ಪಿಎಸ್ಐಗಳ ವರ್ಗಾವಣೆ-ಸ್ಥಳನಿರೀಕ್ಷಣೆಯಲ್ಲಿ ತಿರುಮಲೇಶ್ ಸೇರಿದಂತೆ 6 ಜನ ಪಿಎಸ್ಐಗಳು-Transfer of PSI - 6 PSI including Tirumalesh on place expectation

 SUDDILIVE || SHIVAMOGGA

ಪಿಎಸ್ಐಗಳ ವರ್ಗಾವಣೆ-ಸ್ಥಳನಿರೀಕ್ಷಣೆಯಲ್ಲಿ ತಿರುಮಲೇಶ್ ಸೇರಿದಂತೆ 6 ಜನ ಪಿಎಸ್ಐಗಳು-Transfer of PSI - 6 PSI including Tirumalesh on place expectation

Transfer, psi


 ಈ ರೀತಿಯ ವರ್ಗವಣೆ ನ್ಯಾಯವೇ? ಶಿವಮೊಗ್ಗ ಜಿಲ್ಲೆಯ 15 ಜನ ಪಿಎಸ್ಐಗಳನ್ನ ವರ್ಗಾವಣೆಗೊಳಿಸಿ ಐಜಿಪಿ ರವಿಕಾಂತೇಗೌಡ ಆದೇಶಿದ್ದಾರೆ. ಅಚ್ಚರಿಯೆಂದರೆ ಪಿಎಸ್ಐ ತಿರುಮಲೇಶ್ ಸೇರಿದಂತೆ 6 ಜನರಿಗೆ ಸ್ಥಳ ನಿರೀಕ್ಷೆ ತೋರಿಸಿ ವಲಯ ಕಚೇರಿ ಐಜಿಪಿ ಕಚೇರಿಗೆ ವರ್ಗಾಯಿಸಲಾಗಿದೆ. 

ದಾವಣಗೆರೆ ಜಿಲ್ಲೆಯ 35 ಜನ ಪಿಎಸ್ಐಗಳನ್ನ ವರ್ಗಾಯಿಸಲಾಗಿದೆ. ಹಾವೇರಿ, ದಾವಣಗೆರೆ, ಚಿತ್ರದುರ್ಗ ಹಾಗೂ ಶಿವಮೊಗ್ಗ ಜಿಲ್ಲೆ ಸೇರಿ ಪೂರ್ವಲಯದ ಐಜಿಪಿಗಳು ವರ್ಗಾವಣೆ ಮಾಡಿ ಆದೇಶಿಸಿದ್ದಾರೆ. ಶಿವಮೊಗ್ಗ ನಗರದ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿದ್ದ ಇಬ್ವರು ಪಿಎಸ್ಐಗಳನ್ನ ಸ್ಥಳ ನಿರೀಕ್ಷೆಯಲ್ಲಿರಿಸಿ ವಲಯ ಐಜಿಪಿ ಕಚೇರಿಯಲ್ಲಿ ಕೆಲಸ ನಿರ್ವಹಿಸಲು ಸೂಚಿಸಿರುವುದು ಅಚ್ಚರಿ ತಂದಿದೆ. 

ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಇದ್ದ ಪಿಎಸ್ಐ ನಾಗರಾಜ್ ಅವರನ್ನು ಹಾವೇರಿ ನಗರ ಪೊಲೀಸ್ ಠಾಣೆಗೆ, ಭದ್ರಾವತಿಯ ಹೊಸಮನೆ ನಲ್ಲಿದ್ದ ಪಿಎಸ್ಐ ಹೆಚ್ಆರ್ ಸಂಗೊಳ್ಳಿ ಅವರನ್ನು ಭದ್ರಾವತಿಯ ಟ್ರಾಫಿಕ್ ಪೊಲೀಸ್ ಠಾಣೆಗೆ, ಶಿಕಾರಿಪುರ ಠಾಣೆಯಲ್ಲಿದ್ದ ಓ ಓ ಡಿ ಪಿಎಸ್ಐ ಅಕ್ಬರ್ ಮುಲ್ಲಾ ಅವರನ್ನು ಶಿವಮೊಗ್ಗ ಪೂರ್ವ ಪೊಲೀಸ್ ಠಾಣೆಗೆ, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿದ್ದ ಸ್ವಪ್ನ ಅವರನ್ನು ಪಶ್ಚಿಮ ಪೂರ್ವ ಸಂಚಾರಿ ಪೊಲೀಸ್ ಠಾಣೆಗೆ,

