ಪೊಲೀಸ್ ಇಲಾಖೆಯ ರಾ ಎಜೆಂಟ್ ಎಂದೇ ಬಿಂಬಿತವಾಗಿದ್ದ ಅಮ್ಜದ್ ಇನ್ನಿಲ್ಲ-Amjad was always portrayed as a RAW agent in the police department

SUDDILIVE || SHIVAMOGGA

ಪೊಲೀಸ್ ಇಲಾಖೆಯ ರಾ ಎಜೆಂಟ್ ಎಂದೇ ಬಿಂಬಿತವಾಗಿದ್ದ ಅಮ್ಜದ್ ಇನ್ನಿಲ್ಲ-Amjad was always portrayed as a RAW agent in the police department

Amjad, rawagent

ಅಮ್ಜದ್..ಶಿವಮೊಗ್ಗ ನಗರದಲ್ಲಿ ಒಸಿ ಇಸ್ಪೀಟು ದಂಧೆಗಳ ರುವಾರಿ ಎಂದೇ ಬಿಂಬಿತವಾಗಿದ್ದ ಹೆಸರು. ಆದರೆ ಅಸಲಿಗೆ ಅಮ್ಜದ್ ಒಂದು ರೀತಿಯಲ್ಲಿ ಪೊಲೀಸ್ ಇಲಾಖೆಗೆ ರಾ ಎಜೆಂಟ್ ರೀತಿಯಾಗಿ ಗುರುತಿಸಿಕೊಂಡಿದ್ದ. ಈತ ಪೊಲೀಸ್ ಇಲಾಖೆಗೆ ಸವಾಲಾಗಿದ್ದ ಹಲವು ಪ್ರಕರಣಗಳಿಗೆ ಜೀವ ನೀಡಿ, ಅರೋಪಿಗಳ ಬಂಧನಕ್ಕೆ ಕಾರಣವಾಗಿದ್ದ. ಅಮ್ಜದ್ ಎಂದರೆ ಜೀವ ಬಿಡುವ ಪ್ಯಾನ್ ಗಳ ಸಂಖ್ಯೆ ಬಹುದೊಡ್ಡದಿದೆ. ತಾನು ಪೊಲೀಸಗ ಇಲಾಖೆಗೆ ಮಾಡುವ ಉಪಕಾರ ಮುಂದೊಂದು ದಿನ ನನ್ನ ಜೀವಕ್ಕೆ ಕುತ್ತಾಗುತ್ತದೆ ಎಂದು ಅಮ್ಜದ್ ಎಂದಿಗೂ ಭಾವಿಸರಲಿಲ್ಲ. ನಾನು ಮಾಡುವ ಕೆಲಸಗಳಿಗೆ ಸಾವು ಕಟ್ಟಿಟ್ಡ ಬುತ್ತಿ ಎಂದು ಅಮ್ಜದ್ ತಿಳಿದಿದ್ದ. ಹೀಗಿದ್ದರೂ ಕತ್ತಿಯ ಅಲಗಿನಲ್ಲಿ ತಾನು ಮಾಡಬೇಕಾದ ಕೆಲಸಗಳನ್ನು ಮಾಡಿ ಪೂರೈಸುತ್ತಿದ್ದ.

ಪೊಲೀಸ್ ಇಲಾಖೆಯ ಸುಮಾರು 500 ಪ್ರಕರಣಗಳಲ್ಲಿ ಹೈ ವಿಟ್ ನೆಸ್

ರಾಜ್ಯದ ಇತಿಹಾಸದಲ್ಲಿ ಇಷ್ಟೊಂದು ಕ್ರೈಂ ಪ್ರಕರಣಗಳಿಗೆ ಒಬ್ಬನೇ ವ್ಯಕ್ತಿ ವಿಟ್ ನೆಸ್ ಆಗಲು ಸಾಧ್ಯವೆ...ನಿಜಕ್ಕು ಇಲ್ಲ...ಆದರೆ ಅಮ್ಜದ್ ಪ್ರಾಣದ ಹಂಗು ತೊರೆದು ಪೊಲೀಸ್ ಪರವಾಗಿ ಸಾಕ್ಷಿದಾರನಾಗಿ ಗುರುತಿಸಿಕೊಂಡಿದ್ದ...ಬಹುಷ ಅಮ್ಜದ್ ಬದುಕಿದ್ದರೆ..ಆತನ ಬಗೆಗಿನ ಈ ವರದಿ ಹೊರಬರುತ್ತಿರಲಿಲ್ಲ..ಈಗ ಆತನ ಸಾವಾಗಿದೆ..ಅಮ್ಜದ್ ಬದುಕಿದ್ದಾಗ ಮಾಡಿದ ಒಳ್ಳೆಯ ಕೆಲಸ ಸಾರ್ವಜನಿಕ ರಿಗೆ ತಿಳಿಸದೆ ಹೋದರೆ, ಆತನ ಮೇಲಿರುವ ಕಪ್ಪು ಚುಕ್ಕೆ ಹಾಗೆಯೇ ಉಳಿದು ಬಿಡುತ್ತದೆ. 

