SUDDILIVE || SHIVAMOGGA
ಬಾಲಣ್ಣ ಕಿವಿ ಬೇರ್ಪಡಿಸಿ ಚಿಕಿತ್ಸೆ-Treatment to the elephant Balanna with ear extraction
ಶಿವಮೊಗ್ಗದ ಸಕ್ರೆಬೈಲಿನಲ್ಲಿರುವ ಬಾಲಣ್ಣನ ಬಲಕಿವಿಯನ್ನ ಪ್ರತ್ಯೇಕಗೊಳಿಸಲಾಗಿದ್ದು ವೈದ್ಯರ ತಂಡದ ಸೂಚನೆಯಂತೆ ಚಿಕಿತ್ಸೆ ನೀಡಲಾಗಿದೆ. ಕೊಳೆಯುತ್ತ ಬರುತ್ತಿದ್ದ ಬಾಲಣ್ಣನ ಕಿವಿ ಕತ್ತರಿಸಲಾಗಿದೆ.
ಬಾಲಣ್ಣನ ಕಾಲುನೋವಿಗೆ ಸಂಬಂಧಿಸಿದಂತೆ ನೀಡಲಾಗಿದ್ದ ಪೇಯ್ನ್ ಕಿಲ್ಲರ್ ಇಂಜೆಕ್ಷನ್ ಆನೆಯ ಬಲಕಿವಿ ಕೊಳೆತು ಹೋಗುವಂತೆ ಮಾಡಿತ್ತು. ನಂತರ ಆನೆ ಸ್ಥಿತಿಕಂಡು ಸಕ್ರೆಬೈಲಿಗೆ ಭೇಟಿ ನೀಡಿದ ತಜ್ಞರ ತಂಡದ ಸೂಚನೆಯ ಮೇರೆಗೆ ಕೊಳೆತ ಕಿವಿಯನ್ನ ತುಂಡರಿಸಿ ಅವರ ನಿರ್ದೇಶನದ ಮೇರೆಗೆ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ಸುದ್ದಿಲೈವ್ ಗೆ ಮಾತನಾಡಿರುವ ಡಿಎಫ್ ಒ ಪ್ರಸನ್ನ ಕೃಷ್ಣ ಪಟಗಾರ್ ದುಬಾರೆಯಿಂದ ಬಂದ ವೈದ್ಯರ ತಂಡ ಕಿವಿಯನ್ನ ಬೇರ್ಪಡಿಸಿ ಸೂಕ್ತ ಚಿಕಿತ್ಸೆಗೆ ನಿರ್ದೇಶಿಸಿದ್ದಾರೆ. ಅದರಂತೆ ಇಲ್ಲಿನ ವೈದ್ಯರು ಪ್ರತಿದಿನ ಕಾಳಜಿಯಿಂದ ಚಿಕಿತ್ಸೆ ನೀಡುತ್ತಿದ್ದಾರೆ. ಬಾಲಣ್ಣನ ಜೀವಕ್ಕೆ ತೊಂದರೆಯಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
Treatment to the elephant Balanna with ear extraction
