SUDDILIVE || SHIVAMOGGA
ಸಂಸದರು ಯಾವ ಧರ್ಮವೆಂದು ಸ್ಪಷ್ಟಪಡಿಸಲಿ-ಆಯನೂರು ಸವಾಲು-Ayanuru challenges MPs to clarify their religion
ಸಚಿವ ಮಧು ಬಂಗಾರಪ್ಪನವರ ವಿರುದ್ಧ ಪ್ರಶ್ನಿಸಿದ ಸಂಸದರಿಗೆ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಕೆಲ ಪ್ರಶ್ನೆಗಳನ್ನು ಕೇಳಿದ್ದು ಅದನ್ನ ನಾಳೆಯ ಸುದ್ದಿಗೋಷ್ಠಿ ಮೂಲಕ ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಶೈವ ಮಹಾಸಭಾದ ನಿರ್ದೇಶಕರಾಗಿರುವ ಸಂಸದರು ತಾವು ದಾವಣಗೆರೆಯಲ್ಲಿ ಭಾಗಿಯಾಗಿ ಮಹಾಸಭಾದಲ್ಲಿ ಲಿಂಗಾಯಿತರು ಸಮೀಕ್ಷೆಯ ಇತರೆ ಕಾಲಂನಲ್ಲಿ ಲಿಂಗಾಯಿತ ಶರ್ಮ ಎಂದು ಬರೆಯಿಸಬೇಕು ಎಂದು ನಿರ್ಣಯಿಸಿದ್ದಾರೆ. ಬಿಎಸ್ ವೈ ಆಗಲಿ ಅಥವಾ ಸಂಸದರಾಗಲಿ ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಶಾಸಕ ಯತ್ನಾಳ್ ಅವರು ಬಿಎಸ್ ವೈ ಲಿಂಗಾಯತರೆ ಅಲ್ಲ ಎಂದಿದ್ದಾರೆ. ಈ ಎಲ್ಲಾ ಪ್ರಶ್ನೆಗಳಿಗೆ ಸಂಸದರು ಮೊದಲು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.
ಶಿವಮೊಗ್ಗದಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಬಂದಿದ್ದ ಶಾಸಕ ಯತ್ನಾಳ್ ನನಗೆ ಸಿಕ್ಕಿ ಮಿಲಿಯನ್ ಡಾಲರ್ ಪ್ರಶ್ನೆಯನ್ನ ನನ್ನ ಮುಂದೆ ಹೇಳಿದ್ರು, ಬಿಎಸ್ ವೈ ಲಿಂಗಾಯಿತರೆ ಅಲ್ಲ ಎಂದರು. ಇದನ್ನ ಅಖಿಲ ಭಾರತ ವೀರಶೈವ ಮಹಾಸಭಾದ ಡೈರೆಕ್ಟರ್ ಆಗಿರುವ ಸಂಸದರು ಯಾಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದರು.
ವೀರಶೈವ ಲಿಂಗಾಯರ ಓಲೈಕೆಗಾಗಿ ನಿಮಗೆ ಬೇರೆ ನಿಲುವಿದೆ. ವೀರಶೈವ ಮಹಾಸಭಾ ಯಡಿಯೂರಪ್ಪ, ಸಂಸದರು ಭಾಗಿಯಾದರೂ ಹಿಂದೂ ಎಂದು ಬರೆಸಲು ಒತ್ತಾಯಿಸಲೇ ಇಲ್ಲ. ಈಗ ಬಿಜೆಪಿಗೆ ಬಂದು ಹಿಂದೂ ಎಂದು ಬರೆಯುವಂತೆ ವಿಜೇಂದ್ರ ಹೇಳ್ತಾರೆ. ಸಂಸದರು ಹೇಳಲೇ ಇಲ್ಲ. ಬಿಜೆಪಿಯಲ್ಲಿದ್ದಿದ್ದಕ್ಕೆ ಒಂದು ಹೇಳಿಕೆ ವೀರಶೈವ ಮಹಾಸಭಾದಲ್ಲಿದ್ಸಾಗ ಇನ್ನೊಂದು ನಿಲುವು ತಾಳುವ ಸಂಸದರು ಜಾತಿ ಸಮೀಕ್ಷೆಯಲ್ಲಿ ಯಾವುದನ್ನ ಬರೆಸುತ್ತೀರಿ ಎಂಬುದನ್ನ ಸಂಸದರು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.
