ರಾಜಕಾರಣಿಗಳು, ಅಧಿಕಾರಿಗಳು ಮತ್ತು ಗುತ್ತಿಗೆದಾರರು ಲೂಟಿ ನಡೆಸಲು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಯಾಗುತ್ತಿದೆ-ರವಿಕೃಷ್ಣರೆಡ್ಡಿ ವಾಗ್ದಾಳಿ-Sharavati Pumped Storage Project is being implemented to loot money

 SUDDILIVE || SAGARA

ರಾಜಕಾರಣಿಗಳು, ಅಧಿಕಾರಿಗಳು ಮತ್ತು ಗುತ್ತಿಗೆದಾರರು ಲೂಟಿ ನಡೆಸಲು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಯಾಗುತ್ತಿದೆ-ರವಿಕೃಷ್ಣರೆಡ್ಡಿ ವಾಗ್ದಾಳಿ-Sharavati Pumped Storage Project is being implemented to loot money for politicians, officials and contractors - Ravikrishna Reddy attacks

Sharavathi, pumpedstorage


ಶರಾವತಿ ಪಂಪ್ಡ್ ಸ್ಟೋರೇಜ್ ವಿರುದ್ಧದ ಹೋರಾಟಕ್ಕೆ ಕೆಆರ್ ಎಸ್ ಪಕ್ಷದ ಗೌರವಾಧ್ಯಕ್ಷ ರವಿಕೃಷ್ಣರೆಡ್ಡಿ ಧುಮಕಿದ್ದಾರೆ. ಸಾಗರದಲ್ಲಿ ಪರಿಸರಾಸಕ್ತರಿಂದ ನಿನ್ನೆಯಿಂದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಧರಣಿಯಲ್ಲಿ ಭಾಗಿಯಾಗಿ ಯೋಜನೆ ಅವೈಜ್ಞಾನಿಕವಾಗಿದೆ. ಹಾಗಾಗಿ ಕೈಬಿಡಲೇ ಬೇಕು ಎಂದು ಆಗ್ರಹಿಸಿದ್ದಾರೆ.

ಶರಾವತಿ ಪಂಪ್ಡ್ ಸ್ಟೋರೇಜ್ ಜನರ ತೆರಿಗೆ ಹಣವನ್ನೇ ನುಂಗುವ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಉತ್ಪತ್ತಿಯಾಗುವ ರೀತಿಯಲ್ಲಿ ವಿದ್ಯುತ್ ಉತ್ಪಾದನೆ ಮಾಡುವಂತಾಗಿದ್ದರೆ. ಪ್ರಪಂಚದಾದ್ಯಂತ ವಿದ್ಯುತ್ ಕೊರತೆಯಾಗುತ್ತಿರಲಿಲ್ಲ. ವಿಐಚಾರಿಕವಾಗಿ ಸಾಧ್ಯವಾಗದ ಯೋಜನೆಯಾಗಿದೆ ವಿದ್ಐತ್ ಉತ್ಪಾದನೆಯಲ್ಲಿ ಅತ್ಯಂತ ಕಡಿಮೆ ಕರ್ಚಿನ ವಿದ್ಯುತ್ ಉತ್ಪಾದನೆ ಎಂದರೆ ಹೈಡ್ರೋಎಲೆಕ್ಟ್ರಿಕ್ ಪವರ್ ಆಗಿದೆ. 

ಪಂಪ್ಡ್ ಸ್ಟೋರೇಜ್ ನಂತಹ ವಿದ್ಯುತ್ ಉತ್ಪಾದನೆಯನ್ನ ಜೀವಮಾನದಲ್ಲಿನೋಡಿಲ್ಲ. ಅಧಿಕಾರಿಗಳು, ರಾಜಕಾರಣಿಗಳು ಗುತ್ತಿಗೆದಾರರು ಹಣ ಲೂಟಿ ಮಾಡುವ ಯೋಜನೆಯಾಗಿದೆ. ಸೋಲಾರ್ ವಿದ್ಯುತ್ ಕ್ರಾಂತಿಯನ್ನ ಪ್ರಪಂಚದಲ್ಲಿ ಮಡುತ್ತಿರುವ ಏಕೈಕ ದೇಶ ಎಂದರೆ ಪಾಕಿಸ್ತಾನ ದೇಶವಾಗಿದೆ. ಏಕೆಂದರೆ ನಿಗದಿತ ಸಮಯಕ್ಕೆ ವಿದ್ಯುತ್ ಸಿಗದಿರುವ ಕಾರಣ ಪಾಕಿಸ್ತಾನ ಸೋಲಾರ್ ವಿದ್ಯುತ್ ಮೇಲೆ ಹೆಚ್ಚಾಗಿ ಅವಲಂಬಿತವಾಗಿದೆ ಎಂದರು. 

