SUDDILIVE || SHIVAMOGGA
ಮಟ್ಕಾ ದಂಧೆ ನಿಯಂತ್ರಣ ಮಾಡುವಲ್ಲಿ ಅಧಿಕಾರಿಗಳು ವಿಫಲ ಸಾರ್ವಜನಿಕರಿಂದ ಮುಖ್ಯ ಮಂತ್ರಿಗಳಿಗೆ ದೂರು-The public has complained to the Chief Minister that the authorities have failed to control the Matka racket
ಪಟ್ಟಣದ ಠಾಣಾ ವ್ಯಾಪ್ತಿಯಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಮಟ್ಕಾ ದಂಧೆ ಯನ್ನು ನಿಯಂತ್ರಣ ಮಾಡುವಲ್ಲಿ ಸ್ಥಳೀಯ ಅಧಿಕಾರಿಗಳು ವಿಫಲವಾಗಿದ್ದಾರೆ ಹಲವಾರು ಬಾರಿ ದೋರುಗಳು ನೀಡಿದರೂ ಅಧಿಕಾರಿಗಳು ಯಾವುದೇ ತರದ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ಸಾರ್ವಜನಿಕರು ಉಪ-ತಹಸೀಲ್ದಾರ್ ಕಚೇರಿ ಮುಖಾಂತರ ಸರಕಾರಕ್ಕೆ ಮನವಿ ನೀಡಿದರು.
ಮುಖ್ಯ ಮಂತ್ರಿಗಳು ಸೇರಿದಂತೆ ಗೃಹ ಇಲಾಖೆ,ಶಿವಮೊಗ್ಗ ಸಂಸದರು, ಶಿಕಾರಿಪುರದ ಶಾಸಕರು, ಜಿಲ್ಲಾಧಿಕಾರಿಗಳು, ಜಿಲ್ಲಾ ರಕ್ಷಣಾಧಿಕಾರಿಗಳು ಮತ್ತು ಜಿಲ್ಲಾ ಲೋಕಾಯುಕ್ತ ಇಲಾಖೆಗೆ ಪತ್ರದ ಮುಖಾಂತರ ದೊರು ನೀಡಿದ ಸ್ಥಳೀಯರು, ಮಹಿಳಾ ಸಂಘಟನೆಗಳು ಪಟ್ಟಣದಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಮಟ್ಕಾ ದಂಧೆಯನ್ನು ನಿಯಂತ್ರಣ ಆಗಲಿಲ್ಲ ಎಂದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಸಮಾಜ ಸೇವಕ ನವೀದ್ ಶಿರಾಳಕೊಪ್ಪ ಪಟ್ಟಣದ ಠಾಣಾ ವ್ಯಾಪ್ತಿಯಲ್ಲಿ ನಗರ ಮತ್ತು ಅಕ್ಕ ಪಕ್ಕದ ಹಳ್ಳಿಗಳು ಸೇರಿದಂತೆ ಸುಮಾರು 150ಕಡೆ ಗಳಲ್ಲಿ ಮಟ್ಕಾ ಬರೆಯಲಾಗುತ್ತಿದ್ದು ತಿಂಗಳಿಗೆ ಅಂದಾಜು ಎರಡರಿಂದ ಎರಡೂವರೆ ಕೋಟಿಯ ಅನಧಿಕೃತ ವಹಿವಾಟು ನಡುಯುತ್ತಿದೆ. ಬಡವರು ಕಷ್ಟ ಪಟ್ಟಿ ದುಡಿದ ಹಣ ಮಟ್ಕಾ ಆಟಕ್ಕೆ ಆಹುತಿ ಕೊಡುತ್ತಿದ್ದು ಇದರಿಂದಾಗಿ ಸಮಾಜದಲ್ಲಿ ಅನೈಕ್ತಿಕ ಚಟುವಟಿಕೆ ಗಳ ಹಾವಳಿ ಹೆಚ್ಚಾಗಿದೆ ಎಂದರು.
ಯುವ ಮುಖಂಡ ಫೌಜಾನ್ ಗಾಂಧಿ ಮಾತನಾಡಿ ಸರಕಾರಗಳು ಬಡವರು ಸ್ವಾವಲಂಬಿಯಾಗಿ ಬದುಕಬೇಕೆಂಬ ಸದುದ್ದೇಶದಿಂದ ವಿವಿಧ ಜನಪರ ಕಾರ್ಯಕ್ರಮಗಳು ಕೊಡುವುದರ ಮುಖಾಂತರ ಬಡವರಿಗೆ ನೆಮ್ಮದಿ ತಂದು ಕೊಟ್ಟರೆ ಈ ರೀತಿಯ ಅನೈತಿಕ ಚಟುವಟಿಕೆಗಳಿಂದಾಗಿ ಬಡವರು ಮತ್ತೊಂದಿಷ್ಟು ಬಡವರಾಗಿತ್ತಿದ್ದಾರೆ. ಪಟ್ಟಣದಲ್ಲಿ ಖುಲ್ಲಮ್ ಖುಲ್ಲ ನಡೆಯುತ್ತಿರುವ ಮಟ್ಕಾ ದಂದೆಯ ಮಾಹಿತಿಯು ಅಧಿಕಾರಿಗಳ ಗಮನಕ್ಕಿದ್ದರೂ ಸಹ ಅಧಿಕಾರಿಗಳು ಏನೂ ಮಾಡದೆ ಬೇಜಾವಾಬ್ದಾರಿತನ ಮೇರೆಯುತ್ತಿದ್ದಾರೆ. ಪಟ್ಟಣ ವ್ಯಾಪ್ತಿಯಲ್ಲಿ ಆದಷ್ಟು ಬೇಗ ಮಟ್ಕಾ ನಿಯಂತ್ರಣ ಆಗದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಉಪ- ತಹಸೀಲ್ದಾರ್ ಪರವಾಗಿ ಗ್ರಾಮ ಲೆಕ್ಕಾಧಿಕಾರಿಗಳಾದ ಹರ್ಷ ಮನವಿ ಸ್ವೀಕರಿಸಿದರು.ಊರಿನನ ಹಿರಿಯ ನಾಗರೀಕರಾದ ಮುರುಗಯ್ಯ ಸ್ವಾಮಿ ರವರು ಮಾರ್ಗದರ್ಶನದಲ್ಲಿ ನಡೆದ ಮನವಿ ಸಲ್ಲಿಕೆ ಕಾರ್ಯದಲ್ಲಿ ಮುಖಂಡರಾದ ಯುನುಸ್ ಹಾನಗಲ್, ಖಲೀಲ್ ಅಹ್ಮದ್, ಅಬ್ಬಾಸ್ ಬಿಳಿಕಿ, ದಾದಾ ಪೀರ್, ಮಕ್ಬೂಲ್ ಬಿಳಿಕಿ, ಅಶೋಕ, ಮಾರುತಿ, ಮೆಹಬೂಬ್ ಅಲಿ, ಇಲಿ ಯಾಸ್ ಸಾಬ್, ಬಸವಣ್ಯಪ್ಪ, ಮಕ್ಬೂಲ್, ಮತ್ತಿತರರು ಇದ್ದರು.
The public has complained to the Chief Minister that the authorities have failed to control the Matka racket
