SUDDILIVE || SHIVAMOGGA
ವಿದ್ಯುತ್ ಸ್ಪರ್ಶ: ಯುವಕ ಸಾವು-Young man dies due to electric shock
ತಾಲ್ಲೂಕಿನ ಹೊಳಲೂರು ಗ್ರಾಮದಲ್ಲಿ ಅಡಿಕೆ ಕೋಯ್ಯುವಾಗ ಯುವಕನೊಬ್ಬ ಮೃತ ಪಟ್ಟಿರುವ ಘಟನೆ ನಡೆದಿದೆ.
ಮೃತ ಪಟ್ಟಿರುವ ವ್ಯಕ್ತಿಯನ್ನು ಹರಮಘಟ್ಟದ ವೆಂಕಟೇಶ್ (30) ಎಂದು ಗುರುತಿಸಲಾಗಿದ್ದು, ಹೊಳಲೂರಿನಲ್ಲಿ ಓಂಕಾರಪ್ಪ ಎಂಬುವರಿಗೆ ಸೇರಿದ್ದ ಅಡಿಕೆ ತೋಟದಲ್ಲಿ ಅಡಿಕೆ ಕೋಯ್ಯುವಾಗ ಅಡಿಕೆ ಗಣೆಗೆ ತೋಟದಲ್ಲಿ ಹಾದು ಹೋಗಿದ್ದ 11 ಕೆವಿ. ವಿದ್ಯುತ್ ತಂತಿಗೆ ಸ್ಪರ್ಶಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಹರೀಶ್ ಎಂಬುವರು ಓಂಕಾರಪ್ಪನವರ ತೋಟದ ಖೇಣಿ ಹಿಡಿದಿದ್ದು, ಹರೀಶ್ ಅವರ ಕೈಕೆಳಗೆ ವೆಂಕಟೇಶ್ ಕೆಲಸ ಮಾಡಿಕೊಂಡಿದ್ದರು. ಪ್ರಕರಣ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.
Young man dies due to electric shock