ಜಾತಿಗಣತಿಯಲ್ಲ ಹಿಂಸೆ ಗಣತಿ-ಈಶ್ವರಪ್ಪ-Not a caste census, but a violence census-Eshwarappa

 SUDDILIVE || SHIVAMOGGA

ಜಾತಿಗಣತಿಯಲ್ಲ ಹಿಂಸೆ ಗಣತಿ-ಈಶ್ವರಪ್ಪ-Not a caste census, but a violence census-Eshwarappa

Violence, census


ಜಾತಿ ಜನಗಣತಿ ರಾಜ್ಯದ ಜನರಿಗೆ ಹಿಂಸೆ ಸಮೀಕ್ಷೆಗೇ ಹೋಗುವ ಶಿಕ್ಷಕರಿಗೂ ಹಿಂಸೆಯಾಗುತ್ತಿದ್ದು ಇದು ಜಾತಿಗಣತಿ ಅಲ್ಲ ಹಿಂಸೆ ಗಣತಿಯಾಗಿದೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ತಿಳಿಸಿದರು

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿಎಂ ಹಠಕ್ಕೆ ಬಿದ್ದಂತೆ ಕಾಣುತ್ತಿದೆ. ಶಾಸಕರಿಗೆ ಶಿಕ್ಷಜರಿಗೆ ಸಾಧು ಸಂತರಿಗೆ ತೃಪ್ತಿಯಿಲ್ಲ. ಜಾತಿಗಣತಿಯಿಂದ ಲಿಂಗಾಯಿತ ಸಮಾಜವನ್ನ ಒಡೆದಯಹಾಕಲಾಗಿದೆ. ಲಿಂಗಾಯಿತ ಸಮಾಜದ ಕ್ಷಮೆ ಕೇಳಬೇಕು ಎಂದರು.

ಸಚಿವ ಮಧು ಬಂಗಾರಪ್ಪ ಈ ಸಮೀಕ್ಷೆಯನ್ನ ಹೊಗಳಿದ್ದಾರೆ ಸಂವಿಧಾನ ಬದ್ದವಾಗಿದೆ ಎಂದಿದ್ದಾರೆ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಮಾಜಿ ಡಿಸಿಎಂ ಕ್ಯಾಬಿನೆಟ್ ನಲ್ಲಿರುವ ಕಾರಣ ಮಧು ಒಪ್ಪಿರಬಹುದು. ಕಾಂತರಾಜು ವರದಿ ಬಂದಾಗ ಸಿಎಂ ಸಿದ್ದರಾಮಯ್ಯ ಇದೇ ಮಾತನ್ನ ಹೇಳಿದ್ರು ಆದರೆ 420 ಕೋಟಿ ಹಣ ವೇಸ್ಟ್ ಆಗಿದೆ ಎಂದರು. 

ನಮ್ಮ ಮನೆಗೆ ಗಣತಿಯವರು ಬಂದಂತೆ ಇಲ್ಲ. 10 ಬಾರಿ ಕಾಂತರಾಜು ವರದಿಯನ್ನ‌ಕ್ಯಾಬಿನೆಟ್ ಗೆ ಇಡುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ನಂತರ ಬೇರೆ ಸಮೀಕ್ಷೆ ಎಂದರು. ಹಾಗೆ ಈ ಸಮೀಕ್ಷೆ ಇದೇ ದಾರಿ ಹಿಡಿಯಲಿದೆ. 420 ಕೋಟಿ ತೆರಿಗೆ ಹಣ ವೇಸ್ಟ್ ಆಗಲಿದೆ ಎಂದರು. 

Not a caste census, but a violence census-Eshwarappa

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close