SUDDILIVE || SHIVAMOGGA
ತಾಳಗುಪ್ಪ ಮೈಸೂರು ರೈಲು ನ.2 ರಿಂದ ಹೊಸ ಟೈಮ್ ಟೇಬಲ್ ನಲ್ಲಿ ಚಲಿಸಲಿದೆ-Thalaguppa Mysore train will run on new time table from Nov.2
ತಾಳಗುಪ್ಪ – ಮೈಸೂರಿನ ರೈಲಿನ ವೇಳಾಪಟ್ಟಿ (Timetable) ಬದಲಾಗಿದೆ. ನವೆಂಬರ್ 2ರಿಂದ ಹೊಸ ಟೈಮ್‌ಟೇಬಲ್‌ನಂತೆ ರೈಲು ಸಂಚರಿಸಲಿದೆ ಎಂದು ಸಂಸದರು ತಿಳಿಸಿದ್ದಾರೆ.
ತಾಳಗುಪ್ಪ – ಮೈಸೂರು ಕುವೆಂಪು ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16221) ಈಗ ಬೆಳಗ್ಗೆ 6.15ಕ್ಕೆ ತಾಳಗುಪ್ಪದಿಂದ ಹೊರಟು ಮಧಾಹ್ನ 3.35ಕ್ಕೆ ಮೈಸೂರು ತಲುಪುತ್ತಿದೆ. ನವೆಂಬರ್ 2ರಿಂದ ಈ ರೈಲು ಬೆಳಗ್ಗೆ 5.50ಕ್ಕೆ ತಾಳಗುಪ್ಪದಿಂದ ಹೊರಟು ಮಧ್ಯಾಹ್ನ 3.30ಕ್ಕೆ ಮೈಸೂರು ನಿಲ್ದಾಣ ತಲುಪಲಿದೆ.
ಕುವೆಂಪು ಎಕ್ಸ್‌ಪ್ರೆಸ್ ರೈಲು ಸಂಚರಿಸುವ ಮಾರ್ಗದ ಪ್ರಮುಖ ನಿಲ್ದಾಣಗಳ ಹೊಸ ಮತ್ತು ಹಳೆಯ ಟೈಮಿಂಗ್ ಇಲ್ಲಿದೆ. ಇದು ಹೊರಡುವ ಸಮಯ.
ನಿಲ್ದಾಣಈಗಿನ ಟೈಮಿಂಗ್‌ಹೊಸ ಟೈಮ್‌ಟೇಬಲ್‌ತಾಳಗುಪ್ಪಬೆಳಗ್ಗೆ 6.15ಬೆಳಗ್ಗೆ 5.50ಸಾಗರ ಜಂಬಗಾರುಬೆಳಗ್ಗೆ 6.35ಬೆಳಗ್ಗೆ 6.10ಶಿವಮೊಗ್ಗಬೆಳಗ್ಗೆ 8.20ಬೆಳಗ್ಗೆ 7.55ಭದ್ರಾವತಿಬೆಳಗ್ಗೆ 8.45ಬೆಳಗ್ಗೆ 8.20ತರೀಕೆರೆಬೆಳಗ್ಗೆ 9.15ಬೆಳಗ್ಗೆ 8.43ಬೀರೂರುಬೆಳಗ್ಗೆ 10.20ಬೆಳಗ್ಗೆ 9.35ಅರಸೀಕೆರೆಬೆಳಗ್ಗೆ 11.20ಬೆಳಗ್ಗೆ 10.50ಹಾಸನಮಧ್ಯಾಹ್ನ 12.30ಬೆಳಗ್ಗೆ 11.47ಹೊಳೆನರಸೀಪುರಮಧ್ಯಾಹ್ನ 1.10ಮಧ್ಯಾಹ್ನ 12.27ಮೈಸೂರುಮಧ್ಯಾಹ್ನ 3.35 ತಲುಪಲಿದೆ.
ಸಿದ್ದಗಂಗಾ ಎಕ್ಸ್‌ಪ್ರೆಸ್ ಮತ್ತು ಪುದುಚೇರಿ ಎಕ್ಸ್‌ಪ್ರೆಸ್ ರೈಲುಗಳು ಬೀರೂರಿಗೆ ಬೆಳಗ್ಗೆ 9.50ರ ಹೊತ್ತಿಗೆ ತಲುಪುತ್ತವೆ. ಇವುಗಳಿಗಿಂತಲು ಮುಂಚೆ ಕುವೆಂಪು ಎಕ್ಸ್‌ಪ್ರೆಸ್ ರೈಲು ಅಲ್ಲಿಗೆ ತಲುಪಿದರೆ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಸದ್ಯ ಕುವೆಂಪು ಎಕ್ಸ್‌ಪ್ರೆಸ್ ರೈಲು ಬೆಳಗ್ಗೆ 10.20ಕ್ಕೆ ಬೀರೂರು ತಲುಪುತ್ತಿದೆ. ಈ ರೈಲು ಬೆಳಗ್ಗೆ 9.35 ಅಥವಾ ಬೆಳಗ್ಗೆ 9.40ಕ್ಕೆ ಬೀರೂರು ತಲುಪಿದರೆ ಅನುಕೂಲವಾಗಲಿದೆ ಎಂದು ಸಂಸದರು ಮನವಿ ಮಾಡಿಕೊಂಡಿದ್ದು, ಸಂಸದರ ಮನವಿಗೆ ಸ್ಪಂದಿಸಿದ ರೈಲ್ವೆ ಇಲಾಖೆ ಕುವೆಂಪು ಎಕ್ಸ್‌ಪ್ರೆಸ್ ರೈಲಿನ ಸಮಯ ಬದಲಿಸಿದೆ.
Thalaguppa Mysore train will run on new time table from Nov.2