SUDDILIVE || SHIVAMOGGA
ಈದ್ ಮಿಲಾದ್ ಮೆರವಣಿಗೆಯಲ್ಲಿ ಡಿಜೆ ಬಳಕೆ-ಹಿಂದೂ ಸಂಘನೆಯಿಂದ ಆಕ್ಷೇಪ-Use of DJ in Eid Milad procession-Objection from Hindu assocition
ಈದ್ ಮಿಲಾದ್ ಮೆರವಣಿಗೆಯಲ್ಲಿ ಡಿಜೆ ಬಳಸಿರುವುದನ್ನ ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಇಂದು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದೆ.
ಪ್ರತಿಭಟನೆಯಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ರಾಜೇಶ್ ಗೌಡ, ಮಿಲಾದ್ ಮೆರವಣಿಗೆ ನಡೆಯುವ 15 ದಿನ ಹಿಂದೆ ಎಸ್ಪಿ ಡಿಸಿ ನೇತೃತ್ವದಲ್ಲಿ ಶಾಂತಿ ಸಭೆ ನಡೆದಿದೆ. ಆಗ ಡಿಜೆಗೆ ಅವಕಾಶವಿಲ್ಲ ಎಂದು ತೀರ್ಮಾನಿಸಿದರೂ ನಿನ್ನೆ 70-80 ಮೂವಿಂಗ್ ಡಿಜೆ ನಡೆಸಲಾಗಿದೆ. ಹಿಂದೂಗಳಿಗೆ ಪ್ರತ್ಯೇಕ ಕಾನೂನು ಮುಸ್ಲೀಂರಿಗೆ ವಿಶೇಷ ಕಾನೂನು ಇದೆಯಾ? ಎಂದು ಆರೋಪಿಸಿದರು.
ಚಿತ್ರದುರ್ಗದ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಯಲ್ಲಿ ಡಿಜೆ ಹಾಕಲು ಬಿಡಲಿಲ್ಲ. ಜಿಲ್ಲಾಡಳಿತದ ಆದೇಶಕ್ಕೆ ಹಿಂದೂ ಸಂಘಟನೆ ಗೌರವ ನೀಡಿದೆ. ಆದರೆ ನಿನ್ನೆ ಶಿವಮೊಗ್ಗದಲ್ಲಿ ನಡೆದ ಮಿಲಾದ್ ಮೆರವಣಿಗೆಯಲ್ಲಿ ಜಿಲ್ಲಾಡಳಿತಕ್ಕೆ ಗೌರವ ನೀಡಿಲ್ಲ.
ಡಿಜೆ ಬಳಕೆ ವಿರುದ್ಧ ಜಿಲ್ಲಾಡಳಿತ ಮೌನವಹಿಸಿರುವ ಬಗ್ಗೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ಆಕ್ಷೇಪಿಸಿದ್ದು ಇದು ಹಿಂದೂ ಸಮಾಜದ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಎಂದು ದೂರಿದರು.
Use of DJ in Eid Milad procession-Objection from Hindu assocition
