ad

ದೀಪಾವಳಿಗೆ ಶಿವಮೊಗ್ಗದಲ್ಲಿ ಗೋಪೂಜೆ-Cow worship in Shivamogga for Diwali

 SUDDILIVE || SHIVAMOGGA

ದೀಪಾವಳಿಗೆ ಶಿವಮೊಗ್ಗದಲ್ಲಿ ಗೋಪೂಜೆ-Cow worship in Shivamogga for Diwali

Cowworship, shivamogga

ದೀಪಾವಳಿ ಸಂದರ್ಭ ಮಲೆನಾಡು ಭಾಗದಲ್ಲಿ ಗೋಪೂಜೆ  ನೆರವೇರಿಸಲಾಗುತ್ತದೆ. ಶಿವಮೊಗ್ಗ ನಗರದಲ್ಲಿ ಇವತ್ತು ಗೋವರ್ಧನ ಟ್ರಸ್ಟ್‌ ವತಿಯಿಂದ ದೀಪಾವಳಿ ಗೋಪೂಜೆ ಆಯೋಜಿಸಲಾಗಿತ್ತು.

ವಿನೋಬನಗರ ಶಿವಾಲಯದ ಆವರಣದಲ್ಲಿ ಯಡಿಯೂರಿನ ರಂಭಾಪುರಿ ಶಾಖಾಮಠದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಬಿಳಿಕಿ ಹಿರೇಮಠದ ಶ್ರೀರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಗೋಪೂಜೆ ನೆರವೇರಿಸಲಾಯಿತು. ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಈ.ಕಾಂತೇಶ್‌ ಸೇರಿದಂತೆ ಹಲವರು ಭಾಗವಹಿಸಿದ್ದರು.

ನಗರದ ಆರು ಕಡೆ ಗೋವರ್ಧನ ಸಮಿತಿ ವತಿಯಿಂದ ಗೋ ಪೂಜೆ ಆಯೋಜಿಸಲಾಗಿದೆ. ವಿನೋಬನಗರದ ಶಿವಾಲಯ, ರವೀಂದ್ರನಗರದ ಗಣಪತಿ ದೇವಾಲಯ, ಶಾಂತಿನಗರದ ಶನೈಶ್ಚರ ದೇವಾಲಯ, ಸ್ವಾಮಿ ವಿವೇಕಾನಂದ ಬಡಾವಣೆಯ ನಾಗಸುಬ್ರಹ್ಮಣ್ಯ ದೇವಸ್ಥಾನ, ಹರಿಗೆಯ ಪಾರ್ವತಮ್ಮ ದೇವಾಲಯ ಹಾಗೂ ವಾಸವಿ ಪಬ್ಲಿಕ್ ಶಾಲೆ ಅವರಣದಲ್ಲಿ ಗೋ ಪೂಜೆ ಆಯೋಜಿಸಲಾಗಿದೆ

ಈ ಬಗ್ಗೆ ಮಾತನಾಡಿದ ಮಾಜಿ ಡಿಸಿಎಂ ಈಶ್ವರಪ್ಪ ಗೋವುಗಳಿಗೆ ಪೂರ್ಣ ರಕ್ಷಣೆ, ಸಾಧು – ಸಂತರಿಗೆ ಪೂರ್ಣ ಭಕ್ತಿ, ದೇವರುಗಳಿಗೆ ಗೌರವ ಸಿಗದಿರುವುದು ಸ್ವಾತಂತ್ರ್ಯ ಸಿಕ್ಕರು ಪೂರ್ಣ ವ್ಯರ್ಥ. ಕೋಟ್ಯಂತರ ಜನರು ಗೋವಿಗೆ ತಾಯಿಯಂತೆ ಗೌರವಿಸುತ್ತಾರೆ. ಅದರೆ ‘ಯಾರೋ ಗೋವುಗಳನ್ನು ಕಡಿದು ತಿನ್ನುತ್ತಾರೆ, ತಿನ್ನಲಿಬಿಡಿʼ ಎಂದು ಉನ್ನತ ಹುದ್ದೆಯಲ್ಲಿರುವವರು ಹೇಳುತ್ತಾರೆ. ಇದು ಹಿಂದುಗಳ ಭಾವನಕ್ಕೆ ಧಕ್ಕೆ ತರುತ್ತಿದೆ ಎಂದರು.

Cow worship in Shivamogga for Diwali

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close