ರಸ್ತೆಗೆ ಅಡ್ಡಲಾಗಿ ಬರ್ತ್ ಡೇ ಸೆಲೆಬ್ರೇಷನ್ -ಬೈಕ್ ಮೇಲೆ ಕಾರು ಹತ್ತಿಸಿ ದರ್ಪ- Birthday celebration across the road - arrogance shows puts car on bike

 SUDDILIVE || SHIVAMOGGA

ರಸ್ತೆಗೆ ಅಡ್ಡಲಾಗಿ ಬರ್ತ್ ಡೇ ಸೆಲೆಬ್ರೇಷನ್ -ಬೈಕ್ ಮೇಲೆ ಕಾರು ಹತ್ತಿಸಿ ದರ್ಪ-Birthday celebration across the road - arrogance shows puts car on bike

Arrogance, Birthday


ಬರ್ತ್ ಡೇ ಸೆಲೆಬ್ರೇಷನ್ ಎಂಬುದು ಈಗ ಬೀದಿ ಮೇಲೆ ಆಚರಿಸುತ್ತಿರುವುದರಿಂದ ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದೆ. ಅಬ್ಬಲಗೆರೆಯಲ್ಲಿ ರಸ್ತೆಯ ಮೇಲೆ ಅಡ್ಡಲಾಗಿ ನಿಂತು ಬರ್ತಡೇ ಆಚರಣೆಯ ವೇಳೆ ನಡೆದ ಘಟನೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.  

ಅಬ್ಬಲಗೆರೆಯಲ್ಲಿ ಸೆ.28 ರ ರಾತ್ರಿ 9 ಗಂಟೆಗೆ ಬರ್ತ್ ಡೇ ಸೆಲೆಬ್ರೇಷನ್ ನಡೆದಿದ್ದು  ಬೈಕ್ ಮೇಲೆ ಇಕೋ ಸ್ಪೋರ್ಟ್ಸ್ ವಾಹನ ಹತ್ತಿಸಿ ವಾಹನ ಚಾಲಕರು ದರ್ಪ ಮೆರೆದರಾ ಎಂಬ ಅನುಮಾನಕ್ಕೆ ಘಟನೆ ಕಾರಣವಾಗಿದೆ. 



ಅಬ್ಬಲಗೆರೆಯ ಬಸ್​ಸ್ಟ್ಯಾಂಡ್​ ಬಳಿ  ನಡುರಸ್ತೆಯಲ್ಲಿ ಕಾರು ನಿಲ್ಲಿಸಿಕೊಂಡು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.  ರಸ್ತೆ ಅಡ್ಡಗಟ್ಟಿ ಬರ್ತ ಡೇ ಸೆಬ್ರೇಷನ್ ಮಾಡಿಕೊಂಡಿದ್ದನ್ನ ಸ್ಥಳೀಯ ವಿನಯ್ ಎಂಬುವರು ಪ್ರಶ್ನಿಸಿದ್ದಾರೆ. ಪ್ರಶ್ನಿಸಿದ ವಿನಯ್ ಗೆ  ಹೊಡೆದು ಆತನ ಬೈಕ್​ ಮೇಲೆ ಪದೆಪದೇ ಕಾರು ಹತ್ತಿಸಿ ಜಖಂಗೊಳಿಸಿದ್ದಾರೆ. 

ಮಲ್ಲಿಕಾರ್ಜುನ್ ಪಟೇಲ್ ಎಂಬುವರ ಬರ್ತ ಡೇಯನ್ನ ಅವರ ಜೊತೆಗಿದ್ದವರು  ಅಬ್ಬಲಗೆರೆ ರಸ್ತೆಯ ಮೇಲೆ ಆಚರಿಸಿಕೊಂಡಿದ್ದು, ಇದನ್ನ ಪ್ರಶ್ನಿಸಿದ ವಿನಯ್ ಮತ್ತು ಸ್ಥಳೀಯರ ಮೇಲೆ ಹಲ್ಲೆ ಮಾಡಿರುವುದು ದೂರು ದಾಖಲಾಗಿದೆ. ಅಬ್ಬಲಗೆರೆಯ ಚಂದ್ರಶೇಖರ್, ನಿತಿನ್ ಪಟೇಲ್, ಸಾಗರ, ಮಲ್ಲಿಕಾರ್ಜುನ ನಂಜುಂಡಿ, ಮಂಜುನಾಥ್, ವಿರುಪಾಕ್ಷಪ್ಪ ಮತ್ತು ಶಶಿಧರ ಎಂಬುವರ ವಿರುದ್ಧ ಎಫ್ಐಆರ್ ದಾಖಲಾಗಿದೆ. 

Birthday celebration across the road - arrogance shows puts car on bike

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close