ಪ್ರತಿಷ್ಠಿತ ಶಾಲೆಯಲ್ಲಿದ್ದ ಮರ ಬೋಳಿಸಿದ ಪ್ರಕರಣ-ಎರಡು ದಿನಗಳ ನಂತರ ಬೆಳಕಿಗೆ ಬಂತು ಶಾಲೆಯ ಉದ್ಧಟತನ? the school's arrogance came to light two days later

SUDDILIVE || THIRTHAHALLI

ಪ್ರತಿಷ್ಠಿತ ಶಾಲೆಯಲ್ಲಿದ್ದ ಮರ ಬೋಳಿಸಿದ ಪ್ರಕರಣ-ಎರಡು ದಿನಗಳ ನಂತರ ಬೆಳಕಿಗೆ ಬಂತು ಶಾಲೆಯ ಉದ್ಧಟತನ?The case of the felling of a tree at a prestigious school - the school's arrogance came to light two days later?

School, treecut


ಕೋಣಂದೂರಿನಲ್ಲಿ ಸರ್ಕಾರಿ ಅನುದಾನಿತ ಶಿಕ್ಷಣ ಸಂಸ್ಥೆಯೊಂದು ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಮರಕಡಿದಿರುವುದು ಮತ್ತು ಮರದಲ್ಲಿದ್ದ ಪಕ್ಷಿ‌ಗಳು ಸತ್ತಿರುವುದು ತೀರ್ವ್ರ ಆಕ್ಷೇಪಕ್ಕೆ ಕಾರಣವಾಗಿದೆ. 

ತೀರ್ಥಹಳ್ಳಿ ಕೋಣಂದೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಿಂದ ಅನಾಚಾರ‌ ನಡೆದಿದೆ. ಪಕ್ಷಿಗಳ ಕಾಟ ಎಂದು ಇಲಾಖೆ ಅನುಮತಿಯನ್ನೂ ಪಡೆಯದೇ ಮರಗಳನ್ನು ಬೋಳಿಸಿರುವುದು ಅಲ್ಲಿ ವಿದ್ಯಾರ್ಥಿಗಳಿಂದಲೇ ಆಕ್ಷೇಪಕ್ಕೆ ಕಾರಣವಾಗಿದೆ. ಕೆಲ ಮರಗಳನ್ನೂ ಕಡಿದಿರೋ ಬಗ್ಗೆ ವಿದ್ಯಾರ್ಥಿಗಳಿಂದಲೇ ಆರೋಪ ಕೇಳಿ ಬರುತ್ತಿದೆ. 

ಘಟನೆ ನಡೆದು ಎರಡು ದಿನಗಳಾದರೂ ಇಲಾಖೆಗೆ ಮಾಹಿತಿಯೇ ಇಲ್ಲ ಎಂಬುದೇ ಅಚ್ಛರಿಯ ವಿಷಯವಾಗಿದೆ.‌ ನಮ್ಮ ಜಾಗದಲ್ಲಿರೋ ಮರ ಏನು ಬೇಕಾದರೂ ಮಾಡ್ತೀವಿ ಎಂದು ಶಾಲಾ ಆಡಳಿತ ಮಂಡಳಿ ಹೇಳುತ್ತಿರುವುದು ಮಾಹಿತಿ ಕೊರತೆಯೋ ಅಥವಾ ಉದ್ಧಟತನದ ಪರಮಾವಧಿಯೋ ತಿಳಿಯಬೇಕಿದೆ. 

ಕೋಣಂದೂರು ಹೆದ್ದಾರಿಗಾಗಿ ಇಕ್ಕೆಲಗಳಲ್ಲಿ ಇಲಾಖೆಯೇ ಮುಂದು ನಿಂತು ಮರಗಳನ್ನು ಧರೆಗೆ ಉರುಳಿಸಿದ ನಂತರ ಈ ಹಕ್ಕಿಗಳು ಈ ಭಾಗದಲ್ಲಿ ಆಶ್ರಯ ಪಡೆದಿರುವ ಮಾಹಿತಿ ಲಭ್ಯವಾಗಿದೆ. ಪ್ರಾಣಿ ಪಕ್ಷಿಗಳ ಬಗ್ಗೆ ಪ್ರೇಮವಿಲ್ಲದ ಕಾರಣ ಈ ದುರಂತಕ್ಕೆ ಕಾರಣವಿರುವ ಶಂಕೆಯಿದೆ. ಅರಣ್ಯೆ ಇಲಾಖೆಗೆ ಎರಡು ದಿನಗಳ ನಂತರ ಗೊತ್ತಾಗಿರುವುದೇ ಅಚ್ಚರಿ‌ಮೂಡಿಸುವ ಸಂಗತಿಯಾಗಿದೆ. ಈ ಚಂದಕ್ಕೆ ಅರಣ್ಯ ಇಲಾಖೆ ಯಾಕಿದೆ ಎಂಬುದು ಎಲ್ಲರ ಪ್ರಶ್ನೆ. ಈಗ ಅಲ್ಲಿನ ಆರ್ ಎಫ್ ಒ‌ ಶಾಲೆ ಭೇಟಿ ನೀಡಿರುವುದಾಗಿ ತಿಳಿದುಬಂದಿದೆ.

the school's arrogance came to light two days later

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close