ತುಂತುಂಗಾ ಪೊಲೀಸ್ ಠಾಣೆಯಲ್ಲಿದ್ದ ಪಿಎಸ್ಐ ಸಿದ್ದಪ್ಪ ಅವರನ್ನು ಭದ್ರಾವತಿಯ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಗೆ, ಭದ್ರಾವತಿಯ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿದ್ದ ಕೃಷ್ಣಕುಮಾರ್ ಮನೆ ಅವರನ್ನು ಭದ್ರಾವತಿಯ ಪೇಪರ್ ಟೌನ್ ಪಿಎಸ್ಐ ಆಗಿ, ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣೆಯ ಕೆ.ಕವಿತಾರನ್ನ ನ್ಯೂಟೌನ್ ಪೊಲೀಸ್ ಠಾಣೆ ಪಿಎಸ್ಐ ಆಗಿ, 

ಮಾಲೂರು ಪೊಲೀಸ್ ಠಾಣೆ ಪಿಎಸ್ಐ ಆಗಿದ್ದ ಶಿವಾನಂದ ಧರೇನವರ್ ಅವರನ್ನ ದಾವಣಗೆರೆಯ ಕೆಟಿಜೆ ನಗರ ಪೊಲೀಸ್ ಠಾಣೆಯ ಪಿಎಸ್ಐಯಾಗಿ, ತೀರ್ಥಳ್ಳಿಯ ಪಿಎಸ್ಐ ಸುನಿಲ್ ಬಿ ಸಿ ಅವರನ್ನು ದಾವಣಗೆರೆಯ ವಿದ್ಯಾನಗರ ಪೊಲೀಸ್ ಠಾಣೆ ಪಿಎಸ್ಐಯಾಗಿ, ಶಿಕಾರಿಪುರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿದ್ದ ಶೋಭಾರಾಣಿ ಕೆಎಸ್ ಅವರನ್ನು ದಾವಣಗೆರೆ ಜಿಲ್ಲೆಯ ನ್ಯಾಮತಿ ಪೊಲೀಸ್ ಠಾಣೆ ಪಿಎಸ್ಐ ಆಗಿ,

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿದ್ದ ಮಲ್ಲಾರಪ್ಪ ಜಿ ವಗ್ಗಣ್ಣವರನ್ನ ಹಾವೇರಿ ನಗರ ಪೊಲೀಸ್ ಠಾಣೆಗೆ, ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿದ್ದ ಸಿದ್ರಾಮಪ್ಪ ಅವರನ್ನ ಶಿವಮೊಗ್ಗ ಪೂರ್ವ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿದ್ದ ನವೀನ್ ಕುಮಾರ್ ಮಠಪತಿಯವರಿಗೆ, ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿದ್ದ ತಿರುಮಲೇಶ್ ಮತ್ತು ಭಭದ್ರಾವತಿಯ ನ್ಯೂಟೌನ್ ಪಿಎಸ್ಐ ಆಗಿದ್ದ ಭಾರತಿ ಎಸ್ಎನ್ ಅವರಿಗೆ ಸ್ಥಳ ತೋರಿಸದೆ ಸ್ಥಳ ನಿರೀಕ್ಷಣೆಯಲ್ಲಿರಿಸಿ ವಲಯ ಕಚೇರಿಗೆ ವರ್ಗಾಯಿಸಲಾಗಿದೆ. 

ಕೆಲ ಪಿಎಸ್ಐಗಳ ವರ್ಗಾವಣೆ ಸಮಂಜಸವಾಗಿದ್ದರೂ ಕೆಲ ಪಿಎಸ್ಐಗಳ ವರ್ಗಾವಣೆ ನ್ಯಾಯೋಚಿತವಾಗಿದೆ. ಕೆಲ ಪಿಎಸ್ಐಗಳ ವರ್ಗಾವಣೆ ಅವರ ಬಿಲ್ಡಪ್ ಮತ್ತು ಆರೋಪಗಳಿಂದಲೇ ಸ್ಥಳ ನಿರೀಕ್ಷಣೆಯಲ್ಲಿರಿಸಲಾಗಿದೆಯಾ ಎಂಬ ಅನುಮಾನಕ್ಕೆ ಕಾರಣವಾಗಿದೆ?

Transfer of PSI - 6 PSI including Tirumalesh on place expectation

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close