ad

ರಾಗಿಗುಡ್ಡದಲ್ಲಿ ಹಾನಿಗೊಳಗಾದ ವಿಗ್ರಹಗಳ ಜಾಗದಲ್ಲಿಯೇ ದೇವಸ್ಥಾನ ನಿರ್ಮಾಣ ನವೆಂಬರ್ ನಲ್ಲಿ ಉದ್ಘಾಟನೆ- Temple construction to be inaugurated in November

 SUDDILIVE || SHIVAMOGGA

ರಾಗಿಗುಡ್ಡದಲ್ಲಿ ಹಾನಿಗೊಳಗಾದ ವಿಗ್ರಹಗಳ ಜಾಗದಲ್ಲಿಯೇ ದೇವಸ್ಥಾನ ನಿರ್ಮಾಣ ನವೆಂಬರ್ ನಲ್ಲಿ ಉದ್ಘಾಟನೆ-Temple construction to be inaugurated in November on site of damaged idols in Ragigudda

Temple, inauguration


ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿ ಜು.5 ರಂದು ನಡೆದ ಹಿಂದೂ ವಿಗ್ರಹಗಳ ಮೇಲಿನ ಅನ್ಯ ಕೋಮಿನ ಯುವಕ ಮಾಡಿರುವ ದಬ್ಬಾಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾನಿಗೊಳಗಾದ ಪ್ರದೇಶದಲ್ಲಿಯೇ ವಿಜಯ ಗಣಪತಿ ಮತ್ತು ವಾಸುಕಿ ದೇವಸ್ಥಾನ ಉದ್ಘಾಟನೆಗೊಳ್ಳುತ್ತಿದೆ. 

ಈ ಕುರಿತು ಬೆಳಿಗ್ಗೆನೆ ಶಾಸಕ ಚೆನ್ನಬಸಪ್ಪ ನಿರ್ಮಾಣ ಹಂತದಲ್ಲಿರುವ ದೇವಸ್ಥಾನಕ್ಕೆ ಭೇಟಿ ನೀಡಿದರೆ,  ರಾಷ್ಟ್ರಭಕ್ತರ ಬಳಗ ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿದ್ದಾರೆ. 



ನ.2 ಅಥವಾ 3 ರಂದು ದೇವಸ್ಥಾನ ಉದ್ಘಾಟಿಸಲಾಗುತ್ತಿದೆ. ಬಂಗಾರಪ್ಪ ನಿವಾಸದಲ್ಲಿ ಉದ್ಯಾನವದಲ್ಲಿ ಬಿಸಿಲಿನಲ್ಲಿದ್ದ ವಿಗ್ರಹಗಳಿಗೆ ಹಾನಿ ಉಂಟುಮಾಡಲಾಗಿತ್ತು. ಆ ವಿಗ್ರಹಗಳನ್ನ ಹಾನಿಮಾಡಲಾಗಿತ್ತು. ಈಗ ಅದಕ್ಕೆ ಮಾಜಿ ಡಿಸಿಎಂ ಈಶ್ವರಪ್ಪ ಮತ್ತು ಕಾಂತೇಶ್ ದೇವಸ್ಥಾನ ಕಟ್ಟಿಸಿ ಉದ್ಘಾಟಿಸಲಾಗಿದೆ ಎಂದು ರಾಷ್ಟ್ರಭಕ್ತರ ಬಳಗದ ವಿಶ್ವಾಸ್  ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇಂದು ಬೆಳಿಗ್ಗೆ ದೇವಸ್ಥಾನಕ್ಕೆ ಭೇಟಿ ನೀಡಿದ ಶಾಸಕ ಚೆನ್ನಬಸಪ್ಪ ಈ ದೇವಸ್ಥಾನ ನಿರ್ಮಾಣ ಮಾಡುವಲ್ಲಿ ಹಿಂದೂಗಳು ಒಗ್ಗಟ್ಟು ತೋರಿದ್ದಾರೆ. ವಿಜಯ ಗಣಪತಿ ಮತ್ತು ವಾಸಕಿ ದೇವಸ್ಥಾನ ನ.2 ಮತ್ತು 3ವರಂದು ಉದ್ಘಾಟಿಸಲಾಗಿದೆ ಎಂದು ತಿಳಿಸಿದ್ದಾರೆ. 

ಅಲ್ಲಿ ದೇವಸ್ಥಾನದ ಪಕ್ಕದ ಜಾಗದಲ್ಲಿರುವ ಕಟ್ಟಡ ಅನಧಿಕೃತ ಎಂದು ಹೇಳಲಾಗುತ್ತಿತ್ತು ಅದು ಏನಾಯಿತು ಎಂಬ ಪ್ರಶ್ನೆಗೆ ಉತ್ತರಿಸಿದ ರಾಷ್ಟ್ರಭಕ್ತರ ಬಳಗ ಅಂದು ಪಾಲಿಜೆ ಆಯುಕ್ತರ ಗಮನಕ್ಕೆ ತಂದಿದ್ವಿ ನಂತರ ಅದು ಏನಾಯಿತು ಮಾಹಿತಿ ಇಲ್ಲ ಎಂದು ತಿಳಿಸಿದರು. 

Temple construction to be inaugurated in November

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close