಶ್ಚಿಯನ್ ಪದ ನಿಷ್ಕ್ರಿಯತೆಗೆ ರಾಜ್ಯಸರ್ಕಾರ ಕ್ರಮ ತೆಗೆದುಕೊಂಡಿದೆ. 47 ಜಾತಿಗಳ ಜೊತೆ ಕ್ರಿಶ್ಚಿಯನ್ ಪದ ಸೇರಿಸಿದ್ದರಿಂದ ಹಿಂದೂ ಸಂಘಟನೆಗಳು ಮತ್ತು ನಾಯಕರು ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಹಿಂದುಳಿದ ವರ್ಗಗಳ ಆಯೋಗ 33 ಹಿಂದೂ ಜಾತಿಗಳ ಜೊತೆ ಕ್ರಿಶ್ಚಿಯನ್ ಪದಗಳನ್ನಾಪ್ ಡ್ರಾಪ್ ಡೌನ್ ನಲ್ಲಿ ತೆಗೆದುಹಾಕಿದೆ.

ಬೆಂಗಳೂರು ಹೊರತು ಪಡಿಸಿ, ಇಂದಿನಿಂದ ರಾಜ್ಯ ಸರ್ಕಾರ ಮುಂದಿನ 15 ದಿನಗಳ ವರೆಗೆ ಜಾತಿಗಣತಿ ನಡೆಸಲು  ನಿರ್ಧರಿಸಿದೆ. ಈ ಬೆನ್ನಲ್ಲೇ ಆಯೋಗ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ನಿಷ್ಕ್ರಿಯೆಗೊಂಡ ಜಾತಿಗಳ ಜೊತೆಗಿನ ಕ್ರಿಶ್ಚಿಯನ್ ಪದ

ಅಕ್ಕಸಾಲಿಗ ಕ್ರಿಶ್ಚಿಯನ್, ಬಣಜಿಗ ಕ್ರಿಶ್ಚಿಯನ್ ಬಾರಿಕಾರ್ ಕ್ರಿಶ್ಚಿಯನ್, ಬೆಸ್ತರ್ ಕ್ರಿಶ್ಚಿಯನ್, ಬಿಲ್ಲವ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್, ಚರೋಡಿ ಕ್ರಿಶ್ಚಿಯನ್, ದೇವಾಂಗ ಕ್ರಿಶ್ಚಿಯನ್ ಈಡಿಗ ಕ್ರಿಶ್ಚಿಯನ್ ಗೊಲ್ಲ ಕ್ರಿಶ್ಚಿಯನ್, ಗೊಂಡ ಲಾಲಗೊಂಡ ಕ್ರಿಶ್ಚಿಯನ್, ಗೌಡಿ ಕ್ರಿಶ್ಚಿಯನ್ ಜಲಗಾರ ಕ್ರಿಶ್ಚಿಯನ್ ಜಂಗಮ ಕ್ರಿಶ್ಚಿಯನ್, ಕಮ್ಮ ಕ್ರಿಶ್ಚಿಯನ್, ಕಮ್ಮ ನಾಯ್ಡು ಕ್ರಿಶ್ಚಿಯನ್, ಕಂಸಾಳೆ ಕಂಸಾಳೆ ಕ್ರಿಶ್ಚಿಯನ್ ಕುರುಬ ಕ್ರಿಶ್ಚಿಯನ್ ಮಡಿವಾಳ ಕ್ರಿಶ್ಚಿಯನ್ ಮಾಂಗ ಕ್ರಿಶ್ಚಿಯನ್ ಮೊದಲಿಯಾರು ಕ್ರಿಶ್ಚಿಯನ್,  ನಾಡರ್ ಕ್ರಿಶ್ಚಿಯನ್ ನೇಕಾರ ಕ್ರಿಶ್ಚಿಯನ್, ಪಡೆಯಚಿ ಕ್ರಿಶ್ಚಿಯನ್ ಕ್ರಿಶ್ಚಿಯನ್ ಸೆಟ್ಟಿ ಬಲಿಜ ಕ್ರಿಶ್ಚಿಯನ್, ಸುದ್ದಿ ಕ್ರಿಶ್ಚಿಯನ್ ತಿಗಳ ಕ್ರಿಶ್ಚಿಯನ್ ತುಳು ಕ್ರಿಶ್ಚಿಯನ್ ವೈಶ್ಯ ಶೆಟ್ರು ಕ್ರಿಶ್ಚಿಯನ್ ವಿಶ್ವಕರ್ಮ ಕ್ರಿಶ್ಚಿಯನ್ ಒಕ್ಕಲಿಗ ಕ್ರಿಶ್ಚಿಯನ್ ವೈಶ್ಯ ಬ್ರಾಹ್ಮಣ ಕ್ರಿಶ್ಚಿಯನ್

