SUDDILIVE || SHIVAMOGGA
ಕಂತುಕಟ್ಟದ ರೈತರಿಗೆ ಫೈನಾನ್ಸ್ ನಿಂದ ಹಸುಗಳ ಜಪ್ತಿ-Cows confiscated from farmers who do not pay dues
ಶಿವಮೊಗ್ಗ ಗಾರ್ಡ್ ನ್ ಏರಿಯಾದಲ್ಲಿ ಆಯ್ ಫೈನಾನ್ಸ್ ನಿಂದ ದಬ್ಬಾಳಿಕೆ ಆರೋಪದ ಅಡಿ ರೈತರು ಫೈನಾನ್ಸ್ ಬಳಿ ಪ್ರತಿಭಟಿಸಿದ್ದಾರೆ. ಸಾಲದ ಕಂತು ಕಟ್ಟಿಲ್ಲ ಎಂದು ರೈತನ ಹಸುಗಳನ್ನು ಕರೆದುಕೊಂಡು ಬಂದ ಪೈನಾನ್ಸ್ ಸಿಬ್ಬಂದಿಗಳ ವಿರುದ್ಧ ರೈತರು ಪ್ರತಿಭಟಿಸಿದ್ದಾರೆ. ರೈತರು ಬಂದು ಪ್ರತಿಭಟಿಸುತ್ತಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಫೈನಾನ್ಸ್ ನವರು ಬಾಗಿಲು ಹಾಕಿಕೊಂಡು ಹೋದ ಘಟನೆ ವರದಿಯಾಗಿದೆ.
ಶಿವಮೊಗ್ಗ ತಾಲೂಕಿನ ಸಿದ್ಲಿಪುರ ಗ್ರಾಮ ಭರತ್ ಎಂಬ ರೈತನ ಹಸುಗಳಿಗೆ ಒಂದು ತಿಂಗಳ ಸಾಲದ ಕಂತು 9300 ರೂಪಾಯಿ ಬಾಕಿ ಇತ್ತು. ಈ ಹಿನ್ನಲೆ ಒಂದು ಎತ್ತು ಎರಡು ಹಸು ಸೀಜ್ ಮಾಡಿಕೊಂಡು ಸಿಬ್ಬಂದಿಗಳು ಕರೆತಂದಿದ್ದಾರೆ. ಮೂರು ಹಸು ಮೇಲೆ ಭರತ್ 2 ಲಕ್ಷ ಸಾಲ ಪಡೆದಿದ್ದರು. ಕೇವಲ ಒಂದು ಕಂತು ಬಾಕಿ ಇದ್ದ ಹಿನ್ನಲೆಯಲ್ಲಿ ಈ ರೀತಿ ಫೈನಾನ್ಸ್ ನಡೆದುಕೊಂಡಿದ್ದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಬೆಳಗ್ಗೆ ಫೈನಾನ್ಪ್ ಸಿಬ್ಬಂದಿ ಯಿಂದ ಎತ್ತು ಮತ್ತು 2 ಹಸು ವಾಹನದಲ್ಲಿ ತೆಗೆದುಕೊಂಡು ಬಂದಿದ್ದಾರೆ.ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Cows confiscated from farmers who do not pay dues
