SUDDILIVE || SHIVAMOGGA
ಮುಸ್ಲಿಂ ಹಾಸ್ಟೆಲ್ ಗೆ ಚುನಾವಣೆ ನಡೆಸಲು ಆಗ್ರಹ-Demand to hold elections for Muslim hostel
ಮುಸ್ಲಿಂ ಹಾಸ್ಟೆಲ್ ನ ಮ್ಯಾನೆಜ್ ಮೆಂಟ್ ಕಮಿಟಿ (ವಕ್ಸ್) ಇದರ ಚುನಾವಣೆ ನಡೆಸುವಂತೆ ಆಗ್ರಹಿಸಿ ಇಂದು ವಕ್ಫ್ ಕಚೇರಿ ಮುಂದೆ ಹಾಸ್ಟೆಲ್ ನ ಸರ್ವ ಸದಸ್ಯರು ಪ್ರತಿಭಟನೆ ನಡೆಸಿದರು.
ಮುಸ್ಲಿಂ ಹಾಸ್ಟೆಲ್ ಮ್ಯಾನೆಜ್‌ಮೆಂಟ್ ಕಮಿಟಿ (ವಕ್ಸ್) ಇದಕ್ಕೆ ಚುನಾವಣಾ ಅಧಿಕಾರಿಯನ್ನು ನೇಮಿಸಿ ಹಳೇ ಸದಸ್ಯತ್ವವನ್ನು ನವೀಕರಣವನ್ನು ನಡೆಸಿ ಹೊಸ ಸದಸ್ಯತ್ವದ ಅಭಿಯಾನ ನಡೆಸಿ, ಚುನಾವಣಾ ನಡೆಸಬೇಕೆಂದು ಆಗ್ರಹಿಸಲಾಯಿತು.
ಕೆಲವು ರಾಜಕಾರಣಿಗಳ ಕುಮ್ಮಕ್ಕಿನಿಂದ ಯಾವುದೇ ಚುನಾವಣಾ ನಿಯಮವನ್ನು ಅನುಸರಿಸದೇ, ಏಕಾಏಕೀ ಒಂದು ಸಮಿತಿಯನ್ನು ರಚಿಸುತ್ತಿರುವ ಬಗ್ಗೆ ನಮಗೆ ಮಾಹಿತಿ ಇದ್ದು. ಇದು ವಕ್ಸ್ ಕಾನೂನಿಗೆ ವಿರುದ್ಧವಾಗಿದೆ. ಯಾವುದೇ ಕುಮ್ಮಕ್ಕಿಗೆ ಅವಕಾಶ ನೀಡದೇ ವಕ್ಸ್ ಕಾನೂನಿನ ಪ್ರಕಾರ ಹೊಸ ಚುನಾವಣಾ ಅಧಿಕಾರಿಯನ್ನು ನೇಮಿಸಿ ಚುನಾವಣೆಯನ್ನು ನಡೆಸಿ ಪ್ರಜಾಪ್ರಭುತ್ವನ್ನು ಉಳಿಸಬೇಕು ಎಂದು ಸರ್ವಸದಸ್ಯರ ಆಗ್ರಹಿಸಿದರು.
ಚುನಾವಣೆಯ ಮೂಲಕ ಹೊಸ ಸಮಿತಿಯನ್ನು ರಚಿಸಿ ಕಾರ್ಯರೂಪಕ್ಕೆ ತಂದು ಮುಸ್ಲಿಂ ಹಾಸ್ಟೆಲ್ ಅಭಿವೃದ್ಧಿಗೆ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಚುನಾಯಿತ ಪ್ರತಿನಿಧಿಯನ್ನು ಆಯ್ಕೆ ಮಾಡಬೇಕೆಂದು ಆಗ್ರಹಿಸಲಾಯಿತು.
ಅಬ್ದುಲ್ ಮುಜೀಬ್ ಮಾಜಿ ಕಾರ್ಯದರ್ಶಿ ಅಲ್ಲಾ ಬಕಾಷ್ ಮಾಜಿ ಅಧ್ಯಕ್ಷಮೊಹಮದ್ ಗೌಸ್ ಇಮ್ರಾನ್ ಮೊದಲಾದವರು ಉಪಸ್ಥಿತರಿದ್ದರು.