ಪಾಕಿಸ್ತಾನ ಸರ್ಕಾರದ ವಿದ್ಯುತ್ ಮೇಲೆ ರೈತರು ಹೆಚ್ಚಾಗಿ ಅವಲಂಬಿತವಾಗಿಲ್ಲ. ಒಂದುವೇಳೆ ಶರಾವತಿ ಪಂಪ್ಡ್ ಸ್ಟೋರೇಜ್ ರೀತಿಯಲ್ಲಿಯೇ ರೈತರ ಸ್ನೇಹಿ ವಿದ್ಯುತ್ ಯೋಜನೆಯಾಗಿದ್ದರೆ ಪಾಕ್ ನಂತಹ ಹಿಂದುಳಿದ ರಾಷ್ಟ್ರವೂ ಸಹ ಅವಲಂಬಿತ ವಾಗಿಬಿಡುತ್ತಿತ್ತು. 60% ಹೈಡ್ರೋ, ಥರ್ಮಲ್ ವಿದ್ಯುತ್ ನ್ನ ಈ ಸೋಲಾರ್ ವಿದ್ಯುತ್ ತಗ್ಗಿಸಿದೆ  ಎಂದರು. 

ಪಂಪ್ಡ್ ಸ್ಟೋರೇಜ್ ಎಲ್ಲೂ ಯಶಸ್ವಿಯಾಗಿಲ್ಲ. 200 ರೂ ವಿದ್ಯುತ್ ಯೋಜನೆಗಾಗಿ 225 ರೂ ಕರ್ಚಾಗುತ್ತಿದೆ. ಇದಕ್ಕಿಂತ ಮೂರ್ಖತನದ ವಿದ್ಯುತ್ ಉತ್ಪಾದನೆ ಯೋಜನೆಯಾಗಿದೆ. ಯಾವಪಕ್ಷ ಯೋಜನೆ ಜಾರಿಗೆ ಮಾಡುತ್ತೆ ಆ ಪಕ್ಷದ ರಾಜಕಾರಣಿಗಳು ಭ್ರಷ್ಠರಾಗಿ ಹೊರಹೊಮ್ಮುತ್ತಾರೆ. ಪರಿಸರದ ಬಗ್ಗೆ ಯಾವ ರಾಜಕಾರಣಿಗಳಿಗೆ ಕಾಳಜಿಯಿಲ್ಲ ಎಂದು ದೂರಿದರು. 

ಇಂದು ಅತಿವೃಷ್ಠಿ ಹೆಚ್ಚಾಗುತ್ತಿದೆ. ಅತಿವೃಷ್ಠಿಯ ಬೆನ್ನಲ್ಲೇ ಅನಾವೃಷ್ಠಿ ಕಾಣಿಸಿಕಪಳ್ಳಲಿದೆ. ಇದರಿಂದ ರೈತ ಬೆಳೆದ ಬೆಳೆಗೆ ಬೆಲೆ ಸಿಕ್ತಾಯಿಲ್ಲ. ಇವೆಲ್ಲಾ ಮಾನವ ಪ್ರಕೃತಿ ಮೇಲೆ ಮಾಡುತ್ತಿರುವ ದಾಳಿಯಿಂದಾಗಿದೆ. ಪ್ರಪಂಚದ ರಾಜಕಾರಣಿ ಅದರಲ್ಲೂ ಅಮೇರಿಕಾದ ಅಧ್ಯಕ್ಷನ ಹೆಸರು ಹೇಳದೆ ವಾಗ್ದಾಳಿ ನಡೆಸಿ ಆತನಿಂದ ಹಿಡಿದು ನಮ್ಮ ರಾಜ್ಯದ ರಾಜಕಾರಣಿಗಳಿಗೆ ಬೇಡವಾಗಿದೆ. ಪರಿಸರದ ಅಸಮತೋಲನದಿಂದಾಗಿ ರೈತ ಸಿಲುಕುತ್ತಾನೆ. ಮೊದಲು ಮಲೆನಾಡ ರೈತ ಸಿಲುಕಿ ಒದ್ದಾಡಿದ ಮೇಲೆ ಬಯಲುಸೀಮೆ ಮತ್ತು ಇತರೆ ಭಾಗದ ರೈತರು ಸಿಲುಕುತ್ತಾರೆ ಎಂದು ಭವಿಷ್ಯ ನುಡಿದ್ದಾರೆ. 

ನಂತರ ಈ ಧರಣಿಯಲ್ಲಿ ಭಾಗಿಯಾಗಿದ್ದ ಶಿವಮೊಗ್ಗದ ಸಂಸದರು, ಈ ಯೋಜನೆ ನಮ್ಮ ಗಮನಕ್ಕೆ ಬಾರದೆ ಕೇಂದ್ರದ ಅನುಮೋದನೆ ಪಡೆದುಕೊಂಡಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ವಿರುದ್ಧ ಹೋರಾಟ ನಡೆದ ನಂತರ ಗಮನಕ್ಕೆ ಬಂದಿದೆ. ಇದನ್ನ ಸಂಸದ ವಿಶ್ವೇಶರಯ್ಯ ಕಾಗೇರಿ ಜೊತೆ ಓಡಾಡಿ ಅನುಮೋದನೆ ರದ್ದತಿಗೆ ಶ್ರಮಿಸುವುದಾಗಿ ಘೋಷಿಸಿದ್ದಾರೆ. 

Sharavati Pumped Storage Project is being implemented to loot money

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close