ನಾವು ವೀರಶೈವ ಲಿಂಗಾಯಿತರು ಎಂದು ಬಿಎಸ್ ವೈ ಕುಟುಂಬವನ್ನ ನಂಬಿದ್ದೇವೆ. ಯತ್ನಾಳ್ ಬಿಎಸ್ ವೈ ವಿರುದ್ಧ ಎತ್ತಿರುವ ಪ್ರಶ್ನೆಯ ಬಗ್ಗೆ ಸಂಸದರು ಉತ್ತರಿಸಬೇಕು. ಮಾಧ್ಯಮಗಳ ಮೂಲಕ ಎತ್ತಿರುವ ಯತ್ನಾಳ್ ಅವರ ಹೇಳಿಕೆಯ ಬಗ್ಗೆ ಸಂಸದರು ಉತ್ತರಿಸಬೇಕು. ಇದನ್ನ ಬಿಟ್ಟು ಸೇತುವೆ ಬ್ರಿಡ್ಜು ಟವರ್ ಬಗ್ಗೆ ಮಾತನಾಡೋದಲ್ಲ ಎಂದು ಕಾಲೆಳೆದರು.
ಮಹಾಸಭಾ ಮತ್ತು ಬಿಜೆಪಿಯಲ್ಲಿ ತಮ್ಮನಿಲುವನ್ನ ಗೊಂದಲ ಹುಟ್ಟುಹಾಕಬೇಡಿ, ಯತ್ನಾಳ್ ಹೇಳಿದ ಮೇಲೆ ಬಿಎಸ್ ವೈ ಜೊತೆ 30-40 ವರ್ಷದ ರಾಜಕೀಯದಲ್ಲಿದ್ದೇನೆ. ಬಿಎಸ ವೈನ ಮಹಾಭಿಮಾನಿ ನಾನು. ಸಂಸದರು ಮೊದಲು ಧರ್ಮದ ಬಗ್ಗೆ ಸ್ಪಷ್ಟಪಡಿಸಲಿ ಎಂದ ಅವರು ಟೋಲ್ ಹೋರಾಟಕ್ಕೆ ಸಂಸದರು ಬೆಂಬಲಿಸಿದ್ದಾರೆ. ಟೋಲ್ ಸ್ಥಾಪಿಸಿದವರು ಯಾರು ? ಜಾತಿ, ಜನಗಣತಿಯಲ್ಲಿ ಗೊಂದಲದ ನಿಲುವು ಹೊಂದಿರುವ ನೀವು ಟೋಲ್ ವಿಚಾರದಲ್ಲೂ ಗೊಂದಲದ ನಿಲುವು ತಾಳುವುದು ಸರಿಯಲ್ಲ ಎಂದು ಸವಾಲು ಹಾಕಿದರು.
ಆರ್ಥಿಕ ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಿತಿಗತಿ ಸಮೀಕ್ಷೆ ಮಾಡುವಾಗ ಸಾಮಾಜಿಕ ಜವಬ್ದಾರಿಯನ್ನ ಮೆರೆದಿದೆ. ಹಾಗಾಗಿ ಕೆಲ ಪ್ರಶ್ನೆಗಳು ಅಪ್ರಸ್ತುತವಾಗಿದೆ. ಕುರಿ ಕೋಳಿ ಚಿನ್ನ ಪ್ರಶ್ನೆಗಳು ಪ್ರಸ್ತುತ ಮತ್ತು ಅಪ್ರಸ್ತುತವಾಗಿದೆ. ಗೊಂದಲವನ್ನ ವಿಪಕ್ಷಗಳು ಮಾಡುತ್ತಿವೆ. ಸಮೀಕ್ಷೆಯ ಉದ್ದೇಶವಾಗಿ ಹೇಳುತ್ತಿದ್ದರೂ ಜಾತಿ ಒಂದು ಅಂಶವಾಗಿದೆ ವಿನಃ ಪ್ರಧಾನವಲ್ಲ ಎಂದರು.
