SUDDILIVE || SHIVAMOGGA
ನಮ್ಮ ಹುಡುಗ ನಿಮ್ಮ ಮಗಳನ್ನ ಇಷ್ಟಪಡ್ತಿದ್ದಾನೆ, ಅವನೊಂದಿಗೆ ಮದುವೆ ಮಾಡಿಸ್ತೀವಿ ಎಂದು ಹಣಪಡೆದು ವಂಚನೆ-Our boy likes your daughter, you cheat him by taking money and saying you will marry him
![]() |
ನಮ್ಮ ಹುಡುಗ ನಿಮ್ಮ ಮಗಳನ್ನ ಇಷ್ಟಪಡುತ್ತಿದ್ದಾಳೆ. ಒಂದು ಲಕ್ಷ ಹಣವನ್ನ ಪಡೆದು ವಾಪಾಸ್ ತಂದೆಯೊಂದಿಗೆ ಕಳುಹಿಸದೆ ಗ್ಯಾಂಗ್ ವೊಂದು ಬೆಂಗಳೂರಿನ ವ್ಯಕ್ತಿಗೆ ವಂಚಿಸಿದ್ದು, ಐವರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರಿನ ನಿವಾಸಿ ಸಿಜೆ ಮೊಹಮ್ಮದ್ ತಹಶೀನ್ ಎಂಬುವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಮೊದಲ ಮಗಳು ಮುಸ್ಕಾನ್ ಎಂಬುವರನ್ನ ಚಿತ್ರದುರ್ಗದ ನಿವಾಸಿಯೊಬ್ಬರಿಗೆ ಕೊಟ್ಟು ಮದುವೆಮಾಡಿದ್ದು ನಂತರ ಗಂಡನನ್ನ ಬಿಟ್ಟು 2 ವರ್ಷದಿಂದ ತಂದೆ ಮನೆ ಬೆಂಗಳೂರಿನಲ್ಲಿ ಬಂದು ನೆಲೆಸಿದ್ದರು.
ಈ ಮಹಿಳೆ ಮತ್ತೊಂದು ಗಂಡಸಿನೊಂದಿಗೆ ಸಂಬಂಧ ಬೆಳೆಸಿದ್ದರಿಂದ ಸೆ.2 ರಂದು ತಂಗಿಯನ್ನ ಕಾಲೇಜಿಗೆ ಬಿಟ್ಟು ಬರುವುದಾಗಿ ಹೇಳಿ ಹೋದ ಮುಸ್ಕಾನ್ ವಾಪಾಸ್ ಬಂದಿಲ್ಲ. ನಂತರ ಜಹೀರ್ ಎಂಬ ವ್ಯಕ್ತಿ ಮುಸ್ಕಾನ್ ತಂದೆ ತಹಶೀನ್ ಅವರಿಗೆ ಕರೆ ಮಾಡಿ, ನಿಮ್ಮಮಗಳು ನಮ್ಮ ಬಳಿಯಿದ್ದಾಳೆ. ಹಣತೆಗೆದುಕೊಂಡು ಶಿವಮೊಗ್ಗ KSRTC ಬಸ್ ನಿಲ್ದಾಣಕ್ಕೆ ಬನ್ನಿ ಹಣದೊಂದಿಗೆ ಎಂದು ಬೇಡಿಕೆಯಿಟ್ಟಿದ್ದಾರೆ.
ಸೆ.3 ರಂದು ತಹಶೀನ್ ಅವರು ಶಿವಮೊಗ್ಗದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಬಳಿ ಬಂದು ಜಹೀರ್ ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಬಂದಿದೆ. ನಂತರ ಜಹೀರ್ ಕರೆ ಮಾಡಿ ನಾವು ಭದ್ರಾವತಿಗೆ ಬಂದಿದ್ದೇವೆ. ತರೀಕೆರೆಗೆ ಹೋಗುತ್ತಿದ್ದೇವೆ ಅಲ್ಲಿಗೆ ಬನ್ನಿ ಎಂದಿದ್ದಾರೆ. ತರೀಕೆರೆಗೆ ಹೋದ ತಹಶೀನ್ ಗೆ ನಾವು ಶಿವಮೊಗ್ಗದಲ್ಲಿದ್ದೇವೆ ಬಸ್ ನಿಲ್ದಾಣಕ್ಕೆ ಬನ್ನಿ ಎಂದಿದ್ದಾನೆ.
ಅಲ್ಲಿ ಜಹೀರ್ ಪರಿಚಯವಾಗಿದ್ದು ನಿಮ್ಮಮಗಳು ನಮ್ಮಬಳಿಯಿದ್ದಾಳೆ. ಒಂದು ರೂನ್ ನಲ್ಲಿಟ್ಟಿದ್ದೇವೆ. ಮಿದಲು ಹಣಕೊಡಿ ಎಂದು ಬಲವಂತಾಗಿ ತಹಶೀನ್ ರಿಂದ 8000 ರೂ. ಹಣಕಿತ್ತುಕೊಂಡಿದ್ದಾಬೆ. ನೀವು ಇಲ್ಲೇ ಇರಿ ನಾನೆ ನಿನಗೆ ಕರೆ ಮಾಡಿ ಎಲ್ಲಿಗೆ ಬರಬೇಕೆಂದು ತಿಳಿಸುವೆ ಎಂದು ಹೇಳಿದ್ದಾನೆ. ಎಷ್ಟು ಹೊತ್ತು ಕಾದರು ಆತನ ಫೋನು ಬಾರದ ಹಿನ್ನಲೆಯಲ್ಲೇ ಶಿವಮೊಗ್ಗದಲ್ಲಿ ಉಳಿದುಕೊಂಡರು.
