SUDDILIVE || SHIVAMOGGA
45 ವಾಹನಗಳ ಹರಾಜು ಅ.13 ರಂದು- Auction of 45 vehicles on October 13th
ತುಂಗಾ ನಗರ ಪೊಲೀಸ್ ಠಾಣೆಯಲ್ಲಿ 45 ವಾಹನಗಳ ಬಹಿರಂಗ ಹರಾಜು ಪ್ರಕ್ರಿಯೆಯು ಅಕ್ಟೋಬರ್ 13ರಂದು ನಡೆಯಲಿದೆ
ತುಂಗಾನಗರ ಪೊಲೀಸ್ ಠಾಣಾ ಆವರಣದಲ್ಲಿ ವಾರಸುದಾರರು ಪತ್ತೆಯಾಗದೆ 45 ವಿವಿಧ ವಾಹನಗಳು ಉಳಿದುಕೊಂಡಿದ್ದು, ಇವುಗಳ ಹರಾಜು ನಡೆಸಲು 5 ನೇ ಎಸಿಜೆ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯವು ಆದೇಶಿಸಿದೆ.
ನ್ಯಾಯಾಲಯದ ಆದೇಶದ ಮೇರೆಗೆ ಅಕ್ಟೋಬರ್ 13ರಂದು ಬೆಳಿಗ್ಗೆ 9:00ಗೆ ಠಾಣಾ ಆವರಣದಲ್ಲಿ ಬಹಿರಂಗ ಹರಾಜು ಪ್ರಕ್ರಿಯೆಯು ನಡೆಯಲಿದ್ದು ಸಾರ್ವಜನಿಕರು ಹರಾಜಿನಲ್ಲಿ ಭಾಗವಹಿಸಲು ಪೊಲೀಸ್ ಇಲಾಖೆ ಮನವಿ ಮಾಡಿಕೊಂಡಿದೆ.
Auction of 45 vehicles on October 13th