ಸಂಸದರು ಕೆಲ ಸರ್ಕಾರವನ್ನ ಅಲ್ಲಗೆಳೆದಿಲ್ಲ. ರಾಜ್ಯ ಸರ್ಕಾರದ ಸರ್ವೆ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸರ್ವೆಯಾಗಿದೆ. ಶೆಡ್ಯೂಲ್ 7 ರಲ್ಲಿ ರಾಜ್ಯ ಸರ್ಕಾರ ಮಾಡಬಾರ್ಉ ಎಂದು ಎಲ್ಲಾರೂ ಸಂವಿಧಾನದಲ್ಲಿ ಇದೆಯಾ? ಇದ್ದಿದ್ದರೆ ರಾಜ್ಯ ಸರ್ಕಾರದ ಬಗ್ಗೆ ಹೈಕೋರ್ಟ್ ತಡೆಯಾಜ್ಞೆ ನೀಡುತ್ತಿತ್ತು ಎಂದರು.
ಸಂಸದರಿಗೆ ಅರ್ಥವಾಗಿಲ್ಲ. ಜಡ್ಜ್ ಮೆಂಟ್ ಓದದ ಪರಿಣಾಮ ಈ ಹೇಳಿಕೆಯಾಗಿದೆ. ಸಮೀಕ್ಷೆಯಲ್ಲಿ ಪ್ರಹ್ಲಾದ್ ಜೋಶಿ ಪಾಲ್ಗೊಳ್ಳಲ್ಲ ಎಂದು ಕೇಂದ್ರ ಸಚಿವರಾಗಿ ಹೇಳಿಕೆ ನೀಡಿರುವುದು ಎಷ್ಟು ಸರಿ. ಇದು ಬೇಜವಬ್ದಾರಿ ಹೇಳಿಕೆಯಾದುದರಿಂದ ಸಚಿವ ಮಧು ಬಂಗಾರಪ್ಪ ಪ್ರಶ್ನಿಸಿದ್ದಾರೆ. ಇದಕ್ಕೆ ಸುಮೋಟೋ ಪ್ರಕರಣ ಹಾಕಲು ಸೂಚಿಸಿದ್ದಾರೆ.
ಕ್ಯಾಬಿನೇಟ್ ಅವರೆ ಇವರ ಮೇಲೆ ಸುಮೋಟೋ ಪ್ರಕರಣ ದಾಖಲಿಸಲು ಸೂಚಿಸಿದ್ದಾರೆ. ಸಂಸದರು ಭಾವವನ್ನ ಅರ್ಥೈಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಮೀಸಲಾತಿಯನ್ನ ಸಾಮಾಜಿಕ ಸ್ಥಾನಮಾನಗಳಲ್ಲಿ ರಚನೆಯಾಗಿವೆ. ಚುನಾವಣೆಯ ಸಂದರ್ಭದಲ್ಲಿ ಪ್ರನಾಳಿಕೆ ಉಪಾಧ್ಯಕ್ಷರಾಗಿದ್ದ ಕಾರಣ ಅವರನ್ನ ಮಂತ್ರಿಯನ್ನಾಗಿ ಪಕ್ಷ ಮಧುಬಂಗಾರಪ್ಪನವರನ್ನಾಗಿ ನೇಮಿಸಲಾಗಿದೆ. ಯಾವುದೇ ಜಾತಿಯ ಕೋಟಾದಲ್ಲಿ ಅಲ್ಲ ಎಂದು ಸ್ಪಷ್ಟಪಡಿಸಿದರು.
ಸಚಿವ ಮಧು ಬಂಗಾರಪ್ಪ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ವಿಜೇಂದ್ರ ಅವರನ್ನ ನೇಮಿಸಿರುವುದು ಯಾವ ಕೋಟಾದಲ್ಲಿ ನೇಮಿಸಲಾಗಿದೆ. ಬಿಎಸ್ ವೈ ಬಗ್ಗೆ ಹೀಗೆ ಹೇಳಲ್ಲ. ಅವರದ್ದು ಹೋರಾಟದ ಹಿನ್ನಲೆಯಲ್ಲಿ ರಾಜ್ಯಾಧ್ಯಕ್ಷ ಸಿಎಂಆಗಿದ್ದರು. ವಿಜೇಂದ್ರ ಅವರದ್ದು ಯಾವ ಕೋಟಾ ಎಂದು ಪ್ರಶ್ನಿಸಿದರು.
