ಗಾಂಧಿ ಬಜಾರ್ ನಲ್ಲಿ ಏನೇನು ನಡೀತು?What went on in Gandhi Bazaar?

 SUDDILIVE || SHIVAMOGGA

ಗಾಂಧಿ ಬಜಾರ್ ನಲ್ಲಿ ಏನೇನು ನಡೀತು?What went on in Gandhi Bazaar?



ಗಣಪತಿ ರಾಜಬೀದಿ ಉತ್ಸವ ಸಧ್ಯಕ್ಕೆ ನೆಹರೂ ರಸ್ತೆ ದಾಟಿದೆ. ಆದರೆ ಈ ಹಿಂದೆ ಗಾಂಧೀ ಬಜಾರ್ ಸುನ್ನಿ ಜಮಾಯತ್ ಮಸೀದಿ ಬಳಿ ಬಂದರೆ ಸಾಕು  ಕರ್ಪೂರ ಸುಡುತ್ತಿದ್ದ ಯುವಕರ ಗುಂಪಿಗೆ ಈ ಬಾರಿ ನಿರಾಶೆ ಉಂಟಾಗಿದೆ. 

ಕೇಸರಿ ಶಾಲು ಧರಿಸಿ ಫೀಲ್ಡ್ ಗೆ ಇಳಿದಿದ್ದ ಮುಫ್ತಿಯಲ್ಲಿದ್ದ ಪೊಲೀಸರು ಈ ಯುವಕರನ್ನ ಸಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಧ್ವಜ ಹಿಡಿದು ಬಂದ ಯುವಕರನ್ನ ಹೇಗೆ ಸಾಗಿಸುವಲ್ಲಿ ಯಶಸ್ವಿಯಾದರೋ ಹಾಗೆ ಈ ಬಾರಿ ಯುವಕರನ್ನ ಮಸೀದಿ ಮುಂದೆ ಕರ್ಪೂರವನ್ನ ಸುಡಲು ಕಡಿಮೆ ಅವಕಾಶ ನೀಡಿ ಸಾಗುಹಾಕುವಲ್ಲಿ ಖಾಕಿ ಪಡೆ  ಯಶಸ್ವಿಯಾಗಿದೆ. 

ಅಂದಹಾಗೆ ಕಳೆದ ಬಾರಿಗೆ ಹೋಲಿಸಿಕೊಂಡರೆ ಈ ಬಾರಿ ಜನರ ಸಂಖ್ಯೆಯೂ ಕಡಿಮೆಯಿತ್ತು. ಮುಫ್ತಿಯಲ್ಲಿದ್ದ ಪೊಲೀಸರಿಗೂ ಮತ್ತು ಮೆರವಣಿಗೆಗೆ ಬಂದಿದ್ದ ಯುವಕರ ನಡುವೆ ಸಣ್ಣಪುಟ್ಟ ಕಿರಿಕ್ ಹೊರತು ಪಡಿಸಿದರೆ ಮೆರವಣಿಗೆ ಸೊಗಸಾಗಿ ಸಾಗಿದೆ. ಗಾಂಧಿ ಬಜಾರ್ ದಾಡುವುದೊಂದೆ ತಡವಾಗಿದ್ದು ಬಿಟ್ಟರೆ ನಂತರದ ಮಾರ್ಗದಲ್ಲಿ ಗಣಪನ ಮೆರವಣಿಗೆ ಮುಂದೆ ಸಾಗಿದೆ.

ಗೋಪಿ ವೃತ್ತದ ಬಳಿ ಡಿಜೆ ಸಹ ಆಯೋಜಿಸಲಾಗಿದ್ದು ಯುವಕರ ತಂಡ ಅಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನೆರವೇರಿದ್ದಾರೆ. ನಾಳೆ ಬೆಳಗಿನ ಜಾವ ಸುಮಾರು 3-30 ರಿಂದ 4 ಗಂಟೆಯ ಆಜುಬಾಜೂವಿನಲ್ಲಿ ಭೀಮನ ಮಡುವಿನಲ್ಲಿ ಗಣಪನ ವಿಸರ್ಜನೆ ಆಗಲಿದೆ. 

ಗುರುವಿನ ಪಾದಸ್ಪರ್ಶಿಸಿ ನಮಸ್ಕರಿಸಿದ ಶಾಸಕ ಚೆನ್ನಿ


ಗಾಂಧಿ ಬಜಾರ್ ನ ಜಾಮೀ ಮಸೀದಿ ಎದುರು ಗುರು ಶಿಷ್ಯರು ಎದುರಾಗಿ ಗುರುವಿನ‌ಪಾದಸ್ಪರ್ಶಿಸಿ ಶಾಸಕ ಚೆನ್ನಿ ನಮಸ್ಕರಿಸಿರುವ ಅಪರೂಪದ ದೃಶ್ಯ ಸಹ ಲಭ್ಯವಾಗಿದೆ. 

What went on in Gandhi Bazaar?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close