ಭಗವದ್ಗೀತೆ ವಿರೋಧಿಸುವವರು ಚರ್ಚೆಗೆ ಬರಲಿ-Let those who oppose the Bhagavad Gita come to the debate

 SUDDILIVE || SHIVAMOGGA

ಭಗವದ್ಗೀತೆ ವಿರೋಧಿಸುವವರು ಚರ್ಚೆಗೆ ಬರಲಿ-Let those who oppose the Bhagavad Gita come to the debate.

Bhagvadgeetha, debate

ಭಗವದ್ಗೀತೆಗೆ ಮಡಿಯಿಲ್ಲ. ಭಗವದ್ಗೀತ ಎನ್ನುತ್ತಿದ್ದಂತೆ ಒಗ್ಗಟ್ಟು ಪ್ರದರ್ಶಿಸಬೇಕು. ವಿರೋಧ ಮಾಡುವರು ಭಗವದ್ಗೀತೆಯನ್ನ ಒಮ್ಮೆ ಓದಬೇಕು ಎಂದು ಮಾಜಿ ಡಿಸಿಎಂ ಈಶ್ವಪ್ಪ ಸಲಹೆ ನೀಡಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುವೆಂಪು ವಿವಿಯಲ್ಲಿ ಭಗವದ್ಗೀತೆಯನ್ನ ವಿರೋಧಿಸಲಾಯಿತು. ವಿರೋಧಿಸುವವರು ಭಗವದ್ಗೀತೆಯನ್ನ  ಒಮ್ಮೆ ಓದಬೇಕು. ಹಿಂದೂ ಎನ್ನುತ್ತಿದ್ದಂತೆ ವಿರೋಧ ಮಾಡಬೇಕು ಎನ್ನುವರು ಟೀಕಿಸುವ ಸ್ಥಿತಿಗೆ ಬಂದಿದ್ದಾರೆ. ಅವರು ತಿದ್ದಿಕೊಳ್ಳಬೇಕು. ಚರ್ಚೆಗೆ ಬರುವುದಾದರೆ ಬರಲಿ ಎಂದು ಸವಾಲು ಹಾಕಿದರು.

ರಾಜ್ಯದಲ್ಲಿ ಎಲ್ಲೂ ಅಭಿವೃದ್ಧಿಯಿಲ್ಲ. ಎಲ್ಲರೂ ಅಧಿಕಾರಕ್ಕೆ ನೂಕುನುಗ್ಗಲು ಉಂಟಮಾಡಿದ್ದಾರೆ. ಆದಷ್ಟು ಬೇಗ ಈ ಸರ್ಕಾರ ಬಿದ್ದುಹೋಗಲಿದೆ. ನಮ್ಮ ರಾಜ್ಯ ಮತ್ತು ತೆಲಂಗಾಣದಲ್ಲಿ ಮಾತ್ರ ಕಾಂಗ್ರೆಸ್ ದೇಶದಲ್ಲಿದೆ. ಶೀಘ್ರದಲ್ಲಿಯೇ ಕಾಂಗ್ರೆಸ್ ಮುಕ್ತ ಭಾರತವಾಗಲಿದೆ ಎಂದು ಭವಿಷ್ಯ ನಡೆದಿದರು. 

ಗಾಂಧಿಜಿಯ ಕನಸು ನನಸಾಗುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಗಾಂಧಿಜಿ ಕಾಂಗ್ರೆಸ್ ನ್ನ ವಿಸರ್ಜಿಸಿಎಂದಿದ್ದರು. ನೆಹರೂ ಅದನ್ನೇ ಪಕ್ಷ ಮಾಡಿಕೊಂಡರು. ಆದರೆ ಸಿದ್ದರಾಮಯ್ಯ ಡಿಕೆಶಿ ರಾಜ್ಯದಲ್ಲಿ ವಿಸರ್ಜಿಸಲು ಹೊರಟಿದ್ದಾರೆ. ಅದು ವಿಸರಗಜನೆ ಆಗಲಿದೆ.  ಬಿಹಾರದಲ್ಲಿ ಮತಕಳ್ಳತನೆಂದು ಓಡಾಡಿದ ಕಾಂಗ್ರೆಸ್ ಸಿಂಗಲ್ ಡಿಜಿಟ್ ನ ಸ್ಥಾನ ಪಡೆಯಿತು. ನಾಳೆ ಪ.ಬಂಗಾಳದಲ್ಲಿ ಚುನಾವಣೆ ನಡೆಯಲಿದೆ. ಅವರ ಮಿತ್ರ ಪಕ್ಷಗಳು ಭಾರಿ ಮಾತನಾಡುತ್ತಿದ್ದಾರೆ. ಅವರೂ ಸಹ ವಿಪಕ್ಷ ಸ್ಥಾನಕ್ಕೆ ಬರಲಿದ್ದಾರೆ ಎಂದರು. 

