SUDDILIVE || SHIVAMOGGA
ಕವಿಶೈಲದಲ್ಲಿ ಅ.೪ ಮತ್ತು ೫ ರಂದು ಉಪನ್ಯಾಸ ಶಿಬಿರ-Lecture camp on April 4th and 5th at Kavishaila
ಬಳ್ಳಾರಿ, ವಿಜಯನಗರ, ತಮಕೂರು ಹಾಗೂ ಚಿತ್ರದುರ್ಗ ಸೇರಿದಂತೆ ರಾಜ್ಯದ ಗಣಿ ಭಾದಿತ ಪರಿಸರಮತ್ತು ಜನ ಬದುಕಿನ ಪುನಶ್ಚೇತನ ಕ್ಜಾಗಿ ವಿಸ್ತೃತ ಜನಾಂದೋಲನಕ್ಕೆ ಕಾರ್ಯಕರ್ತರಲ್ಲಿ ನಾಯಕತ್ವ ಗುಣ ಬೆಳೆಸುವ ಉದ್ದೇಶದೊಂದಿಗೆ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿ ಕವಿಶೈಲದಲ್ಲಿ ಅ.೪ ಮತ್ತು ೫ ರಂದು ಉಪನ್ಯಾಸ ಶಿಬಿರ ಆಯೋಜಿಸಲಾಗಿದೆ ಎಂದು ಸಮಾಜ ಪರಿವರ್ತನಾ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಎಸ್. ಆರ್. ಹಿರೇಮಠ್ ತಿಳಿಸಿದ್ದಾರೆ.
ಅವರು ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಗಣಿ ಭಾದಿತ ಪ್ರದೇಶದ ಜನರ ಸಶಕ್ತೀಕರಣಕ್ಕಾಗಿ ಮತ್ತು ಕೇಂದ್ರ ಸರ್ಕಾರ ಗಣಿಗಾರಿಕೆ ಅವಕಾಶ ನೀಡಬಾರದೆಂದು ಒತ್ತಾಯಿಸಿ ಆ. ೧೬ ರಂದು ಬಳ್ಳಾರಿಯಲ್ಲಿ ಜನಾಂದೋಲನಗಳ ಮಹಾಮೈತ್ರಿ ಸಿಟಿಜೆನ್ಸ್ ಫಾರ್ ಡೆಮಾಕ್ರಸಿ ಹಾಗೂ ಕರ್ನಾಟಕದ ಇತ್ಯಾದಿ ಸಂಘಟನೆಗಳ ವತಿಂದ ಬೃಹತ್ ಸಮಾವೇಶ ನಡೆಸಲಾಯಿತು. ಈ ಸಮಾವೇಶ ಭಾಗವಾಗಿ ಸತ್ಯಾಗ್ರಹ ದ ತಯಾರಿಕೆ, ಜನಾಂದೋಲನ
ಸಶಕ್ತೀಕರಣಕ್ಕಾಗಿಮತ್ತು ಭವಿಷ್ಯದ ಪೀಳಿಗೆಯ ನಾಯಕತ್ವ ಬೆಳೆಸುವ ಉದ್ದೇಶದೊಂದಿಗೆ ಈ ಶಿಬಿರ ಆಯೋಜಿಸಲಾಗಿದೆ ಎಂದು ವಿವರಿಸಿದರು.
ಪ್ರಸಿದ್ದ ತರಬೇತಿದಾರ ದಿಲೀಪ್ ಕಾಮತ್ ಮಾರ್ಗದರ್ಶನದಲ್ಲಿ ಜಿ.ಎನ್. ಸಿಂಹ ಹಾಗೂ ಜ್ಞಾನ ಸಿಂಧು ಅವರು ಶಿಬಿರ ನಡೆಸಿಕೊಡಲಿದ್ದಾರೆ. ಎರಡು ದಿನಗಳಕಾಲನಡೆಯುವ ಈ ಶಿಬಿರದಲ್ಲಿ ಗಣಿ ಭಾದಿತ ಪರಿಸರ - ಜನ ಬದುಕಿನ ಪುನಶ್ವೇತನ ಹೋರಾಟ ಸಮಿತಿ , ಜನಾಂದೋಲನಗಳ ಮಹಾ ಮೈತ್ರಿ ಸೇರಿದಂತೆ ಇತರೆ ಸಂಘಟನೆಗಳ ನೂರಾರು ಮಂದಿ ಕಾರ್ಯಕರ್ತರು ಇದರಲ್ಲಿ ಪಾಲ್ಗೋಳ್ಳಲಿದ್ದಾರೆಂದು ಅವರು ತಿಳಿಸಿದರು.
ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಒಟ್ಟು ಕಬ್ಬಿಣ ಅದಿರಿನ ಉತ್ಪಾದನೆ ವರ್ಷಕ್ಕೆ ೨೦ ಮಿಲಿಯನ್ ಮೆಟ್ರಿಕ್ ಟನ್ನು ಗಳನ್ನು ದಾಟಬಾರದು,ಈ ಕುರಿತು ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗಡೆ ಅವರು ವರದಿ ಹೇಳಿದಂತೆ ಸಮಾಜ ಪರಿವರ್ತನಾ ಸಮುದಾಯ ಸುಪ್ರೀಂ ಕೋರ್ಟ್ ನಲ್ಲಿ ಕೇಳಿಕೊಂಡಂತೆ ವಾರ್ಷಿಕ ಉತ್ಪಾದನೆ ೨೦ ಮಿಲಿಯನ್ ಮೆಟ್ರಿಕ್ ಟನ್ನುಗಳನ್ನು ಆಗಬೇಕೆನ್ನುವುದಕ್ಕೆ ಕೋರ್ಟ್ ಕೂಡ ಪುರಸ್ಕರಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಅವರು ಒತ್ತಾಯಿಸಿದರು.
ಗಣಿ ಗಾರಿಕೆ ಅನುಮತಿ ನೀಡು ವ ವಿಚಾರದಲ್ಲಿ ಸರ್ಕರಗಳು ಕೋರ್ಟ್ ಸೂಚನೆಗಳನ್ನು ಉಲ್ಲಂಘಿಸುತ್ತಾ ಬರುತ್ತಿವೆ. ಬಳ್ಳಾರಿಭಾಗದಲ್ಲಿ ಹೊಸದಾಗಿ ಗಣಿಗಾರಿಕೆಗೆಅವಕಾಶ ನೀಡಬಾರದು ಎಂದು ಒತ್ತಾಯಿಸುತ್ತಾ ಬಂದಿದ್ದರೂ,ಈಗ ಕೆಐ ಒ ಸಿಎಲ್, ಸಾರಂಗಪಾಣಿ,ಜಿಂದಾಲ್ ಕಂಪನಿಗಳಿಗೆ ಅಕ್ರಮವಾಗಿ ಗಣಿ ಅನುಮತಿ ನೀಡುವ ಹುನ್ನಾರ ನಡೆದಿದೆ. ಎ.ಬಿ.ಸಿ ಮಾದರಿಯಲ್ಲಿ ನೀಡಬೇಕಾಗಿದ್ದಲ್ಲಿ ಸರ್ಕಾರ ಅಮೂಲ್ಗಗೇಮೆಟೆಡ್ ಮಾದರಿಯಲ್ಲಿ ರೆಂಡಮ್ ಆಗಿ ಅನುಮತಿ ನೀಡಲಾಗಿದೆ.ಸಂಡೂರು ಅರಣ್ಯ ಪ್ರದೇಶದ ಸಾವಿರಾರು ಎಕರೆ ಭೂಮಿ ಈಗ ಗಣಿಗೆ ಬಲಿಯಾಗುವ ಆತಂಕಯಿದೆ. ಇದರ ವಿರುದ್ದ ಜನಾಂದೋಲನ ರೂಪಿಸುವ ಉದ್ದೇಶವಿದೆ ಅವರು ಹೇಳಿದರು.
ಇದೇ ವೇಳೆ ಅವರು ಲಾಡಖ್ ಚಳವಳಿಯಲ್ಲಿ ಸಕ್ರೀಯವಾಗಿ ಪರಿಸರ ಹಾಗೂಪ್ರಜಾಪ್ರಭುತ್ವ ಹೋರಾಟಗಾರ ವಾಗ್ಚುಂಕ್ ಅವರನ್ನು ಬಂಧಿಸಿ ಜೋದ್ ಪೂರ್ ಜೈಲಿನಲ್ಲಿ ಟ್ಟಿರುವ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದ ಹಿರೇಮಠ್, ವಾಗ್ಚುಂಕ್ ಅವರನ್ನು ಬಂಧನದಿಂದ ಬಿಡುಗಡೆ ಮಾಡಬೇಕು, ಅವರ ಸಕ್ರಿಯ ಸಹಭಾಗಿತ್ವದಲ್ಲಿ ಕಾರ್ಗಿಲ್ ಸಂಘಟನೆಗಳೊಂದಿಗೆ ಮಾತುಕತೆ ನಡೆಸಬೇಕೆಂದು ಆಗ್ರಹಿಸಿದರು.ಪತ್ರಿಕಾಗೋಷ್ಟಿ ಯಲ್ಲಿ ಸಂಘಟನೆಗಳ ಪ್ರಮುಖರಾದ ಕೆ.ವಿ. ಭಟ್,ಜಿ.ಎನ್. ಸಿಂಹಾ,ಎಂ.ಡಿ. ವಸಂತ್ ಕುಮಾರ್,ವಾಸುದೇವ್ ಕೋಟ್ಯಾನ್ ಇದ್ದರು.
Lecture camp on April 4th and 5th at Kavishaila