ಜಾತಿಗಳ ಪಟ್ಟಿಯನ್ನು ಪ್ರಕಟಿಸಿ ಈಗಾಗಲೇ ಯಾವುದಾದರೂ ಜಾತಿಯ ಹೆಸರು ಬಿಟ್ಟು ಹೋಗಿದ್ದರೆ ಸೇರ್ಪಡೆಗೂ ಅವಕಾಶ ನೀಡಲಾಗಿದೆ. ಅದರಂತೆ 148 ಜಾತಿಗಳ ಹೆಸರು ಸೇರ್ಪಡೆ ಮಾಡಲಾಗಿತ್ತು ಆ ಮೂಲಕ1413 ಜಾತಿಗಳ ಜೊತೆ, 148 ಜಾತಿಗಳನ್ನು ಸೇರಿಸಿ 1561 ಜಾತಿಗಳ ಪಟ್ಟಿಯನ್ನುಆಪ್ ನ ಡ್ರಾಪ್ ಡೌನ್ಲೋಡ್ ನಲ್ಲಿ ಹಾಕಲಾಗಿತ್ತು ಆದರೆ ಈ ಪಟ್ಟಿಯ ಬಗ್ಗೆ ಜನರಲ್ಲಿ ಗೊಂದಲ ಸೃಷ್ಟಿ ಆಗಿರುವ ಬಗ್ಗೆ ಸಚಿವರ ತಂಡ ಕಳಕಳಿ ವ್ಯಕ್ತಪಡಿಸಿತ್ತು ಹೀಗಾಗಿ ಆಯೋಗದ ಸದಸ್ಯರೊಂದಿಗೆ ಚರ್ಚಿಸಿ 33 ಜಾತಿಗಳನ್ನು ನಿಷ್ಕ್ರಿಯಗೊಳಿಸಲು ತೀರ್ಮಾನಿಸಲಾಯಿತು ಎಂದು ಮಾಧ್ಯಮವೊಂದು ಪ್ರಕಟಿಸಿದೆ.

ವೀರಶೈವ ಧರ್ಮದ ಕುರಿತು ಸ್ಷಷ್ನನೆ

ವೀರಶೈವ ಮಹಾಸಭಾಧರ್ಮದ ಕಾಲಂನಲ್ಲಿ ಇತರೆ ಅಥವಾ ವೀರಶೈವ ಲಿಂಗಾಯತ ಧರ್ಮ ಎಂಬುದಾಗಿ ದಾಖಲಿಸುವಂತೆ ಕರೆ ನೀಡಿರುವ ಹಿನ್ನೆಲೆಯಲ್ಲಿ,  ಧರ್ಮದ ಕಾಲಮ್‌ನಲ್ಲಿ ಸ್ವ ಇಚ್ಛೆಯಿಂದ ಏನು ಬೇಕಾದರೂ ನಮೂದಿಸಿಕೊಳ್ಳಬಹುದು ಆದರೆ ಜಾತಿ ಕಾಲಮ್‌ನಲ್ಲಿ ಲಿಂಗಾಯತ ವೀರಶೈವ ಲಿಂಗಾಯತ ಎಂಬುದಾಗಿ ದಾಖಲಿಸಿದರೆ ಅವುಗಳನ್ನು ಒಗ್ಗೂಡಿಸಿಯೇ ವಿಶ್ಲೇಷಿಸಲಾಗುವುದು ಎಂದು ಆಯೋಗದ ಅಧ್ಯಕ್ಷ ಮಧುಸೂಧನ್ ನಾಯ್ಕ್ ಸುದ್ದಿಗೋಷ್ಢಿಯಲ್ಲಿ ಸ್ಪಷ್ಟಪಡಿಸಿದ್ದಾರೆ. 

The Christian word passive with 33 species

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close