SUDDILIVE || SHIVAMOGGA
ಯುವಕ ನೇಣಿಗೆ ಶರಣು-Young man hanged himself
ಶಿವಮೊಗ್ಗದ ಜಯನಗರ ಬಡಾವಣೆಯಲ್ಲಿ ವಾಸವಾಗಿದ್ದ 20 ವರ್ಷದ ಯುವಕ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಜಯನಗರ ಐದನೇ ತಿರುವಿನಲ್ಲಿರುವ ನೈಜಿಲ್ ಎಂಬ 20 ವರ್ಷದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಡಿಪ್ಲಮಾ ಮುಗಿಸಿ ಬೆಂಗಳೂರಿಗೆ ಕೋರ್ಸ್ ವೊಂದನ್ನ ಕಲಿಯಲು ಹೋಗಿದ್ದ ಯುವಕ ಹಬ್ಬಕ್ಕೆ ಊರಿಗೆ ಬಂದಿದ್ದನು.
ಇಂದು ಬೆಳಿಗ್ಗೆ ಸೀಲಿಂಗ್ ಫ್ಯಾನ್ ಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಗುತ್ತಿಗೆದಾರ ಡಿ. ಆಂಟೋನಿ ಅವರ ಮೊಮ್ಮಗನಾಗಿರುವ ನೈಜಿಲ್ ನವೀನ್-ನಿಶಾ ದಂಪತಿಗಳ ಪುತ್ರನಾಗಿದ್ದಾನೆ. ಅಕಾಲಿಕವಾಗಿ ಮರಣರಾಗಿರುವ ಇವರ ಅಂತ್ಯಕ್ರಿಯೆಯು ಮಂಗಳವಾರ ಸಂಜೆ 3.30 ಗಂಟೆಗೆ ಸೇಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ನೆರವೇರಲಿದೆ. ಅಂತ್ಯ ಸಂಸ್ಕಾರ KSRTC ಬಸ್ ಸ್ಟ್ಯಾಂಡ್ ಪಕ್ಕದ ಕ್ರೈಸ್ತ ಸಮಾಧಿಯಲ್ಲಿ ನಡೆಯಲಿದೆ ಎಂದು ಕುಟುಂಬ ತಿಳಿಸಿದೆ.
Young man hanged himself
