SUDDILIVE || SHIVAMOGGA
ಅಡ್ಡ ಬಂದ ನಾಯಿಯನ್ನ ತಪ್ಪಿಸಲು ಹೋಗಿ ಡಿವೈಡರ್ ಗೆ ಡಿಕ್ಕಿ-ವ್ಯಕ್ತಿ ಸಾವು- Man dies after crashing into divider while trying to avoid dog crossing road
ಶಿವಮೊಗ್ಗದ ಲಯನ್ ಸಫಾರಿಯ ಬಳಿ ತಡರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ರಾಹುಲ್ ಯಾನೆ ರಂಗ ಎಂಬುವರು ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ.
ಆಯನೂರು ಕಡೆಯಿಂದ ಶಿವಮೊಗ್ಗದ ಕಡೆ ಬರುತ್ತಿದ್ದ ಇಸುಜು ಲಗೇಜ್ ವಾಹನದಲ್ಲಿ ಬರುತ್ತಿದ್ದಾಗ ಸುಮಾರು 11 ಗಂಟೆಯ ವೇಳೆಯಲ್ಲಿ ಅಡ್ಡ ಬಂದ ನಾಯಿಯನ್ನ ತಪ್ಪಿಸಲು ಹೋಗಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ವಾಹನದಲ್ಲಿ ನಾಲ್ಕೈದು ಜನರಿದ್ದು,
ಅಪಘಾತದಲ್ಲಿ ರಾಹುಲ್ ಯಾನೆ ರಂಗ ಎಂಬುವ 40 ವರ್ಷದ ವ್ಯಕ್ತಿ ಸಾವುಕಂಡಿದ್ದಾರೆ. ಉಳಿದವರಿಗೆ ಗಾಯಗಳಾಗಿವೆ. ರಂಗನಾಥ್ ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದು ವಿನೋಬ ನಗರದ ನಿವಾಸಿ ಎಂದು ತಿಳಿದು ಬಂದಿದೆ. ಶ್ವಾನ ಅಡ್ಡ ಬಂದ ಕಾರಣ ರಂಗನಾಥ್ ಜೀವ ಕಳೆದುಕೊಂಡಿದ್ದಾರೆ.
ರಂಗನಾಥ್ ಅಪಾರ ಸ್ನೇಹ ಬಳಗವನ್ನ ಹೊಂದಿದ್ದಾರೆ. ಘಟನೆ ತುಂಗ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
Man dies after crashing into divider while trying to avoid dog crossing road