ಶಿವಮೊಗ್ಗದ ಕೋಮು ಸೌಹಾರ್ದತೆಯಲ್ಲಿ ಅಮ್ಜದ್ ಪಾತ್ರ


ಶಿವಮೊಗ್ಗ ಮತೀಯವಾಗಿ ಅತ್ಯಂತ ಸೂಕ್ಷ್ಮ ಪ್ರದೇಶ. ಪೊಲೀಸರಿಗೆ ಮುಸ್ಲಿಂ ಬಳಗದಲ್ಲಿ ಶಾಂತಿ ಕದಡುವ ನಿಟ್ಟಿನಲ್ಲಿ ಏನೆಲ್ಲಾ ಬೆಳವಣಿಗೆ ಆಗುತ್ತಿವೆ ಎಂಬ ಮಾಹಿತಿಯನ್ಮ ಪೊಲೀಸರಿಗೆ ಅಮ್ಜದ್ ಗೌಪ್ಯವಾಗಿ ನೀಡುತ್ತಿದ್ದ. ಆತನ ಮಾಹಿತಿ ಪಕ್ಕಾ ನಿಖರವಾಗಿರುತಿತ್ತು. ಇದರಿಂದ ಆಗುವ ಮತೀಯ ಗಲಬೆಗಳನ್ನು ಪೊಲೀಸರು ತಡೆಯೊಡ್ಡಲು ಸಹಕಾರವಾಗುತ್ತಿತ್ತು.ಮೊದಲೇ ಹೇಳಿದಂತೆ ಕೆಲವೊಂದು ಸತ್ಯಗಳನ್ನ ಅಮ್ಜದ್ ಬದುಕಿದ್ದರೆ ಹೇಳಲು ಸಾಧ್ಯವೇ ಇರುತ್ತಿರಲಿಲ್ಲ..ಈಗ ಹೇಳಬೇಕಾದ ಸಂದರ್ಬ ಬಂದಿದೆ. ಅದು ಮಲೆನಾಡು ಟುಡೆ ಜನತೆ ಮುಂದೆ ತರೆದಿಟ್ಟಿದೆ..

ಸರ್ಕಾರಕ್ಕೆ ಸವಾಲಾಗಿದ್ದ ಹರ್ಷ ಮರ್ಡರ್ ಪ್ರಕರಣದಲ್ಲಿ ಕೊಲೆ ಅೋಪಿಗಳ ಬಂಧನಕ್ಕೆ ಕಾರಣವಾಗಿದ್ದೆ ಅಮ್ಜದ್

ಈ ಹಿಂದೆ ನಡೆದಿದ್ದ ಹಿಂದು ಹರ್ಷ ಕೊಲೆ ಪ್ರಕರಣದಲ್ಲಿ ಆರೊಪಿಗಳನ್ನು ಪತ್ತೆ ಹಚ್ಚಲು ಪೊಲೀಸರಿಗೆ ಅಸಾಧ್ಯವಾಗಿತ್ತು..ಬಿಜೆಪಿ ಒತ್ತಡ ಹಿಂದು ಕಾರ್ಯಕರ್ತರ ಆಕ್ರೋಶ ಇರುವ ಹೊತ್ತಿನಲ್ಲು ಪೊಲೀಸರಿಗೆ ನೆರವಾಗಿ ಬಂದವನೇ ಅಮ್ಜದ್...ಹೌದು ಹರ್ಷ ಕೊಲೆ ಅರೋಪಿಗಳು ಇವರೇ..ಇಂತದ್ದೆ ಜಾಗದಲ್ಲಿದ್ದಾರೆ ಎಂದು ಪ್ರಾಣದ ಹಂಗು ತೊರೆದು ರಾತ್ತೋ ರಾತ್ರಿ..ಖಾಸಿಪ್ ಅಂಡ್ ಟೀಂ ಬಂದನಕ್ಕೆ ಕಾರಣವಾಗಿದ್ದ ಅಮ್ಜದ್.ಸರ್ಕಾರಕ್ಕೆ ಹೊರೆಯಾಗಿದ್ದ ಭಾರವನ್ನ ಅಂದು ಅಮ್ಜದ್ ಮಾಹಿತಿ ನೀಡುವ ಮೂಲಕ ಭಾರ ತಗ್ಗಿಸಿದ್ದ. 

ಜೀವನ್ ಮರ್ಡರ್ ಕೇಸ್ ನಲ್ಲೂ ಅಮ್ಜದ್ ಪೊಲೀಸರಿಗೆ ಪೂರಕ ಮಾಹಿತಿ ನೀಡಿ ಆರೋಪಿಗಳ ಬಂಧನಕ್ಕೆ ಕಾರಣವಾಗಿದ್ದ ..ಐನೂರು ಪ್ರಕರಣಗಳಲ್ಲಿ ಎರಡು ಪ್ರಕರಣಗಳನ್ನಷ್ಟೆ ಇಲ್ಲಿ ಉಲ್ಲೇಖಿಸಲಾಗಿದೆ...ಶಿವಮೊಗ್ಗದಲ್ಲಿ ಮತೀಯವಾಗಿ ಅಥವ ಬೇರೆ ಬೆಳವಣಿಗೆಯಲ್ಲಿ ಏನೆ ಅಪರಾಧ ಕೃತ್ಯಗಳು ನಡೆದಾಗ ಅಮ್ಜದ್ ಪೊಲೀಸರಿಗೆ ಬೆನ್ನೆಲುವಾಗಿ ನಿಲ್ಲುತ್ತಿದ್ದ.

