SUDDILIVE || SHIVAMOGGA
ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ತಲ್ವಾರ್ ತೋರಿಸಿದ ಯುವಕ-A young man brandished a talwar during the Ganpati Visarjana procession.
![]() |
| ಸಾಧರ್ಭಿಕ ಚಿತ್ರ |
ಶಿವಮೊಗ್ಗದಲ್ಲಿ ಗಣಪತಿ ಹಬ್ಬದ ವಿಸರ್ಜನ ಮೆರವಣಿಗೆ ಕುರಿತಂತೆ ಎಫ್ಐಆರ್ ಗಳು ಮುಂದುವರೆದಿದೆ. ಸೆ.20 ರಂದು ನಡೆದ ಗಣಪತಿವಿಸರ್ಜನಾ ಮೆರವಣಿಗೆ ವೇಳೆ ಓರ್ವ ಯುವಕನು ತಲುವಾರು ತೋರಿಸಿ ಪರಾರಿ ಆಗಿರುವುದು ಎಫ್ ಐ ಆರ್ ಆಗಿ ದೂರು ದಾಖಲಾಗಿದೆ.
ಸೆಪ್ಟೆಂಬರ್ 20ರಂದು ನ್ಯೂಮನ್ಲಿಯ 3ನೇ ತಿರುವಿನಲ್ಲಿ ಇಟ್ಟಿದ್ದ ರೇಣುಕಾಂಬ ಯುವಕರ ಸಂಘದ ಗಣಪತಿ ವಿಸರ್ಜನಾ ಮೆರವಣಿಗೆಯು ನೀಡುತ್ತಿದ್ದ ವೇಳೆ ರಾತ್ರಿ 9:30 ಸಮಯದಲ್ಲಿ ಡೊಳ್ಳಿನ ನಾದಕ್ಕೆ ಕುಣಿಯುತ್ತಿದ್ದರು.
ಗುಂಪಿನಲ್ಲಿ ಯುವಕನೊಬ್ಬ 15 ರಿಂದ 18 ಇಂಚಿನ ಉದ್ದದ ತಲ್ವಾರನ್ನು ಕೈಯೆತ್ತಿ ಬೀಸುತ್ತಿದ್ದು, ಸಾರ್ವಜನಿಕರಲ್ಲಿ ಭಯ ಹುಟ್ಟಿಸುವಂತೆ ವರ್ತಿಸುತ್ತಿದ್ದನು. ಆತನ ಕೈಯಲ್ಲಿದ್ದ ತಲ್ವಾರನ್ನು ಪೊಲೀಸರು ವರ್ಷಕ್ಕೆ ಪಡೆದುಕೊಂಡರು ಜನಜಂಗುಳಿಯಲ್ಲಿ ಯುವಕನು ಪರಾರಿಯಾಗಿವಲ್ಲಿ ಯಶಸ್ವಿಯಾಗಿದ್ದಾನೆ.
ಆತನನ್ನು ಪೊಲೀಸರು ಸಾಕಷ್ಟು ಹುಡುಕಿದರೂ ಸಹ ಪತ್ತೆಯಾಗದೆ ಇರುವುದರಿಂದ ಆತನ ಪತ್ತೆಗಾಗಿ ಪೊಲೀಸರು ಅರಸಪಟ್ಟಿದ್ದಾರೆ. ನಂತರ ಆತನನ್ನು ಮನೋಜ್ ಎಂದು ಗುರುತು ಹಿಡಿಯಲಾಗಿದ್ದು ಆತನ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಸುಮೊಟೊ ಪ್ರಕರಣ ದಾಖಲಾಗಿದೆ
A young man brandished a talwar during the Ganpati Visarjana procession.
