ad

ನ್ಯಾಯಾಲಯಕ್ಕೆ ವಂಚನೆ-Fraud to the court

 SUDDILIVE || BHADRAVATHI 

ನ್ಯಾಯಾಲಯಕ್ಕೆ ವಂಚನೆ-Fraud to the court

Fraud, court

ನಕಲಿ ದಾಖಲೆ ಸೃಷ್ಟಿಸಿ ನಕಲಿ ವ್ಯಕ್ತಿಯನ್ನು ಹಾಜರುಪಡಿಸಿ ನ್ಯಾಯಾಲಯಕ್ಕೆ ವಂಚಿಸಿರುವ ಘಟನೆ ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಜುಲೈ ತಿಂಗಳಲ್ಲಿ ಶೌಕತ್ ಎಂಬುವರು ತಮ್ಮ ಇಬ್ಬರೂ ಮಕ್ಕಳಿಗೆ ಜಾಮೀನು ಕೊಡಿಸಲು ನಾಯಲಯಕ್ಕೆ ಹಾಜರಾಗಿ ವಕೀರ ಮೂಲಕ ಒಬ್ಬ ವ್ಯಕ್ತಿಯನ್ನು ಹಾಜರುಪಡಿಸಿ ಈತನೇ ರಂಗನಾಥ್ ಬಿನ್ ನಾರಾಯಣಪ್ಪ 52 ವರ್ಷ ಹೊಸೂರು ಗ್ರಾಮ ಸಾಗರ ತಾಲೂಕು ಮತ್ತು ಸಾಗರ ತಾಲೂಕಿನ ಮರೂರು ಗ್ರಾಮ ಸರ್ವೆ ನಂಬರ್ 100/2 ಆಸ್ತಿಯ ಮೂಲ ಮಾಲೀಕರೆಂದು ಆಧಾರ್ ಕಾರ್ಡ್ ನಂಬರ್ ಹಾಗೂ ಪಹಣಿ ದಾಖಲೆಯನ್ನು ಹಾಜರುಪಡಿಸಿ ಆರೋಪಿಗಳಿಗೆ ಜಾಮೀನು ನೀಡುವಂತೆ ಕೋರಿದ್ದರು.

ಅದರಂತೆ ನ್ಯಾಯಾಲಯವು ಜಾಮೀನು ನೀಡಿ ಸಾಗರ ತಾಲೂಕು ತಹಸಿಲ್ದಾರ್ ಅವರಿಗೆ ಮರೂರು ಗ್ರಾಮದ ಸರ್ವೇ ನಂಬರ್ 100/2 ಮೇಲೆ ಋಣಭಾರ ಸೃಷ್ಠಿಸುವಂತೆ ಆದೇಶಿಸಿ ಪತ್ರ ಬರೆಯಲಾಗಿತ್ತು. ನ್ಯಾಯಲಯದ ಆದೇಶದಂತೆ ತಹಶೀಲ್ದಾರ್ ಅವರು ಒಂದು ಲಕ್ಷ ಋಣ ಭಾರವನ್ನು ಸದರಿ ಜಮೀನಿನ ಮೇಲೆ ಹೇರುತ್ತಿದ್ದಂತೆಯೇ ಅಸಲಿ ರಂಗನಾಥರವರಿಗೆ ಮೆಸೇಜ್ ಮೂಲಕ ಋಣಭಾರತ ಮಾಹಿತಿ ತಲುಪಿತ್ತು

ಇದನ್ನು ನೋಡುತ್ತಿದ್ದಂತೆಯೇ ಅಸಲಿ ರಂಗನಾಥ್ ರವರು ಭದ್ರಾವತಿ ಸಿವಿಲ್ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿ ನ್ಯಾಯಾಲಯಕ್ಕೆ ತನ್ನ ಮಾಲಿಕತ್ವದ ಜಮೀನಿಗೆ ಸುಳ್ಳು ದಾಖಲೆ ಸೃಷ್ಠಿಸಿ ಜಾಮೀನು ಕೊಡಿಸಿದ್ದು ಆರೋಪಿಗಳು ಯಾರೆಂದು ತಿಳಿದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ನ್ಯಾಯಾಲಯ ಮತ್ತೆ ಆರೋಪಿಗಳ ತಂದೆ ಶೌಕತ್ ಮತ್ತು ನ್ಯಾಯಾಲಯಕ್ಕೆ ಪಿಎಸ್ ರಂಗನಾಥ ಎಂದು ಪರಿಚಯಿಸಿದ್ದವರನ್ನ ಹಾಜರು ಪಡಿಸುವಂತೆ ತಿಳಿಸಿದ್ದರೂ ಕಳೆದ ಮೂರು ನಾಲ್ಕು ತಿಂಗಳಿಂದ ಶೌಕತ್ ನ್ಯಾಯಾಲಯಕ್ಕೆ ಹಾಜರುಪಡಿಸಿದ ರಂಗನಾಥ್ ಮತ್ತುಬಾತನ ಮಕ್ಕಳು ಹಾಜರಾಗದ ಹಿನ್ನಲೆಯಲ್ಲಿ ಠಾಣೆಯಲ್ಲಿ ದೂರು ದಾಖಲಾಗಿದೆ.
Fraud to the court

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close