ಅಮ್ಜದ್ ಗೆ ಅಪಾರ ಅಭಿಮಾನಿಗಳು

ಅಮ್ಜದ್ ಗೆ ಇಷ್ಟೆಲ್ಲಾ ಅಭಿಮಾನಿಗಳು ಹುಟ್ಟಿಕೊಳ್ಳೊದಕ್ಕೇ ಹೇಗೆ ಸಾದ್ಯ ಎನ್ನುವ ಅನುಮಾನ ಹುಟ್ಟೋದು ಸಹಜ...ಆತ   ಮಾಡುತ್ತಿದ್ದ ಒಳ್ಳೆಯ ಸಮಾಜ ಮುಖಿ ಕೆಲಸಗಳು ಕೈ ಹಿಡಿದಿವೆ. ಆತನಿಗೆ ಮುಸ್ಲಿಂ ರಲ್ಲದೆ ಹಿಂದುಗಳ ಪ್ರೀತಿಸುವ ವರ್ಗವೇ ಇದೆ. ಗಣಪತಿ ಹಬ್ಬ ಮಾರಿಹಬ್ಬ, ಕನ್ನಡ ರಾಜ್ಯೋತ್ಸವ ಹಬ್ಬಗಳಿಗೆ ಅಮ್ಜದ್ ಹಣಕಾಸಿನ ನೆರವು ನೀಡುತ್ತಿದ್ದ.ಅಯ್ಯಪ್ಪ ಮಾಲಧಾರಿಗಳು ಶಬರಿಮಲೈಗೆ ಹೋಗಲು ನೆರವು ನೀಡುತ್ತಿದ್ದ. ಮತೀಯವಾಗಿ ಏನೇ ಗಲಾಟೆಗಳಾದರೂ ಅದನ್ನು ತಡೆಯುವಲ್ಲಿ ಮುಂದೆ ಇರುತ್ತಿದ್ದನು.

ಕ್ರೈಂ ನೆಟ್ ವರ್ಕ್ ತಲೆಕೆಳಗಾಗುವಂತೆ ಮಾಡಿದ್ದ ಅಮ್ಜದ್

ಕೆಲ ತಿಂಗಳ ಹಿಂದೆ ರೌಡಿ ಫೌಝಾನ್ ನ್ಯೂ ಮಂಡಲಿ ಪೇಪರ್ ಫ್ಯಾಕ್ಟರಿ ಬಳಿ ಬರ್ತ್ ಡೇ ಸೆಲೆ ಬ್ರೇಷನ್ ಗೆ ನೂರಾರು ರೌಡಿಗಳನ್ನ ಸೇರಿಸಿದ್ದ. ಅಲ್ಲಿ ಮುಂದಿನ ಕ್ರೈಂ ನೆಟ್ ವರ್ಕ್ ಬಗ್ಗೆ ಪ್ಲಾನ್ ಮಾಡುವ ಸಂಚು ನಡೆದಿತ್ತು..ಈ ಮಾಹಿತಿಯನ್ನ ಪೊಲೀಸರಿಗೆ ನೀಡಿ ಪ್ಲಾನ್ ಪ್ಲಾಪ್ ಮಾಡಿದ್ದೆ ಅಮ್ಜದ್ ಎನ್ನುವುದು ಪೌಝಾನ್ ಅಕ್ರೋಶಕ್ಕೆ ಕಾರಣವಾಗಿತ್ತು. ಅಂದಿನ ಪೊಲೀಸ್ ದಾಳಿಯಲ್ಲಿ ಗಾಂಜ ಪಿಸ್ತೂಲ್ ಅನ್ನ ಪೊಲೀಸರು ಸೀಜ್ ಮಾಡಿ ಪೌಝಾನ್ ಅಂಡ್ ಟೀಂ ನ್ನ ಜೈಲಿಗಟ್ಟಿದ್ದರು....ಅಲ್ಲಿಂದ ಶುರುವಾದ ದ್ವೇಷ ಇಂದು ಕೊಲೆಯಲ್ಲಿ ಅಂತ್ಯಕಂಡಿದೆ. ಇದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಬೇಕಿದೆ. ಅಮ್ಜದ್ ಸಾವಿಗೆ ಬಹುತೇಕ ಮಂದಿ ಕಂಬನಿ ಮಿಡಿದಿದ್ದಾರೆ . ಪೊಲೀಸ್ ಇಲಾಖೆ ಒಬ್ಬ ಪಕ್ಕ ಇನ್ ಪರ್ಮರ್ ಅನ್ನ ಕಳೆದುಕೊಂಡು ಬಡವಾಗಿದೆ.

Amjad was always portrayed as a RAW agent in the police department

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close