ad

ಜಾತಿ ಸಮೀಕ್ಷೆಗೆ ಮೂರು ಪ್ರಮುಖ ಸಮುದಾಯದ ಮನವಿ

 SUDDILIVE || SHIVAMOGGA

ಜಾತಿ ಸಮೀಕ್ಷೆಗೆ ಮೂರು ಪ್ರಮುಖ ಸಮುದಾಯಗಳ ಮನವಿ-Three major communities request for caste survey

Community, castesurvey
ಮರಾಠ ಸಮಾಜ

ವಿಶ್ವಕರ್ಮ ಸಮಾಜ

ಗಂಗಮತಸ್ಥ ಸಮಾಜ


ಜಾತಿ ಸಮೀಕ್ಷೆಗೆ ಸಂಬಂಧಿಸಿದಂತೆ ಇಂದು ಮೂರು ಪ್ರಬಲ ಜಾತಿಯ ಅಧ್ಯಕ್ಷರುಗಳು ಸುದ್ದಿಗೋಷ್ಠಿ ನಡೆಸಿ ಸಮೀಕ್ಷೆ ಅರ್ಜಿಯಲ್ಲಿ ತಮ್ಮ ತಮ್ಮ ಜಾತಿ ಮತ್ತು ಇತರೆ ಪ್ರಮುಖ ಅಂಶಗಳನ್ನು ನಮೂದಿಸಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಕರೆ ನೀಡಿದ್ದಾರೆ.

ಮೊದಲಿಗೆ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ವಿಶ್ವಕರ್ಮ ಮಹಾಸಭಾ ಜಿಲ್ಲೆಯಲ್ಲಿ 35 ರಿಂದ 40,000 ಸಂಖ್ಯೆಯಲ್ಲಿ ವಿಶ್ವಕರ್ಮ ಸಮುದಾಯದ ಜನ ರಿದ್ದು ಕಳೆದ ಬಾರಿ ಜನಸಂಖ್ಯಾ ನೋಂದಣಿಯಲ್ಲಿ ತಪ್ಪು ತಪ್ಪಾಗಿ ನಮೋದನೆಗೊಂಡಿದ್ದು ನಿಖರವಾಗಿ ಸಮಾಜದ ಬಗ್ಗೆ ಮಾಹಿತಿ ದೊರೆತಿರುವುದಿಲ್ಲ. ಹಾಗಾಗಿ ಸೆಪ್ಟೆಂಬರ್ 22 ರಿಂದ ರಾಜ್ಯ ಹಿಂದುಳಿದ ವರ್ಗದ ಆಯೋಗವು ಸಾಮಾಜಿಕ ಶೈಕ್ಷಣಿಕ ಜಾತಿ ಜನಗಣತಿಯನ್ನು ಪ್ರಾರಂಭ ಮಾಡುತ್ತಿದ್ದು ವಿಶ್ವಕರ್ಮ ಜನಾಂಗದ ಒಳಪಂಗಡ ಯಾವುದೇ ಇರಲಿ ಜಾತಿ ಜನ ಗಣತಿಯ ಪ್ರಕಾರ ಧರ್ಮದ ಕಾಲಿನಲ್ಲಿ ಹಿಂದೂ ಎಂದು ಜಾತಿ ಕಾಲಮ್ನಲ್ಲಿ ವಿಶ್ವಕರ್ಮ ಎಂದು ನಮೂದಿಸಲು ಕರೆ ನೀಡಿದೆ.

ಇಲ್ಲ ಮರಾಠ ಸಮಾಜದ ಜಿಲ್ಲಾಧ್ಯಕ್ಷ ಸತ್ಯನಾರಾಯಣ ರಾವ್ ಸುದ್ದಿಗೋಷ್ಠಿ ನಡೆಸಿ ಮರಾಠ ಸಮಾಜದಲ್ಲಿ ಅನೇಕ ಉಪ ಪಂಗಡಗಳಿವೆ. ಜಾತಿಗಣತಿ ಸಂದರ್ಭದಲ್ಲಿ ಧರ್ಮದ ಕಾಲಂನಲ್ಲಿ ಹಿಂದೂ ಎಂದು ಜಾತಿಯ ಕಾಲಮ್ನಲ್ಲಿ ಮರಾಠ ಎಂದು ನಮೂದಿಸಬೇಕು ಎಂದು ಮನವಿ ಮಾಡಿಕೊಂಡರು ಪ್ರಸ್ತುತ ಮರಾಠ ಜನಾಂಗವನ್ನು ಬಿಸಿಎಂ ತ್ರಿಬಿಗೆ ಸೇರಿಸಲಾಗಿದ್ದು ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮರಾಠರನ್ನು ಒತ್ತಾಯಿಸಿದರು.

ಜಿಲ್ಲಾ ಗಂಗಮತ ಸಂಘವು ಸುದ್ದಿಗೋಷ್ಠಿ ನಡೆಸಿ ಸೆಪ್ಟೆಂಬರ್ 22 ರಿಂದ ಪ್ರಾರಂಭವಾಗುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯಲ್ಲಿ ಜನಾಂಗದ ಎಲ್ಲಾ ಸದಸ್ಯರು ಸಮೀಕ್ಷೆಯಲ್ಲಿ ಪಾಲ್ಗೊಂಡು 40 ಕಾಲಂ ಗಳಿಗೆ ಮಾಹಿತಿ ನೀಡಬೇಕಾಗಿದ್ದು ಶಾಲಾ ದಾಖಲಾತಿ ಮತ್ತು ಇನ್ನಿತರ ದಾಖಲಾತಿಗಳನ್ನು ಪರಿಶೀಲಿಸಿ ಜಾಗರೂಕತೆಯಿಂದ ನಿಖರವಾದ ಮಾಹಿತಿ ನೀಡಬೇಕೆಂದು ಕೇಳಿದರು.

ಜಿಲ್ಲೆಯಲ್ಲಿ 37 ಪರಿಯಾಯ ಪದಗಳಿಂದ ಜಾತಿಯನ್ನು ಗುರುತಿಸಲ್ಪಟ್ಟಿದ್ದು ಕಾಲಂ ನಂಬರ್ 9ರಲ್ಲಿ ಕಡ್ಡಾಯವಾಗಿ ಬೆಸ್ತರ್ ಎಂತಲೂ ಕಾಲಂ ನಂಬರ್ ಹತ್ತರಲ್ಲಿ ನಿಮ್ಮ ಶಾಲಾ ದಾಖಲಾತಿಯಲ್ಲಿದ್ದಂತೆ ಅಥವಾ ರೂಡಿಯಲ್ಲಿರುವ ಹೆಸರನ್ನು ನಮೋದಿಸಲು ಮನವಿ ಮಾಡಿಕೊಳ್ಳಲಾಯಿತು. ಹಾವೇರಿ ಜಿಲ್ಲೆಯ ಸುಕ್ಷೇತ್ರ ನರಸೀಪುರ ದಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯನ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿಯವರು ಈ ರೀತಿಯಲ್ಲಿ ಸಮಾಜದ ಬಾಂಧವರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕೆಂದು  ಸೂಚಿಸಿರುವುದರಿಂದ ಗಂಗಾಮತ ಮತ್ತು ಬೆಸ್ತರ್ ಜನಾಂಗವು ಹೀಗೆ ಪಾಲ್ಗೊಳ್ಳಬೇಕೆಂದು ಮನವಿ ಮಾಡಿಕೊಂಡರು.

Three major communities request for caste survey

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close