ಮರುದಿನ ಜಹೀರ್ ತಹಶೀನ್ ಗೆ ಕರೆಮಾಡಿ ಹೊನ್ನಾಳಿಗೆ ಬನ್ನಿ ಎಂದಾಗ ಹೊನ್ನಾಳಿ ಶಾದಿಮಹಲ್ ಗೆ ತೆರಳಿದ್ದಾರೆ. ಅಲ್ಲಿ ರೋಷನ್, ಅಬ್ರಹಾರ್, ಯಾಸಿನ್ ಮತ್ತಿತರನ್ನ ಪರಿಚಯಿಸಿದ ಜಹೀರ್ ನಿಮ್ಮಮಗಳನ್ನ ಅಬ್ರಹಾರ್ ಪ್ರೀತಿಸುತ್ತಿದ್ದು, ಆತನಿಗೆ ಮುಸ್ಕಾನ್ ಖನ್ನ ಮದುವೆ ಮಾಡಿಕೊಡುತ್ತೇವೆ. ಡಿವೋರ್ಸ್ ನೆಲ್ಲಾ ನಾವೇ ನೋಡಿಕೊಳ್ಳುತ್ತೇವೆ. ನೀವು 1 ಲಕ್ಷ ರೂ. ಹಣವನ್ನವತಕ್ಷಣ ನೀವು ನೀಡಬೇಕು ಎಂದು ಮಾರಕಾಸ್ತ್ರವನ್ನ ತೋರಿಸಿದ್ದಾನೆ.
ತಹಶೀನ್ 40 ಸಾವಿರಕ್ಕೆ ಒಪ್ಪಿಸಿ ಜಹೀರ್ ಗ್ಯಾಂಗ್ ನ್ನ ಒಪ್ಪಿಸಿದ್ದಾರೆ. ಈ ವೇಳೆ ರೋಷನ್ ತಹಶೀನ್ ನ ಜೊತೆ ಬಂದಿದ್ದ ಅಣ್ಣನ ಮಗನ ಮೊಬೈಲ್ನ ಒಡೆದಿದ್ದಾನೆ. ಮುಸ್ಕಾನ್ ಜಹೀರ್, ರೋಷನ್, ಅಬ್ರಹಾರ್ ಯಾಸಿನ್ ಜೊತೆ ತಂದೆಯೊಂದಿಗೆ ಹೊನ್ನಾಳಿ ಯಿಂದ ಹರಿಹರಕ್ಕೆ ಬಂದು ಅಲ್ಲಿಂದ ರಾತ್ರಿಬೆಂಗಳೂರು ರೈಲಿಗೆ ಪ್ರಯಾಣಿಸುವಾಗ ಜಹೀರ್ ಗ್ಯಾಂಗ್ ಬೆಳಗ್ಗಿನ ಜಾವ 3-30 ಕ್ಕೆ ಚಿಕ್ಕಬಾಣಾವರದ ಬಳಿ ನಾಲ್ವರು ಇಳಿದು ಹೋಗಿದ್ದಾರೆ.
ಮತ್ತೆ ಎರಡು ದಿನ ಬಿಟ್ಟು ಜಹೀರ್ ಕರೆ ಮಾಡಿ ಹಣತೆಗೆದುಕೊಂಡು ಶಿವಮೊಗ್ಗ ಕೆಎಸ್ಆರ್ ಟಿಸಿ ಬಸ್ ನಿಲ್ದಾಣಕ್ಕೆ ಬನ್ನಿ ಎಂದು ಕರೆ ಮಾಡಿದ್ದಾನೆ. ಅಲ್ಲಿ 30 ಸಾವಿರ ಹಣಪಡೆದು ನಾವು ಮದುವೆಗೆ ರೆಡಿ ಮಾಡ್ತೀವಿ ಎಂದು ಹೇಳಿ ಹೋಗಿದ್ದಾರೆ. ಸ್ವಲ್ಪದಿನ ಆಟಾಡಿಸಿ ನಂತರ ಬೆದರಿಸಿ ಮತ್ತೆ 3500 ಹಣವನ್ನಆನ್ ಲೈನ್ ನಲ್ಲಿ ಹಾಕಿಸಿಕೊಂಡಿದ್ದಾನೆ. ಮತ್ತೆ 7 ಸಾವಿರ ಹಣವನ್ನಹಾಕಿಕೊಂಡು ಮಗಳನ್ನೂ ವಾಪಾಸ್ ಕುಳುಹಿಸದೆ ವಂಚಿಸರುವುದಾಗಿ ದೊಡ್ಡಪೇಟೆ ಠಾಣೆಯಲ್ಲಿ ಇತ್ತೀಚೆಗೆ ದೂರು ದಾಖಲಾಗಿದೆ.
ಬೆಂಗಳೂರಿನ ನಿವಾಸಿಯಾಗಿದ್ದರಿಂದ ಬೆಂಗಳೂರಿನ ಪೊಲೀಸ್ ಠಾಣೆಯವರು ಸ್ಥಳೀಯವಾಗಿ ದೂರು ದಾಖಲಿಸಲು ಸೂಚಿಸುರುವುದರಿಂದ ತಹಶೀನ್ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Our boy likes your daughter