ನ. 30: ‌ಶಿವಮೊಗ್ಗದಲ್ಲಿ ಭಗವದ್ಗೀತೆ  ಮಹಾಮರ್ಪಣೆ

ಸ್ವರ್ಣವಲ್ಲೀ ಮಹಾಸಂಸ್ಥಾನ, ಸೋಂದಾ, ಶಿರಸಿ ಇದರ ಪೀಠಾಧೀಶರಾದ  ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಸಂಕಲ್ಪದಂತೆ  ರಾಜ್ಯಮಟ್ಟದ “ಮಹಾಸಮರ್ಪಣೆ” ಯ ಸಮಾರಂಭವು  ನವೆಂಬರ್ 30ರ ಭಾನುವಾರದಂದು ಬೆಳಿಗ್ಗೆ 10:30 ಗಂಟೆಗೆ ಶಿವಮೊಗ್ಗ ನಗರದ ಅಲ್ಲಮಪ್ರಭು ಮೈದಾನ (ಫ್ರೀಡಂ ಪಾರ್ಕ್‌) ನಲ್ಲಿ ನಡೆಯಲಿದೆ.

ಈ ಮಹಾಸಮರ್ಪಣಾ ಸಮಾರಂಭದ ಔದ್ವರ್ಯವನ್ನು  ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರು ವಹಿಸಲಿದ್ದಾರೆ. ಹರಿಹರಪುರಮಠದ  ಜಗದ್ಗುರು ಶಂಕರಾಚಾರ್ಯ  ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳು, ಬೆಕ್ಕಿನಕಲ್ಮಠದ   ಮಲ್ಲಿಕಾರ್ಜುನ ಮುರಘರಾಜೇಂದ್ರ ಮಹಾಸ್ವಾಮಿಗಳು,  ಆದಿಚುಂಚನಗಿರಿ ಶಾಖಾ ಮಠದ ನಾದಮಯನಂದನಾಥ ಮಹಾಸ್ವಾಮಿಗಳು ಶ ಸಾನಿಧ್ಯ ವಹಿಸುವರು.ಸಮಾರಂಭದ ಉದ್ಘಾಟನೆಯನ್ನು ಕೇರಳ ರಾಜ್ಯಪಾಲ  ರಾಜೇಂದ್ರ ವಿಶ್ವನಾಥ ಅರ್ಲೆಕರ್,  ಮಾಡಲಿದ್ದಾರೆ. ಅತಿಥಿಗಳಾಗಿ  ಕೇಂದ್ರ ಶಿಕ್ಷಣ ಸಚಿವ ಧರ್ಮಂದ್ರ ಪ್ರಧಾನ್ ,  ಹೆಚ್.ಡಿ. ಕುಮಾರಸ್ವಾಮಿ,  ಆಗಮಿಸುವರು.

 “ಸ್ವರ್ಣವಲ್ಲೀ ಪ್ರಭಾ” ಇದರ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ,  ಮಧು ಬಂಗಾರಪ್ಪ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು,  ಬಿ.ವೈ. ರಾಘವೇಂದ್ರ ಸಂಸದರು, ಶಿವಮೊಗ್ಗ ಕ್ಷೇತ್ರ,  ಭಾಗವಹಿಸುವರು.

ರಾಜ್ಯ ಮಟ್ಟದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವುದು.  ಅಭಿಯಾನಕ್ಕೆ ಸಂಬಂಧಪಟ್ಟು ಶಿವಮೊಗ್ಗ ಜಿಲ್ಲೆಯಾದ್ಯಂತ ಸರಿಸುಮಾರು 350 ಶಾಲಾ-ಕಾಲೇಜುಗಳಲ್ಲಿ 5ನೇ ತರಗತಿಯಿಂದ 10ನೇ ತರಗತಿ ಹಾಗೂ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಅಂದರೆ ಸರಿಸುಮಾರು 15 ಸಾವಿರ ವಿದ್ಯಾರ್ಥಿಗಳಿಗೆ ಶ್ಲೋಕ ಕಂಠಪಾಠ ಮಾಡಿದ್ದು,  ಇದನ್ನು ಪಠಿಸುವರೆಂದರು.

Let those who oppose the Bhagavad Gita come to the debate.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close