ನಿಮ್ಮ ಕೋಟಾವೇ ಏನಾಗಿತ್ತು. ಬೇರೆಯವರ ಕೋಟಾ ಬಗ್ಗೆ ಪ್ರಶ್ನಿಸುವ ತಾವು ಮೊದಲು ತಮ್ಮ ಕೋಟಾ ಯಾವುದು ಎಂಬುದನ್ನ ಯೋಚಿಸಬೇಕಿತ್ತು. ಹಿಂದುಳಿದ ಮತ್ತು ದಲಿತ ಸಮುದಾಯದ ಉದ್ದಾರಕರಾಗಿದ್ದ ದೇವರಾಜ್ ಅರಸ್ ಅವರನ್ನ ಪಕ್ಷದಿಂದ ಹೇಗೆ ಹೊರಹಾಕಿದ್ರಿ? ಎಂದು ಹೇಳಿಜೆ ನೀಡುವ ಸಂಸದರು ಬಿಜೆಪಿಯಿಂದ ಅಬರ ತಂದೆಯನ್ನ ಏಕೆ ಹೊರಹಾಕಿದರು ಎಂಬುದನ್ನ ಪ್ರಶ್ನಿಸಿಲಿ ಎಂದರು.
ಸಾಂಧರ್ಭಿಕವಾಗಿ ಸಚಿವ ಮಧು ಬಂಗಾರಪ್ಪ ಮಾತನಾಡುತ್ತಿಲ್ಲ ಸಂಸದರು ಎಂದ ಅವರು, ಸಿಟಿ ರವಿ ಸಿಎಂ ಬದಲಾವಣೆ ಕುರಿತು ಒಬ್ಬ ಭ್ರಷ್ಠರು ಹೋಗಿ ಮತ್ತೊಬ್ಬ ಭ್ರಷ್ಠಾಚಾರಿ ಬಂದರೆ ಏನು ಬದಲಾವಣೆ ಎಂದಿದ್ದಾರೆ. ಭ್ರಷ್ಠಾಚಾರಿ ವಿಚಾರದಲ್ಲಿ ಅವರ ಪಕ್ಷದಲ್ಲಿರುವ ಐದು ಜನರಬಗ್ಗೆ ಕೇಳುವೆ ನೀವು ಉತ್ತರಿಸಲಿ. ಇಲ್ಲ ನಮ್ಮಲ್ಲಿ ಯಾರೂ ಭ್ರಷ್ಠರಿಲ್ಲ ಎಂದು ಸ್ಪಷ್ಟಪಡಿಸಲಿ ಎಂದರು.
ಲಿಂಗಾಯಿತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಕನ್ಫೂಷನ್ ಇದೆ. ದೊಡ್ಡವರು ಮೇಲೆ ಇದ್ದಾರೆ ಅವರು ತೀರ್ಮಾನಿಸುತ್ತಾರೆ ನೋಡೋಣ ಎಂದ ಅವರು, ತಾವು ಸಮೀಕ್ಷೆಯಲ್ಲಿ ಯಾವ ಧರ್ಮ ಬರೆಸಿದ್ದೀರಿ ಎಂದು ಕೇಳಿದ ಪ್ರಶ್ನೆಗೆ ನುಣಚಿಕೊಂಡ ಕೆಪಿಸಿಸಿ ವಕ್ತಾರರು ನನ್ನ ಮನೆಗೆ ಬಂದ ಸಮೀಕ್ಷೆಗಾರರಿಗೆ ನಾನೇ ಅಪ್ಲೋಡ್ ಮಾಡುವೆ ಎಂದಿರುವೆ. ಅವರು ಅರ್ಜಿಯೊಂದಕ್ಕೆ ಸಹಿ ಮಾಡಿಕೊಂಡು ಹೋಗಿದ್ದಾರೆ. ಮೊದಲು ಸಮಾಜದ ನಾಯಕರು ಏನು ಹೇಳ್ತಾರೆ ಕೇಳೋಣ ಎಂದು ಹೇಳಿದರು.
Ayanuru challenges MPs to clarify their religion